ಆರೋಪಿ ದರ್ಶನ್​ಗೆ ಈ ಟೆಸ್ಟ್​ ಮಾಡಿಸಿದ್ರೆ ಸತ್ಯ ಹೊರಬೀಳುತ್ತೆ: ಸಂಗ್ರಾಮ್ ಸಿಂಗ್​

Untitled design - 2024-06-22T114443.633
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆಕೆಯ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಕೋರ್ಟ್​ ದರ್ಶನ್​ರನ್ನು ಎರಡು ದಿನ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ, ಪವಿತ್ರಾರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿತು. ಇಂದಿಗೆ (ಜೂ.22) ದರ್ಶನ್​ ಎರಡು ದಿನದ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ​ಆದೇಶಕ್ಕಾಗಿ ಇಂದು ಕೋರ್ಟ್​ಗೆ ಹಾಜರುಪಡಿಸಲಾಗುವುದು.

ದರ್ಶನ್​ ಗೆಳತಿ ಪವಿತ್ರಾ ಗೌಡಗೆ ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎಲ್ಲ ಆರೋಪಿಗಳು ಜೈಲುಪಾಲಾಗುವ ಸಾಧ್ಯತೆ ಇದೆ. ಇದೆಲ್ಲದರ ಮಧ್ಯೆ ಆರೋಪಿ ದರ್ಶನ್​ ಬಗ್ಗೆ ಸಾಲು ಸಾಲು ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇನ್ನು ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿವೃತ್ತ ಹಿರಿಯ ಪೊಲೀಸ್​ ಅಧಿಕಾರಿ ಸಂಗ್ರಾಮ್ ಸಿಂಗ್, ದರ್ಶನ್​ಗೆ ಮತ್ತು ಇತರೆ ಆರೋಪಿಗಳನ್ನು ನಾರ್ಕೋ ಅನಾಲಿಸಿಸ್​ ಟೆಸ್ಟ್​ಗೆ ಒಳಪಡಿಸಿದರೆ, ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ.

"ನಾರ್ಕೋ ಅನಾಲಿಸಿಸ್​​ಗೆ ಒಳಪಡಿಸಿದ್ರೆ, ಅವರು ಸತ್ಯ ಬಾಯ್ಬಿಡಬಹುದು. ಇದರಲ್ಲಿ ನಾಲ್ಕರಿಂದ ಐದು ರೀತಿಯ ಟೆಸ್ಟ್​ಗಳಿವೆ. ಇದನ್ನು ಹಿರಿಯ ವೈದ್ಯರು ಅಥವಾ ಅವರ ಆಸ್ಪತ್ರೆಗಳಲ್ಲಿ ನಡೆಸುತ್ತಾರೆ. ಈ ಕೇಸ್​ನಲ್ಲಿ ದರ್ಶನ್​ ಸದ್ಯ ಕಸ್ಟಡಿಯಲ್ಲಿದ್ದಾರೆ. ಒಂದು ಇಂಜೆಕ್ಷನ್ ಕೊಟ್ಟರೆ, ಅದರಲ್ಲಿ ದೊಡ್ಡ ಪ್ರಕ್ರಿಯೆಯೇ ಅಡಗಿದೆ. ಈ ಟೆಸ್ಟ್​ ಮಾಡುವ ಮುನ್ನ ವ್ಯಕ್ತಿಯ ದೇಹದಲ್ಲಿ ಬಿಪಿ, ಹಾರ್ಟ್​ಬೀಟ್ ರೇಟ್​​, ಕಿಡ್ನಿ ಇದೆಲ್ಲವನ್ನು ಪರೀಕ್ಷಿಸಿ, ನಂತರ ಎಷ್ಟು ಪ್ರಮಾಣದಲ್ಲಿ ಕೊಡಬಹುದು ಎಂದು ನಿರ್ಧರಿಸುತ್ತಾರೆ" ಎಂದು 'ವಿಜಯವಾಣಿ' ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ಇದನ್ನು ಕೊಟ್ಟ ಬಳಿಕ ಆ ವ್ಯಕ್ತಿ ಏನೇನೋ ಮಾತನಾಡಲು ಪ್ರಾರಂಭಿಸುತ್ತಾರೆ. ಆಗ ಏನಾಗುತ್ತದೆ ಎಂದರೆ..." ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net