ಸಿಎಂಗಿಂತ ಅವರ ಪತ್ನಿಗೆ ಭದ್ರತೆ ಹೆಚ್ಚು; ಸರ್ಕಾರದ ಖಜಾನೆ ಬರಿದಾಗ್ತಿದೆ ಎಂದು ಆಕ್ರೋಶ...

punjab viral video
Published on

ಪಂಜಾಬ್​​: ಉನ್ನತ ಅಧಿಕಾರಿಗಳು, ರಾಜಕೀಯ ಗಣ್ಯರು, ಉದ್ಯಮಿಗಳಿಗೆ ಸರ್ಕಾರದಿಂದ ಭದ್ರತೆ ನೀಡಲಾಗುತ್ತದೆ.  ಕೆಲವು ನಟ-ನಟಿಯರಿಗೆ ಜೀವ ಬೆದರಿಕೆ ಇದ್ದರೆ ಸರ್ಕಾರ ಭದ್ರತೆ ನಿಯೋಜನೆ ಮಾಡುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ಡಾ. ಗುರುಪ್ರೀತ್ ಕೌರ್ ಅವರ ಭದ್ರತೆಗೆ ಸಂಬಂಧಿಸಿದ ವಿಡಿಯೋವೊಂದು ಇಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?; ಇದು ಪ್ರಧಾನಿ ಅಥವಾ ಮುಖ್ಯಮಂತ್ರಿ ಅಥವಾ ಬಹುಶಃ ಕೇಂದ್ರ ಸಚಿವರ ಬೆಂಗಾವಲು ಎಂದು ನೀವು ಭಾವಿಸಬಹುದು, ಆದರೆ ನೀವು ತಪ್ಪಾಗಿ ಭಾವಿಸುತ್ತೀರಿ. ಇದು ಪಂಜಾಬ್ ಸಿಎಂ ಅವರ ಪತ್ನಿ ಡಾ. ಗುರುಪ್ರೀತ್ ಕೌರ್ ಅವರ ಬೆಂಗಾವಲು ಪಡೆಯಾಗಿದೆ.

ಡಾ. ಗುರುಪ್ರೀತ್ ಚುನಾಯಿತ ಪ್ರತಿನಿಧಿಯೂ ಅಲ್ಲ ಅಥವಾ ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿಲ್ಲ ಆದರೂ ಅವರಿಗೆ ನೀಡಿರುವ ಭದ್ರತೆ ನೋಡಿದ್ರೆ ಯಾರೋ ಉನ್ನತ ಹುದ್ದೆಯಲಲ್ಲಿರುವ ಅಧಿಕಾರಿ ಎಂದು ಅನ್ನಿಸುತ್ತದೆ.

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಂದಾಗಿ ಸಿಎಂ ಪತ್ನಿಗೆ 1-2 ಗನ್‌ಮನ್‌ಗಳು ಇರುವುದು ಸಮರ್ಥನೀಯವಾಗಿದೆ ಎಂಬುದನ್ನು ನಾವು ಗಮನಿಸಬೇಕು. ಆದರೆ ಇಲ್ಲಿ ನೂರಾರು ಗನ್‌ಮೆನ್‌ಗಳನ್ನು ಮತ್ತು ಡಜನ್‌ಗಟ್ಟಲೆ ಭದ್ರತಾ ವಾಹನಗಳನ್ನು ಬಳಸುತ್ತಿದ್ದಾರೆ. 2 ಕೋಟಿ ರೂ.ಗೂ ಅಧಿಕ ಮೌಲ್ಯದ ಸರ್ಕಾರಿ ಬುಲೆಟ್‌ಪ್ರೂಫ್ ಲ್ಯಾಂಡ್ ಕ್ರೂಸರ್​ಗಳನ್ನು ಬಳಸಲಾಗುತ್ತದೆ.

ಚುನಾವಣೆಗೂ ಮುನ್ನ ಕೆಲವು ರಾಜಕೀಯ ನಾಯಕರ ಭದ್ರತೆಯ ಬಗ್ಗೆ ದೊಡ್ಡ ಟೀಕೆಯಾಗಿತ್ತು ಆದರೆ ಈಗ ಅವರ ಕುಟುಂಬವೂ ಅವರಿಗಿಂತ ಹೆಚ್ಚಿನ ಭದ್ರತೆಯನ್ನು ಬಳಸುತ್ತಿದೆ. ಸಿಎಂ ಭಗವಂತ್ ಮಾನ್ ಸ್ಪಷ್ಟವಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪಂಜಾಬ್ ಖಜಾನೆಯನ್ನು ಬರಿದು ಮಾಡುತ್ತಿದ್ದಾರೆ. ಇದು ಇಲ್ಲಿಯ ವಾಸ್ತವವಾಗಿ ಎಂದು ನೆಟ್ಟಿಗರು ಸೋಶಿಯಲ್​​ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net