ಮಾಲಿವುಡ್​ ಸ್ಟಾರ್​ ನಟ ಮುಮ್ಮಟ್ಟಿಗೆ ಮಗಳಾಗಿ, ಲವರ್​ ಆಗಿ, ತಾಯಿಯಾಗಿ ನಟಿಸಿದ ಏಕೈಕ ಸ್ಟಾರ್​ ನಟಿ ಈಕೆ! South Actress

South Actress
Published on

South Actress : ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಮಗಳು ಸಹ ಬಾಲ ನಟಿಯಾಗಿ ಮಿಂಚುತ್ತಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ. ಆ ಕಾಲದಲ್ಲಿ ಈಜುಡುಗೆ ತೊಟ್ಟು ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದರು ನಟಿ ಮೀನಾ.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮೀನಾ ಅವರು ತಮ್ಮ ಬಗೆಗಿನ ಅನೇಕ ಈ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲೇ ಬೇರೆ ಯಾವುದೇ ನಟಿಗೆ ಸಿಗದ ಅದೃಷ್ಟ ತನಗೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಒಂದು ವೇದಿಕೆಯಲ್ಲಿ ನಟ ವಿಜಯ್ ಅವರು ನಾನು ಮೀನಾ ಅವರ ಅಭಿಮಾನಿ ಎಂದು ಹೇಳಿದ್ದರು. ಅದನ್ನು ಕೇಳಿದಾಗ ನನಗೆ ತುಂಬಾ ಹೆಮ್ಮೆ ಅನಿಸಿತು. ನಾನು ಅದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು 13ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದೆ. ಆ ಅವಕಾಶ ಸಿಕ್ಕಾಗ ನನ್ನಲ್ಲಿ ಒಂದು ಭಯವಿತ್ತು. ಅಲ್ಲದೆ, ನನ್ನನ್ನು ಸಿನಿಮಾ ರಂಗಕ್ಕೆ ಕಳುಹಿಸಲು ನನ್ನ ತಾಯಿ ಮತ್ತು ತಂದೆಗೂ ಭಯವಿತ್ತು. ಆದರೂ ಧೈರ್ಯ ಮಾಡಿ ಚಿತ್ರರಂಗ ಪ್ರವೇಶಿಸಿದೆ. ಸುಮಾರು 41 ವರ್ಷಗಳಿಂದ ನಟನಾ ಕ್ಷೇತ್ರದಲ್ಲಿದ್ದೇನೆ. ಈ ಅವಧಿಯಲ್ಲಿ ನಾನು ಅನೇಕ ಚಲನಚಿತ್ರಗಳನ್ನು ಮಾಡಿದ್ದೇನೆ ಎಂದು ಮೀನಾ ಹೇಳಿದರು.

ನಾನು ಮದುವೆಯಾದಾಗ, ಇನ್ನು ಮುಂದೆ ನಟಿಸುವುದಿಲ್ಲ ಮತ್ತು ಗೃಹಿಣಿಯಾಗಿ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯಬೇಕಾಗುತ್ತದೆ ಎಂದು ಭಾವಿಸಿದ್ದೆ. ಆದರೆ, ಆ ರೀತಿ ಆಗಲಿಲ್ಲ. ನಾನು ಮತ್ತೆ ನಟನೆಯನ್ನು ಮುಂದುವರೆಸಿದೆ. ಆಗಲೂ ಹೆಚ್ಚಿನ ಅವಕಾಶಗಳು ಬರುತ್ತವೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಕೋವಿಡ್ ಬಂದಾಗ, ಇಡೀ ಜಗತ್ತೇ ಸ್ಥಗಿತಗೊಂಡಿತ್ತು. ಆದರೆ, ಮೋಹನ್ ಲಾಲ್ ಅವರು ಆ ಸಮಯದಲ್ಲೂ ಮಲಯಾಳಂ ಚಿತ್ರರಂಗಕ್ಕೆ ಸೂಪರ್‌ಹಿಟ್ ಸಿನಿಮಾ ನೀಡಿದರು. ದೃಶ್ಯಂ 2 ಚಿತ್ರೀಕರಣ ಮಾಡುವಾಗ ಎಲ್ಲರೂ ಆತಂಕಗೊಂಡಿದ್ದರು. ಲಾಕ್‌ಡೌನ್ ಸಮಯದಲ್ಲಿ ಶೂಟಿಂಗ್ ನಡೆಯಿತು. ನಾನು ಪಿಪಿಇ ಕಿಟ್ ಧರಿಸಿ ಶೂಟಿಂಗ್‌ಗೆ ಹೋಗಿದ್ದೆ ಎಂದು ಮೀನಾ ತಿಳಿಸಿದರು.

ಮೀನಾ ಅವರು ಒರು ಕೊಚು ಕಥಾ ಚಿತ್ರದಲ್ಲಿ ಮಮ್ಮುಟ್ಟಿ ಅವರ ಮಗಳಾಗಿ, ನಂತರ ಅವರ ಗೆಳತಿಯಾಗಿ ಮತ್ತು ಅಂತಿಮವಾಗಿ ಅವರ ತಾಯಿಯಾಗಿಯೂ ನಟಿಸಿದ್ದಾರೆ. ಅವೆಲ್ಲವೂ ಒಳ್ಳೆಯ ನೆನಪುಗಳು. ಅವರು ತಮಿಳಿನಲ್ಲಿ ರಜನಿಕಾಂತ್ ಅವರ ಮಗಳಾಗಿ ಮತ್ತು ಪತ್ನಿಯಾಗಿಯೂ ನಟಿಸಿದ್ದಾರೆ. ತೆಲುಗಿನಲ್ಲೂ ಅದೇ ರೀತಿ ಮಾಡಿದ್ದಾರೆ. ಇದೆಲ್ಲವೂ ಬೇರೆ ಯಾರಿಗೂ ಸಿಗದ ವರದಾನವಾಗಿತ್ತು ಎನ್ನುತ್ತಾರೆ ಮೀನಾ. ಅವರು ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪ್ರವೇಶಿಸಿದರು. ಆ ಸಮಯದಲ್ಲಿ, ಅವರಿಗೆ ಸಿನಿಮಾ ಅಥವಾ ನಟನೆಯ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ಚೆನ್ನಾಗಿ ನಟಿಸಿದರೆ, ಚಾಕೊಲೇಟ್ ನೀಡುವುದಾಗಿ ಭರವಸೆ ನೀಡುವ ಮೂಲಕ ಅನೇಕ ಜನರು ಅವರನ್ನು ನಟಿಸುವಂತೆ ಮಾಡಿದರು ಎಂದು ಮೀನಾ ಇದೇ ಸಂದರ್ಭದಲ್ಲಿ ಹೇಳಿದರು.

ನನ್ನ ಆತುರದ ನಿರ್ಧಾರದಿಂದಾಗಿ ನಾನು ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ತಪ್ಪಿಸಿಕೊಂಡೆ. ಹರಿಕೃಷ್ಣನ್ಸ್ ಚಿತ್ರದಲ್ಲಿ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಜೊತೆ ನಟಿಸುವ ಅವಕಾಶವನ್ನು ಕಳೆದುಕೊಂಡೆ. ಭರತನ್ ಸರ್ ಅವರ 'ಥೇವರ್ ಮಕನ್' ಚಿತ್ರದಲ್ಲೂ ನನಗೆ ನಟಿಸಲು ಸಾಧ್ಯವಾಗಲಿಲ್ಲ ಎಂದು ಮೀನಾ ಹೇಳೀದರು.

ಅನಾರೋಗ್ಯದಿಂದ ಮೀನಾ ಪತಿ ಮರಣ

ಮೀನಾ ಅವರ ಪತಿ ವಿದ್ಯಾಸಾಗರ್​ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net