ಈ ನಟಿ ಯಾರು ಹೇಳಿ ನೋಡೋಣ? ...

Harshali - Final
Published on

ಮುಂಬೈ: ಈ ನಟಿಯನ್ನು ಎಲ್ಲೋ ನೋಡಿದ ಹಾಗಿದೆಯಲ್ಲಾ ಎಂಬ ಪ್ರಶ್ನೆಯೊಂದು ಬಂದರೆ ಅದು ಸಹಜ. ಈ ನಟಿಯನ್ನು ನೀವು ನೋಡಿರುವುದಷ್ಟೇ ಅಲ್ಲ, ಆಕೆಗೆ ಫ್ಯಾನ್​ ಆಗಿದ್ದರೂ ಆಶ್ಚರ್ಯವೇನಿಲ್ಲ. ಇಷ್ಟಕ್ಕೂ ಈಕೆ ಯಾರು ಗೊತ್ತಾ? 'ಭಜರಂಗಿ ಭಾಯಿಜಾನ್​'ನ ಮುನ್ನಿ.

ಸಲ್ಮಾನ್​ ಖಾನ್​ ಅಭಿನಯದ 'ಭಜರಂಗಿ ಬಾಯಿಜಾನ್​' ಚಿತ್ರ ಸೂಪರ್​ ಹಿಟ್​ ಆಗುವುದಕ್ಕೆ ಬಾಲನಟಿ ಹರ್ಷಾಲಿ ಮಲ್ಹೋತ್ರಾ ಸಹ ಒಬ್ಬಾಕೆ ಎಂದರೆ ತಪ್ಪಿಲ್ಲ. ಮುನ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹರ್ಷಾಲಿ ತನ್ನ ಮುಗ್ಧ ಅಭಿನಯ ಮತ್ತು ನೋಟದಿಂದ ಎಲ್ಲರ ಗಮನ ಸೆಳೆದಿದ್ದಳು.

ಈ ಚಿತ್ರದಲ್ಲಿನ ಅಭಿನಯಕ್ಕಾಗಿ, ಹರ್ಷಾಲಿ ಮಲ್ಹೋತ್ರಾ ಹಲವು ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಳು. ಅದಾದ ಮೇಲೆ ಕೆಲವು ಟಿವಿ ಕಾರ್ಯಕ್ರಮಗಳು ಮತ್ತು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಳು. ಇತ್ತೀಚಿನ ಒಂದೆರೆಡು ವರ್ಷಗಳಲ್ಲಿ ಹರ್ಷಾಲಿ ಯಾವುದೇ ಸಿನಿಮಾ ಅಥವಾ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿರಲಿಲ್ಲ.

ಈಗ ಆಕೆ ಹೇಗೆ ಕಾಣುತ್ತಾಳೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಹರ್ಷಾಲಿ ಸಾಕಷ್ಟು ದೊಡ್ಡವಳಾಗಿದ್ದಾಳೆ. ಈಗ ಆ ಮುದ್ದು ಬಾಲನಟಿಯಲ್ಲ, ಬೆಳೆದು ಯುವತಿಯಾಗಿದ್ದಾಳೆ. ಇತ್ತೀಚೆಗೆ ಇದೇ ಹರ್ಷಾಲಿ ತನ್ನ ಇನ್​ಸ್ಟಾಗ್ರಾಂ ಅಕೌಂಟ್​ ಮೂಲಕ ಒಂದಿಷ್ಟು ಹೊಸ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಈ ಫೋಟೋಗಳು ಈಗಾಗಲೇ ವೈರಲ್​ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net