ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದರೆ ಅಪಾಯಕಾರಿ; ಮೂಳೆ ದುರ್ಬಲವಾಗಿರಬಹುದು ಎಚ್ಚರದಿಂದಿರಿ

Untitled-design-42-1
Published on

ದೇಹದಲ್ಲಿನ ಮೂಳೆಗಳು ಜೀವಂತ ಅಂಗಾಂಶವಾಗಿದ್ದು ಅದು ನಿರಂತರವಾಗಿ ಬದಲಾಗುತ್ತಿರುತ್ತವೆ. ಅದರಲ್ಲೂ ಬೆಳೆಯುತ್ತಿರುವ ಮಕ್ಕಳು ಆಡುತ್ತಾರೆ, ಓಡುತ್ತಾರೆ, ಜಿಗಿಯುತ್ತಾರೆ. ಅವರ ಮೂಳೆಗಳು ಬಲಿಷ್ಠವಾಗಿರುವುದು ತುಂಬಾ ಮುಖ್ಯ. ಮಕ್ಕಳಲ್ಲಿ ಮೂಳೆ ಸಂಬಂಧಿತ ಕಾಯಿಲೆಗಳು ಅವರ ಶಕ್ತಿ, ಬೆಳವಣಿಗೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮಗುವಿನ ಮೂಳೆಗಳು ದುರ್ಬಲವಾಗಿದ್ದರೆ ಪೌಷ್ಟಿಕಾಂಶದ ಕೊರತೆ, ವಿಟಮಿನ್ ಡಿ ಕೊರತೆ, ಕೆಲವು ರೋಗಗಳು ಮತ್ತು ದೈಹಿಕ ನಿಷ್ಕ್ರಿಯತೆ ಸೇರಿದಂತೆ ಹಲವು ಕಾರಣಗಳಿರಬಹುದು. ಹಾಗಾದ್ರೆ ಮಕ್ಕಳು ದುರ್ಬಲ ಮೂಳೆಯಿಂದ ಬಳಲುತ್ತಿರುವುದನ್ನು ಕಂಡುಹಿಡಿಯುವುದು ಹೇಗೆ..? ಅದರ ಲಕ್ಷಣಗಳೇನು ಹಾಗೂ ಮೂಳೆ ಬಲಪಡಿಸಲು ಏನು ಮಾಡಬಹುದು ಎಂಬುದರ ಮಾಹಿತಿ ನೀಡಲಾಗಿದೆ.

ಇದನ್ನು ಓದಿ: ಐಸ್​ಬಾತ್​​ನಿಂದ ಎಷ್ಟೆಲ್ಲಾ ಬಿನಿಫಿಟ್ಸ್​​​ ಇದೇ ಗೊತ್ತಾ; ತಿಳಿದ್ರೆ ತಪ್ಪದೆ ನೀವು ಫಾಲೋ ಮಾಡ್ತೀರಾ ಮಕ್ಕಳಲ್ಲಿ ದುರ್ಬಲ ಮೂಳೆಗಳಿದ್ದರೆ ಅದರ ಲಕ್ಷಣ ಹೀಗಿರುತ್ತದೆ:

  • ಮಕ್ಕಳು ಆಗಾಗ್ಗೆ ಮೂಳೆಗಳಲ್ಲಿನ ನೋವು ಅಥವಾ ಊತದ ಬಗ್ಗೆ ಹೇಳುವುದು.
  • ಮಗುವಿನ ದೈಹಿಕ ಬೆಳವಣಿಗೆಯಲ್ಲಿ ವಿಳಂಬ ಕಾಣುವುದು.
  • ಆಗಾಗ್ಗೆ ಗಾಯಗಳಾಗುವುದು ದುರ್ಬಲ ಮೂಳೆಗಳ ಸಂಕೇತವಾಗಿರಬಹುದು.
  • ದುರ್ಬಲ ಮೂಳೆಗಳನ್ನು ಹೊಂದಿರುವ ಮಕ್ಕಳು ಬೇಗನೆ ಸುಸ್ತಾಗಬಹುದು. ಸಾಮಾನ್ಯ ಚಟುವಟಿಕೆಗಳಲ್ಲಿಯೂ ಸಹ ಸುಸ್ತಾಗುತ್ತಾರೆ.
  • ಮಕ್ಕಳು ಆಟ ಆಡುವಾಗ ಓಡಲು ಅಥವಾ ಸಾಮಾನ್ಯವಾಗಿ ನಡೆಯುವಾಗ ಅವರು ತೊಂದರೆ ಅನುಭವಿಸುವುದು.
  • ಅಸಹಜವಾಗಿ ಬಾಗಿದ ಮೂಳೆ
  • ಸ್ನಾಯುಗಳ ದೌರ್ಬಲ್ಯ

ಮೂಳೆಗಳನ್ನು ಬಲಪಡಿಸುವ ಸೂತ್ರ:

  • ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಮಕ್ಕಳು ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳಾದ ಕ್ಲೈಂಬಿಂಗ್ ಅಥವಾ ಪುಷ್ಅಪ್​​ಗಳನ್ನು ಪ್ರತಿದಿನ ಸುಮಾರು 60 ನಿಮಿಷಗಳ ಕಾಲ ಅಥವಾ ವಾರದಲ್ಲಿ 5 ದಿನ ಮಾಡಿಸಬೇಕು.
  • ಕ್ಯಾಲ್ಸಿಯಂ ಭರಿತ ಆಹಾರಗಳ ಸೇವನೆ. ಕ್ಯಾಲ್ಸಿಯಂ ಮಕ್ಕಳ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿವೆ. ರಾಗಿಯನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮಕ್ಕಳ ಆಹಾರಕ್ರಮದಲ್ಲಿ ಇವುಗಳನ್ನು ಸೇರಿಸಿ.
  • ಸೋಡಾ ಅಥವಾ ಕಾರ್ಬೊನೇಟೆಡ್ ಪಾನೀಯಗಳ ಅತಿಯಾದ ಸೇವನೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಮಕ್ಕಳು ಅದರಿಂದ ಅಂತರ ಕಾಪಾಡುವಂತೆ ನೋಡಿಕೊಳ್ಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net