ವಿಟಮಿನ್​ ಡಿ ಪಡೆಯಲು ಈ ಪದಾರ್ಥಗಳನ್ನು ಸೇವಿಸಿ; ವೆಜಿಟೇರಿಯನ್​​ ಆಹಾರಕ್ರಮ ಇರುವವರಿಗೆ ಇದು ಬೆಸ್ಟ್​

Untitled-design-2024-08-23T194943.791
ಸಾಂದರ್ಭಿಕ ಚಿತ್ರ
Published on

ದೇಹಕ್ಕೆ ವಿಟಮಿಟ್​​ ಡಿ ಬಹಳ ಮುಖ್ಯವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವು ಕಾಯಿಲೆಗಳಿಂದ ನಮ್ಮನ್ನು ದೂರವಿಡುತ್ತದೆ. ಆದ್ದರಿಂದ ವಿಟಮಿನ್​ ಡಿ ಸಮೃದ್ಧವಾಗಿರುವ ಆಹಾರವನ್ನು ನಾವು ಸೇವಿಸಬೇಕು. ನಾನ್​ವೆಜ್​ ತಿನ್ನುವವರಿಗೆ ವಿಟಮಿನ್​ ಡಿ ಲಭ್ಯವಾಗುತ್ತದೆ. ಅಷ್ಟೇ ಸಮಾನವಾಗಿ ಸಸ್ಯಹಾರ ಇಷ್ಟ ಪಡುವವರು ವಿಟಮಿನ್​ ಡಿ ಪಡೆಯುವುದು ಹೇಗೆ.. ಯಾವೆಲ್ಲಾ ಆಹಾರ ನಮಗೆ ಸಹಕಾರಿಯಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

  • ಮಶ್ರೂಮ್: ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಏಕೈಕ ಸಸ್ಯ ಆಧಾರಿತ ಆಹಾರ ಇದಾಗಿದೆ. ಇದನ್ನು ಕೊಳ್ಳುವ ಮುನ್ನ ಬೆಳಸಿರುವ ಬಗ್ಗೆ ತಿಳಿಸುಕೊಳ್ಳಿ. ಏಕೆಂದರೆ ಕತ್ತಲೆಯಲ್ಲಿ ಬೆಳೆದ ಅಣಬೆಗಳು ಸೂರ್ಯನ ಬೆಳಕಿನಲ್ಲಿ ಬೆಳೆದ ಅಣಬೆಗಳಷ್ಟು ವಿಟಮಿನ್ ಡಿ ಅನ್ನು ಹೊಂದಿರುವುದಿಲ್ಲ.
  • ಬಾದಾಮಿ ಹಾಲು: ಇದು ನಿಮ್ಮ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ಪೂರೈಸುತ್ತದೆ. ಬಾದಾಮಿ ಹಾಲಿನಲ್ಲಿ ವಿಟಮಿನ್​ ಡಿ ಜತೆಗೆ ಬಲವರ್ಧಿತ ಕ್ಯಾಲ್ಸಿಯಂ ಕಂಡುಬರುತ್ತದೆ. ಇದರಿಂದ ನಮ್ಮ ಮೂಳೆಗಳು ಬಲಗೊಳ್ಳುತ್ತವೆ.
  • ಅಕ್ಕಿ ಹಾಲು: ಅಕ್ಕಿ ಹಾಲಿನಲ್ಲಿ ಅನೇಕ ಪೋಷಕಾಂಶಗಳು ಇರುತ್ತವೆ. ವಿಟಮಿನ್ ಡಿ ಜತೆಗೆ ವಿಟಮಿನ್ ಎ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶ ಇರುತ್ತದೆ. ಹಲ್ಲುಗಳು ಮತ್ತು ಬಲವಾದ ಮೂಳೆಗಳನ್ನು ಪಡೆಯಲು ಇದು ಸಹಕಾರಿ.
  • ಸೋಯಾ ಹಾಲು: ಒಂದು ಕಪ್ ಸೋಯಾ ಹಾಲಿನಲ್ಲಿ ಸುಮಾರು 2.9 ಎಂಸಿಜಿ ವಿಟಮಿನ್ ಡಿ ಇರುತ್ತದೆ. ಈ ಹಾಲನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
  • ಸೂರ್ಯನ ಬೆಳಕು: ಆಹಾರವಲ್ಲದೆ ಸೂರ್ಯನ ಬೆಳಕು ಅತಿ ಹೆಚ್ಚು ವಿಟಮಿನ್​ ಡಿ ನೀಡುವ ಮೂಲವಾಗಿದೆ. ದಿನವಿಡಿ ಸೂರ್ಯನ ಬೆಳಕಿನಿಂದ ವಿಟಮಿನ್​ ಡಿ ಸಿಗುತ್ತದೆ ಎಂದಲ್ಲ. ವೈದ್ಯರ ಪ್ರಕಾರ ಬೆಳಗ್ಗೆ 9 ಗಂಟೆಯೊಳಗೆ ಬರುವ ಎಳೆ ಬಿಸಿಲಿನಲ್ಲಿ ವಿಟಮಿನ್​ ಡಿ ಲಭ್ಯವಾಗಿತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net