

ಭಾರತದಲ್ಲಿ ಸಾವಿರಾರು ಲಕ್ಷ ವರ್ಷಗಳಿಂದ ಆಯುರ್ವೇದದ ಔಷಧಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಆಯುರ್ವೇದದಿಂದ ರೋಗಗಳನ್ನು ತಡೆಗಟ್ಟುವುದು ಸುಲಭ ಎಂದು ಸೈನ್ಸ್ ಕೂಡ ಹೇಳುತ್ತದೆ. ಆಯುರ್ವೇದ ಔಷಧಿಯಲ್ಲಿ ತುಳಸಿ ಕೂಡ ಒಂದು. ಇದನ್ನು ಬಳಸುವುದರಿಂದ 100ಕ್ಕೂ ಹೆಚ್ಚು ರೋಗಗಳನ್ನು ತಡೆಯಬಹುದು ಎಂಬುದು ನಿಮಗೆ ಗೊತ್ತಿದೆಯೇ..?
ಹೌದು, ಸೋಂಕುಗಳಿಂದ ನೂರಕ್ಕು ಹೆಚ್ಚು ರೋಗಗಳು ಹರಡುತ್ತದೆ. ಆದರೆ ಸಂಶೋಧನೆಯೊಂದರ ಪ್ರಕಾರ ತುಳಿಸಿ ಬಳಕೆಯು ಯಾವುದೇ ಋತುವಿನಲ್ಲಾದರೂ ಬ್ಯಾಕ್ಟೀರಿಯಾ, ವೈರಲ್ ಮತ್ತು ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಯುಕ್ತಗಳನ್ನು ಒಳಗೊಂಡಿದೆ. ಹಾಗಾದ್ರೆ ತುಳಸಿ ಬಳಕೆಯಿಂದ ಏನೆಲ್ಲಾ ಪ್ರಯೋಜನವಿದೆ. ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.