ಐಪಿಎಲ್​ 2021 ಗೆದ್ದ ಸಿಎಸ್​ಕೆ, ಇತರ ತಂಡಗಳಿಗೆ ಸಿಕ್ಕ ಬಹುಮಾನದ ಹಣ ಎಷ್ಟು ಗೊತ್ತಾ?

ipl
Published on

ದುಬೈ/ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್​(ಐಪಿಎಲ್​) 2021 ಪಂದ್ಯಾವಳಿಯಲ್ಲಿ ವಿಜಯಪತಾಕೆ ಹಾರಿಸಿದ ಚೆನ್ನೈ ಸೂಪರ್​ ಕಿಂಗ್ಸ್​(ಸಿಎಸ್​ಕೆ) ತಂಡಕ್ಕೆ 20 ಕೋಟಿ ರೂಪಾಯಿಗಳ ಬಹುಮಾನ ನೀಡಲಾಗಿದೆ. ಅದೇ 27 ರನ್​ಗಳ ಅಂತರದಲ್ಲಿ ಸೋಲನುಭವಿಸಿದ ರನ್ನರ್​ ಅಪ್​ ತಂಡವಾದ ಕೊಲ್ಕತ ನೈಟ್​ ರೈಡರ್ಸ್​ಗೆ 12.5 ಕೋಟಿ ರೂ. ಬಹುಮಾನ ಸಂದಿದೆ.

ಇನ್ನು ಎಲಿಮಿನೇಟರ್​ ಪಂದ್ಯದಲ್ಲಿ ಸೋಲನುಭವಿಸಿದ ರಾಯಲ್​ ಚ್ಯಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಹಾಗೂ ಖ್ವಾಲಿಫೈಯರ್​ 2ನಲ್ಲಿ ಸೋಲನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ತಲಾ 8.75 ಕೋಟಿ ರೂ. ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net