

ಜಗತ್ತಿನಲ್ಲಿ ಎಂಥೆಂಥಾ ವಿಚಿತ್ರ ಜನರಿರುತ್ತಾರೆ ! ಈಗ ನೋಡಿ ಇಲ್ಲೊಬ್ಬ ನಿವೃತ್ತ ಬ್ಯಾಂಕ್ ಉದ್ಯೋಗಿ ಕಳೆದ 32 ವರ್ಷಗಳಿಂದ ಮಳೆ ನೀರನ್ನು ಮಾತ್ರ ಕುಡಿಯುತ್ತಿದ್ದಾರೆ.
ನಿಮಗೂ ಅಚ್ಚರಿಯಾಗುತ್ತಿರಬೇಕಲ್ಲ..! ತೆಲಂಗಾಣದ ಸಂಗಾರೆಡ್ಡಿ ಪಟ್ಟಣದ ಪೊನ್ನಾಡಾ ವಸಂತ್ ಕುಮಾರ್ ಎಂಬುವರು ಮಳೆಗಾಗಿ ಕಾಯುತ್ತಾರೆ. ಕಳೆದ 32 ವರ್ಷಗಳಿಂದಲೂ ಬೇರೆ ಯಾವುದೇ ಮೂಲದ ನೀರನ್ನೂ ಮುಟ್ಟುತ್ತಿಲ್ಲ. ಕೇಳಿದರೆ, ಮಳೆ ನೀರೇ ನನ್ನ ಆರೋಗ್ಯದ ಗುಟ್ಟು ಎನ್ನುತ್ತಿದ್ದಾರೆ. ಇದನ್ನೂ ಓದಿ: ಏರಿಕೆಯಾಗಲಿದೆ ಖೇಲ್‌ರತ್ನ, ಅರ್ಜುನ ಪ್ರಶಸ್ತಿ ಬಹುಮಾನ ಮೊತ್ತ
ಪ್ರತಿವರ್ಷದ ಮಳೆಗಾಲದಲ್ಲಿಯೂ ಒಂದು ವರ್ಷಕ್ಕೆ ಸಾಕಾಗುವಷ್ಟು ನೀರನ್ನು ಸಂಗ್ರಹ ಮಾಡಿಟ್ಟುಕೊಳ್ಳುತ್ತಾರೆ. ತಮ್ಮ ಮನೆಯ ಮೇಲ್ಛಾವಣಿಯಿಂದ ಬೀಳುವ ಮಳೆ ನೀರನ್ನು ಸುಮಾರು ಆರು ಡ್ರಮ್ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆ ಡ್ರಮ್ಗಳು ಅವರ ಮನೆಯ ಬಾಲ್ಕನಿಯಲ್ಲಿ ಇರುತ್ತವೆ. ಮಳೆ ನೀರು ಸಂಗ್ರಹಕ್ಕೆ ಬೇಕಾದ ಸಕಲ ವ್ಯವಸ್ಥೆಗಳನ್ನೂ ಅವರು ಮಾಡಿಕೊಂಡಿದ್ದಾರೆ.
ಮಳೆನೀರನ್ನು ಸರಿಯಾಗಿ ಫಿಲ್ಟರ್ ಮಾಡುತ್ತೇನೆ. ನಂತರ ಅವುಗಳನ್ನು ತಾಮ್ರದ ಪಾತ್ರೆಯಲ್ಲಿ ಸಂರಕ್ಷಿಸಿಟ್ಟುಕೊಳ್ಳುತ್ತೇನೆ. ಕಳೆದ 32 ವರ್ಷಗಳಿಂದಲೂ ಇದನ್ನು ಮಾಡುತ್ತಿದ್ದೇನೆ ಎಂದು ವಸಂತ್ಕುಮಾರ್ ತಿಳಿಸಿದ್ದಾರೆ.
ಮಳೆ ನೀರು ಕುಡಿಯಲು ಶುರು ಮಾಡಿದಾಗಿನಿಂದಲೂ ಒಮ್ಮೆಯೂ ಅನಾರೋಗ್ಯಕ್ಕೆ ಒಳಗಾಗಿಲ್ಲ. ಒಂದು ಔಷಧಿ ತೆಗೆದುಕೊಂಡಿಲ್ಲ. ಸಂಧುನೋವು, ಬಿಪಿ, ಡಯಾಬಿಟಿಸ್ನಂತ ಯಾವುದೇ ರೋಗವೂ ನನಗಿಲ್ಲ. ಮಳೆಗಾಲದಲ್ಲೂ ನನಗೆ ಬೆವರು ಬರುತ್ತದೆ. ಮಳೆ ನೀರೇ ಇದಕ್ಕೆಲ್ಲ ಕಾರಣ. ಅದರಲ್ಲಿರುವ ಎಲ್ಲ ರೀತಿಯ ಖನಿಜಾಂಶಗಳು ನನ್ನ ಆರೋಗ್ಯದ ಗುಟ್ಟು ಎಂದಿದ್ದಾರೆ.