ಈ ಪಾಕ್​ ಕ್ರಿಕೆಟಿಗನ ಪತ್ನಿ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಭಿಮಾನಿ!

hasan web
Published on

ನವದೆಹಲಿ/ಲಾಹೋರ್​: ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರನೊಬ್ಬನ ಪತ್ನಿಯೂ ಸೇರಿದ್ದಾರೆ. ವಿರಾಟ್​ ಕೊಹ್ಲಿ ತಮ್ಮ ನೆಚ್ಚಿನ ಬ್ಯಾಟ್ಸ್​ಮನ್​ ಎಂದು ಅವರು ಇತ್ತೀಚೆಗೆ ಇನ್​ಸ್ಟಾಗ್ರಾಂ ಪ್ರಶ್ನೋತ್ತರದ ವೇಳೆ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನ ತಂಡದ ಮಧ್ಯಮ ವೇಗಿ ಹಸನ್​ ಅಲಿ ಅವರ ಪತ್ನಿ ಶಮಿಯಾ ಅರ್ಜೂ ಅವರೇ ವಿರಾಟ್​ ಕೊಹ್ಲಿ ಅವರ ಈ ಅಭಿಮಾನಿ. ಭಾರತ ಮೂಲದವರಾಗಿರುವ ಶಮಿಯಾ 2019ರಲ್ಲಿ ದುಬೈನಲ್ಲಿ ಹಸನ್​ ಅಲಿ ಅವರನ್ನು ವಿವಾಹವಾಗಿದ್ದರು. ಮೂಲತಃ ಹರಿಯಾಣದವರಾದ ಶಮಿಯಾ, ದುಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಹಸನ್​ ಅಲಿ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದರು.

ಇತ್ತೀಚೆಗೆ ಇನ್​ಸ್ಟಾಗ್ರಾಂ ಪ್ರಶ್ನೋತ್ತರದ ವೇಳೆ ಕ್ರಿಕೆಟ್​ ಪ್ರೇಮಿಗಳು ಶಮಿಯಾಗೆ ಪ್ರಶ್ನೆಯೊಂದನ್ನು ಎಸೆದಿದ್ದರು. ಅದರನ್ವಯ, ನಿಮ್ಮ ನೆಚ್ಚಿನ ಬೌಲರ್​ ಹಸನ್​ ಅಲಿ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ನಿಮ್ಮ ನೆಚ್ಚಿನ ಬ್ಯಾಟ್ಸ್​ಮನ್​ ಯಾರು ಎಂದು ಕೇಳಿದ್ದರು. ಅದಕ್ಕೆ ಶಮಿಯಾ, ವಿರಾಟ್​ ಕೊಹ್ಲಿ ಎಂದುತ್ತರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net