More

    ಈ ಒಂದು ಕಾರಣಕ್ಕೆ ನಟ ಶಾರುಖ್​ ಖಾನ್​ ಮಹಿಳಾ ಬಾಡಿಗಾರ್ಡ್ಸ್​ ಹೊಂದಿದ್ದಾರಂತೆ!

    ಮುಂಬೈ: ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಲ್ಲಿ ಹೆಚ್ಚಿನ ಅಭಿಮಾನಿಗಳು ಮಹಿಳೆಯರೇ ಆಗಿದ್ದಾರೆ. ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಮತ್ತು ಕುಚ್ ಕುಚ್ ಹೋತಾ ಹೈ ಮುಂತಾದ ರೋಮ್ಯಾಂಟಿಕ್ ಚಿತ್ರಗಳ ಯಶಸ್ಸು ಶಾರುಖ್ ಅವರನ್ನು ಮಹಿಳೆಯರ ಪಾಲಿಹೆ ಲವರ್​​ ಬಾಯ್ ಆಗಿ ಮಾಡಿದೆ. ಹೀಗಾಗಿಯೇ ಶಾರುಖ್​ ಸಾರ್ವಜನಿಕವಾಗಿ ಕಂಡರೆ ಅವರನ್ನು ಹಿಡಿದು ತಬ್ಬಿಕೊಂಡು, ಎಳೆದಾಡಿ ಮುತ್ತು ಕೊಡುವುದಕ್ಕೂ ಮಹಿಳಾ ಅಭಿಮಾನಿಗಳು​ ಹಿಂಜರಿಯುವುದಿಲ್ಲ.

    ಈ ಕಾರಣಕ್ಕೆ ಶಾರುಖ್​ ಅವರು ತಮ್ಮ ಜೊತೆ ಮಹಿಳಾ ಬಾಡಿಗಾರ್ಡ್​ಗಳನ್ನು ನೇಮಿಸಿಕೊಂಡಿದ್ದಾರೆ. ಮಹಿಳಾ ಅಭಿಮಾನಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಹಿಳಾ ಅಂಗರಕ್ಷಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2017 ರಲ್ಲಿ ನಡೆದ ಇಂಡಿಯನ್ ಟುಡೆ ಕಾನ್ಕ್ಲೇವ್‌ನಲ್ಲಿ ಸ್ವತಃ ಶಾರುಖ್​ ಇದನ್ನು ಬಹಿರಂಗಪಡಿಸಿದರು. ಮಹಿಳೆಯರನ್ನು ತಳ್ಳುವ ಪುರುಷ ಅಂಗರಕ್ಷಕರು ಅಸಭ್ಯವಾಗಿ ಕಾಣುತ್ತಾರೆ, ಹೀಗಾಗಿ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಬಾಡಿಗಾರ್ಡ್​ ಹೊಂದಿದ್ದೇನೆ ಎಂದು ಹೇಳಿದರು.

    ಇದನ್ನೂ ಓದಿ: ಒಕ್ಕೂಟ ವ್ಯವಸ್ಥೆ ಮುಖ್ಯ: ರಾಜ್ಯಪಾಲ-ಸಿಎಂ ತಿಕ್ಕಾಟ ಆಡಳಿತಕ್ಕೆ ಅಡಚಣೆ

    ನಾನು ಪಾರ್ಟಿಗೆ ಬರುವಾಗ ಕಾರಿನಲ್ಲಿರುವ ನನ್ನ ಚಿತ್ರಗಳು ಯಾವಾಗಲೂ ಗೊಣಗುತ್ತಿರುತ್ತವೆ. ಇದು ನಿಜಕ್ಕೂ ಭಯಾನಕವಾಗಿದೆ. ನನ್ನನ್ನು ಇಷ್ಟಪಡುವ ಬಹಳಷ್ಟು ಹೆಂಗಸರಿದ್ದಾರೆ. ಆದ್ದರಿಂದ ನನಗೆ ಈಗ ಮಹಿಳಾ ಅಂಗರಕ್ಷಕರಿದ್ದಾರೆ. ನನ್ನನ್ನು ರಕ್ಷಿಸಲು ಪುರುಷರು ಮಹಿಳೆಯರನ್ನು ತಳ್ಳುವಾಗ ಅದು ಅಸಭ್ಯವಾಗಿರುತ್ತದೆ ಎಂದು ಹೇಳಿದ್ದಾರೆ.

    ಸಿನಿಮಾ ವಿಚಾರಕ್ಕೆ ಬಂದರೆ, ಶಾರುಖ್ ಇತ್ತೀಚೆಗೆ ಐದು ವರ್ಷಗಳ ನಂತರ ಭರ್ಜರಿ ಸಾಹಸಮಯ ಸಿನಿಮಾ ಪಠಾನಣ್​ನೊಂದಿಗೆ ದೊಡ್ಡ ಪರದೆಗೆ ಮರಳಿದರು. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿಗಳನ್ನು ಗಳಿಸಿದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. (ಏಜೆನ್ಸೀಸ್​)

    ಕಾಣೆಯಾದ ಹಸು ಹುಡುಕಿಕೊಂಡು ಹೋದ ರೈತನಿಗಾಗಿ ಕಾಡಲ್ಲಿ ಕಾದಿದ್ದ ಜವರಾಯ!

    ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

    ಕೆಸಿಸಿಗೆ ಸುರೇಶ್​ ರೈನಾ ಫಿದಾ: ಟ್ರೋಫಿ ಗೆಲುವಿನ ಬಳಿಕ ಕಿಚ್ಚನಿಗೆ ಧನ್ಯವಾದ ತಿಳಿಸಿದ ರೈನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts