ನೋಡೋಕೆ ಚೆನ್ನಾಗಿದ್ರೆ ಸಾಲದು... ತಾಜಾ, ರುಚಿಯಾದ ಸೇಬು ಖರೀದಿಸಲು ಇಲ್ಲಿದೆ ಸಿಂಪಲ್​ ಟಿಪ್ಸ್​! Apples

Apples
Published on

Apples : ಸೇಬು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿದೆ. ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದೂ ಹೇಳಲಾಗುತ್ತದೆ. ಸೇಬುಗಳು ಪೌಷ್ಟಿಕಾಂಶದ ಕೇಂದ್ರವಾಗಿದ್ದು, ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ.

ಸೇಬಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್​ ಬಿ6, ಥೈಯಾಮಿನ್, ರೈಬೋಫ್ಲಾವಿನ್, ನಿಯಾಸಿನ್​, ಪೈರಿಡಾಕ್ಸಿನ್ ಮತ್ತು ಫೋಲೆಟ್​ ವಿಟಮಿನ್​ಗಳಿವೆ. ಖನಿಜಗಳ ವಿಚಾರಕ್ಕೆ ಬರುವುದಾದರೆ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಫಾಸ್ಫರಸ್​ ಸಮೃದ್ಧವಾಗಿದೆ. ಇದಿಷ್ಟೇ ಅಲ್ಲದೆ, ಸಿಟ್ರಿಕ್, ಮಾಲಿಕ್​ ಹಾಗೂ ಟಾರ್ಟರಿಕ್​ ಆ್ಯಸಿಡ್​ ಹೊಂದಿದೆ. ಸತು, ಕಬ್ಬಿಣ ಮತ್ತು ಮ್ಯಾಂಗನೀಸ್​ ಅಂಶಗಳನ್ನು ಹೊಂದಿದೆ. ಪ್ರಮುಖವಾಗಿ ಸೇಬಿನಲ್ಲಿ ಫೈಬರ್ ಅಂಶ ಹೇರಳವಾಗಿದೆ.

ಸೇಬುಗಳಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸೇಬನ್ನು ಹೆಚ್ಚಿನ ಜನರು ನಿತ್ಯವೂ ಖರೀದಿ ಮಾಡುತ್ತಾರೆ. ಆದರೆ, ಸಾಮಾನ್ಯವಾಗಿ ನಾವು ಖರೀದಿಸುವ ಸೇಬುಗಳು ಕೊಳೆತಿರಬಹುದು ಅಥವಾ ಹಾಳಾಗಬಹುದು. ಕೆಲವೊಮ್ಮೆ ಸಿಹಿಯೂ ಇರುವುದಿಲ್ಲ. ಸೇಬುಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ಆರಿಸಬೇಕೆಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ. ನೀವು ಕೆಲವು ವಿಷಯಗಳ ಮೇಲೆ ಗಮನ ನೀಡಿದರೆ, ಉತ್ತಮ ರುಚಿಯ ತಾಜಾ ಸೇಬುಗಳನ್ನು ಖರೀದಿಸಬಹುದು.

ತೂಕ: ಅಂಗಡಿಯಲ್ಲಿ ಸೇಬುಗಳನ್ನು ಖರೀದಿಸುವಾಗ, ಸಣ್ಣ ಗಾತ್ರದ ಮತ್ತು ಸಾಮಾನ್ಯ ತೂಕದ ಸೇಬುಗಳನ್ನು ನೋಡಿ. ಸೇಬಿನ ತೂಕ ಜಾಸ್ತಿ ಇದೆ ಅಂದರೆ ಅದನ್ನು ಖರೀದಿ ಮಾಡಬೇಡಿ. ಮಾರಾಟಗಾರರು ಸಿಕ್ಕ ಸಿಕ್ಕ ಹಣನ್ನು ಹಾಕಲು ಬಿಡಬೇಡಿ. ಅದರ ಬದಲು ನೀವೇ ಆಯ್ಕೆ ಮಾಡಿ.

ಬಣ್ಣ: ತುಂಬಾ ಕೆಂಪು ಬಣ್ಣದಲ್ಲಿರುವ ಸೇಬನ್ನು ಆರಿಸಬೇಡಿ. ಆದರೆ, ಬಹುತೇಕರು ಮಾಡುವುದು ಇದನ್ನೇ. ಕೆಂಪು ಬಣ್ಣದಿಂದ ಕೂಡ ಸೇಬುಗಳು ಕೆಲವೊಮ್ಮೆ ಒಳಗಡೆ ಹಾನಿಯಾಗಿರಬಹುದು. ಹೀಗಾಗಿ ಕೆಂಪು-ಹಸಿರು ಮಿಶ್ರಿತ ಬಣ್ಣದ ಸೇಬುಗಳನ್ನು ಆಯ್ಕೆ ಮಾಡುವುದು ಯಾವಾಗಲೂ ಉತ್ತಮ. ಇದು ಸಿಹಿ ಮತ್ತು ರುಚಿಯಾಗಿರುತ್ತದೆ.

ಪರಿಶೀಲಿಸಿ: ಸೇಬು ಖರೀದಿಸುವುದಕ್ಕೂ ಮುಂಚೆ ಹಣನ್ನು ಕೈಯಲ್ಲಿ ಹಿಡಿದುಕೊಂಡು ಸುತ್ತಲೂ ಪರೀಕ್ಷೆ ಮಾಡಿ. ಒಂದು ವೇಳೆ ಸೇಬು ಕೆಲವು ಕಡೆ ಮೆತ್ತಗಿರುವುದು ಕಂಡುಬಂದಲ್ಲಿ ಯಾವುದೇ ಕಾರಣಕ್ಕೂ ಅದನ್ನು ಖರೀದಿ ಮಾಡಬೇಡಿ. ಹಣ್ಣಿನ ಮೇಲೆ ಕಪ್ಪು ಚುಕ್ಕಿಗಳಿದ್ದರೆ ಅದನ್ನು ಖರೀದಿ ಮಾಡಬೇಡಿ.

ವಾಸನೆ: ಸೇಬುಗಳನ್ನು ಖರೀದಿಸುವ ಮೊದಲು ಅದರ ವಾಸನೆಯನ್ನು ನೋಡುವುದು ಒಳ್ಳೆಯದು. ಸಿಹಿಯಾದ ಸೇಬುಗಳು ಉತ್ತಮ ವಾಸನೆಯನ್ನು ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net