More

    ಬಾಯ್‌ಫ್ರೆಂಡ್ ಟಾಯ್ಲೆಟ್ ಪೇಪರ್ ಬಳಸಲ್ಲ ಅಂತಾ ಅದನ್ನೇ ನಿಲ್ಲಿಸಿದ ಮಹಿಳೆ!; ಸಿಲ್ಲಿ ಕಾರಣ ಸಾಕಾ? ಎಂದ ನೆಟ್ಟಿಗರು..

    ನವದೆಹಲಿ: ಜನರು ಮಲವಿಸರ್ಜನೆಯ ನಂತರ ತಮ್ಮನ್ನು ಸ್ವಚ್ಛಗೊಳಿಸಲು ನೀರನ್ನು ಬಳಸುತ್ತಾರೆ.  ವಿದೇಶಗಳಲ್ಲಿ ಟಾಯ್ಲೆಟ್ ಪೇಪರ್ ಬಳಸುವುದು  ಅಭ್ಯಾಸವಾಗಿದೆ. ಸೋಂಕು ಸಮಸ್ಯೆಗಳನ್ನು ತಡೆಗಟ್ಟಲು ಅನುಸರಿಸಬೇಕಾದ ನೈರ್ಮಲ್ಯ ಅಭ್ಯಾಸಗಳು. ಅನೇಕರು ಮಲವಿಸರ್ಜನೆಯ ನಂತರದ ಈ ಅಗತ್ಯವನ್ನು ಅನುಸರಿಸಿದರೆ, ಈ ಅಭ್ಯಾಸವನ್ನು ಇಷ್ಟಪಡದ ಕೆಲವೇ ಕೆಲವರು ಇದ್ದಾರೆ.

    ಈ ವೀಡಿಯೊದಲ್ಲಿ ಮಹಿಳೆಯೊಬ್ಬರು ತನ್ನ ಮಾಜಿ ಗೆಳೆಯ ಮಲ ವಿಸರ್ಜನೆಯ ನಂತರ ಟಾಯ್ಲೆಟ್ ಪೇಪರ್ ಬಳಸುವುದಿಲ್ಲ ಎಂದು ಕಂಡುಕೊಂಡಾಗ, ತನ್ನ ಗೆಳೆಯ ಜತೆಗಿನ ಸಂಬಂಧದಲ್ಲಿ ಆಗಿರುವ ಬೀರುಕಿನ ಕುರಿತಾಗಿ ವಿವರಿಸಿದ್ದಾಳೆ.

    ಫ್ಲೋರಿಡಾದ ಟ್ಯಾಂಪಾದಿಂದ ಮಹಿಳೆಯೊಬ್ಬರು ತನ್ನ ಬಾಯ್​​ಫ್ರೆಂಡ್​​ ಮನೆಯ ವಾಶ್‌ರೂಮ್‌ನಲ್ಲಿ ಟಾಯ್ಲೆಟ್ ಪೇಪರ್ ಇರಲಿಲ್ಲ. ಟಾಯ್ಲೆಟ್ ಪೇಪರ್ ತಂದು ಇಟ್ಟಿರು ಎಂದು ಪ್ರಿಯಕರನಿಗೆ ತಿಳಿಸಿದ್ದಳು. ಇನ್ನೊಮ್ಮೆ ಅವನ ಮನೆಗೆ ಹೋದಾಗ ಕೂಡಾ ಟಾಯ್ಲೆಟ್ ಪೇಪರ್ ಇರದೆ ಇರುವುದನ್ನು ಗಮನಿಸಿ ಅವನನ್ನು ಪ್ರಶ್ನೆ ಮಾಡಿದ್ದಾಳೆ. ಆಗ ಅವನು ಖರೀದಿಸಲು “ಮರೆತಿದ್ದೇನೆ” ಎಂದು ಹೇಳುವ ಮೂಲಕವಾಗಿ ತಪ್ಪಿಸಿಕೊಂಡಿದ್ದಾನೆ

    ಮಹಿಳೆ ತನ್ನ ಬಾಯ್​ಫ್ರೆಂಡ್​​ ಜತೆಗೆ ಶಾಪಿಂಗ್​ಗೆ ಹೋಗಿರುತ್ತಾಳೆ. ಆಗ ಪ್ರಿಯಕರನಿಗೆ  ಶೌಚಾಲಯಕ್ಕೆ ಬೇಕಾಗಿರುವ ಟಾಯ್ಲೆಟ್ ಪೇಪರ್ ಖರೀದಿಸು ಎಂದು ಸಲಹೆ ನೀಡುತ್ತಾಳೆ.  “ನಾನು ಟಾಯ್ಲೆಟ್ ಪೇಪರ್ ಬಳಕೆ ಮಾಡುವುದಿಲ್ಲ , ಅದು ನನಗೆ ಇಷ್ಟವಾಗುವುದಿಲ್ಲ” ಎಂದು ಹೇಳಿ ಟಾಯ್ಲೆಟ್ ಪೇಪರ್​ ಖರೀದಿಸಲು ನಿರಾಕರಿಸಿದನು. ಆಶ್ಚರ್ಯಗೊಂಡ ಮಹಿಳೆ, ಹಾಗಿದ್ದರೆ ಟಾಯ್ಲೆಟ್ ಪೇಪರ್ ಬದಲಿಗೆ ಏನು ಬಳಸುತ್ತೀಯಾ ಎಂದು ಕೇಳಿದಾಗ,   ವ್ಯಕ್ತಿ, “ನಾನು ಒದ್ದೆಯಾದ ಒರೆಸುವ ಬಟ್ಟೆಗಳನ್ನು ಬಳಸುತ್ತೇನೆ” ಎಂದು ಹೇಳಿದ್ದಾನೆ. ಈ ಉತ್ತರದಿಂದ ಮಹಿಳೆಗೆ ಮುಜುಗರ ಹಾಗೂ ಅಸಹಯ್ಯ ಉಂಟಾಗಿದೆ.

    ನಂತರ ಮಹಿಳೆ ತನ್ನ ಸಂಗಾತಿಯ ಮನೆಗೆ ಭೇಟಿ ನೀಡಿದಾಗ ಬಳಸಲು ತನ್ನದೇ ಆದ ಟಾಯ್ಲೆಟ್ ಪೇಪರ್ ಅನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಳು. ಗೆಳೆಯ ತಾನು ಪೇಪರ್‌ಗಳನ್ನು ಬಳಸಿದ್ದಕ್ಕಾಗಿ ಅಪಹಾಸ್ಯ ಮಾಡಲು ಪ್ರಾರಂಭಿಸಿದಾಗ, ತನ್ನ ಸಂಬಂಧವು ತಳಮಟ್ಟದಲ್ಲಿದೆ ಎಂದು ಅವಳು ಅರಿತುಕೊಂಡಳು  ನಂತರ ಈ ವಿಚಾರವಾನ್ನು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಬಹಿರಂಗಪಡಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮಹಿಳೆ ವ್ಯಕ್ತಿಯೊಂದಿಗೆ ಸಂಬಂಧ ಮುರಿದು ಮುರಿದುಬಿದ್ದಿದೆ. ಈ ವೀಡಿಯೊವನ್ನು ನೋಡಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಅಸಹ್ಯಕರವಾಗಿದೆ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts