More

    ಇಂಥಾ ಕ್ರೇಜ್​ ಸಿಗೋದು RCB ಆಟಗಾರರಿಗೆ ಮಾತ್ರ! ಫ್ಯಾನ್ಸ್​ ಪ್ರೀತಿಗೆ ಸ್ಮೃತಿ ಭಾವುಕ, ವಿಡಿಯೋ ವೈರಲ್​

    ರಾಷ್ಟ್ರೀಯ ತಂಡಗಳಿಗೆ ಆಡುವ ಕ್ರಿಕೆಟಿಗರಿಗೆ ಅಭಿಮಾನಿಗಳು ನೀಡುವ ಗೌರವ ಮತ್ತು ಅವರ ಮೇಲೆ ತೋರುವ ಪ್ರೀತಿ ಬೇರೆ ಮಟ್ಟದಲ್ಲಿಯೇ ಇರುತ್ತದೆ. ಅವರನ್ನು ತುಂಬಾ ಇಷ್ಟಪಡುತ್ತಾರೆ. ಏಕೆಂದರೆ, ಅವರೆಲ್ಲ ರಾಷ್ಟ್ರಕ್ಕಾಗಿ ಆಡುತ್ತಾರೆ. ಆದರೆ, ಫ್ರಾಂಚೈಸಿ ಕ್ರಿಕೆಟ್​ ಇದಕ್ಕೆ ತದ್ವಿರುದ್ಧವಾಗಿದೆ. ಒಬ್ಬ ಆಟಗಾರ ಒಂದೇ ಟೀಮ್​ನಲ್ಲಿ ಆಡಬೇಕು ಎಂಬ ನಿಯಮಗಳು ಲೀಗ್​ಗಳಲ್ಲಿ ಇರುವುದಿಲ್ಲ. ಫ್ರಾಂಚೈಸಿಗೆ ಅಥವಾ ಆಟಗಾರನಿಗೆ ಇಷ್ಟವಿಲ್ಲದಿದ್ದರೆ, ಬೇರೊಂದು ತಂಡಕ್ಕೆ ಹೋಗಬಹುದು. ಲೀಗ್‌ಗಳಲ್ಲಿ ನಿಷ್ಠೆಗೆ ಹೆಚ್ಚು ಮೌಲ್ಯ ಇರುವುದಿಲ್ಲ. ಅಭಿಮಾನಿಗಳು ಕೂಡ ಲೀಗ್​ಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಆದರೆ, ಐಪಿಎಲ್​ನಲ್ಲಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಅಭಿಮಾನಿಗಳು ಮಾತ್ರ ತುಂಬಾ ಡಿಫರೆಂಟ್​.

    ಆರ್​ಸಿಬಿ ಒಮ್ಮೆಯೂ ಟ್ರೋಫಿ ಗೆಲ್ಲದಿದ್ದರೂ ತಮ್ಮ ತಂಡಕ್ಕೆ ಬೆಂಬಲ ನೀಡುವುದನ್ನು ನಿಸ್ವಾರ್ಥದಿಂದ ಮುಂದುವರಿಸಿದ್ದಾರೆ. ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ನಿರಂತರವಾಗಿ ಪ್ರೀತಿ ತೋರಿಸುತ್ತಲೇ ಇದ್ದಾರೆ. ಕೊಹ್ಲಿ ಸಹ ದುಡ್ಡಿಗೆ ಮಣೆ ಹಾಕದೆ ಆರ್​ಸಿಬಿ ಅಭಿಮಾನಿಗಳ ಪ್ರೀತಿಗೆ ಮನಸೋತು ತಂಡದಲ್ಲೇ ಉಳಿದುಕೊಂಡಿದ್ದಾರೆ. ಕೊಹ್ಲಿ ರೀತಿಯಲ್ಲೇ ಆರ್​ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದನಾಗೂ ಅಭಿಮಾನಿಗಳು ತಮ್ಮ ಅಭಿಮಾನವನ್ನು ತೋರುತ್ತಿದ್ದು, ಇದನ್ನು ಕಣ್ಣಾರೆ ಕಂಡು ಸ್ಮೃತಿ ಮಂದಾನ ಅವರೇ ದಂಗಾಗಿದ್ದಾರೆ.

    ಮಹಿಳಾ ಪ್ರೀಮಿಯರ್​ ಲೀಗ್​ 2024 ಇತ್ತೀಚೆಗಷ್ಟೇ ಶುರುವಾಯಿತು. ಈ ಲೀಗ್​ನಲ್ಲಿ ಮೊದಲ ಪಂದ್ಯವಾಡಿದ ಆರ್​ಸಿಬಿ ಕೊನೆಯ ಬಾಲ್​ನಲ್ಲಿ ರೋಚಕ ಜಯ ಸಾಧಿಸಿತು. ಕೊನೆಯವರೆಗೂ ರೋಚಕವಾಗಿ ನಡೆದ ಪಂದ್ಯದಲ್ಲಿ 2 ರನ್‌ಗಳಿಂದ ಆರ್​ಸಿಬಿ ಗೆಲುವು ಸಾಧಿಸಿತು. ಆದರೆ ಈ ಪಂದ್ಯದಲ್ಲಿ RCB ನಾಯಕಿ ಸ್ಮೃತಿ ಮಂದಾನ ಕ್ರೇಜ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

    ಬೆಂಗಳೂರಿನ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಪಂದ್ಯಕ್ಕೂ ಮುನ್ನ ಟಾಸ್ ಸಮಯದಲ್ಲಿ ಸ್ಮೃತಿ ಕಾಮೆಂಟೇಟರ್ ಜೊತೆ ಕೆಲಕಾಲ ಹರಟೆ ಹೊಡೆದರು. ಈ ವೇಳೆ ಆಕೆಯ ಅಭಿಮಾನಿಗಳು ಮಾತನಾಡಲು ಬಿಡಲೇ ಇಲ್ಲ. ಎತ್ತ ನೋಡಿದರೂ ಸ್ಮೃತಿ.. ಸ್ಮೃತಿ ಎಂದು ಜೋರಾಗಿ ಕೂಗುತ್ತಿದ್ದರು. ಅಲ್ಲದೆ, ಆರ್​ಸಿಬಿ…ಆರ್​ಸಿಬಿ ಎಂಬ ಘೋಷಣೆಗಳ ಜತೆಗೆ ಚಪ್ಪಾಳೆಗಳನ್ನು ಸಹ ತಟ್ಟಿದರು. ಅಭಿಮಾನಿಗಳು ತೋರಿದ ಪ್ರೀತಿಗೆ ಭಾವುಕರಾದ ಸ್ಮೃತಿಗೆ ಬಾಯಿಂದ ಮಾತುಗಳೇ ಬರಲಿಲ್ಲ. ನಗುತ್ತಾ ಅಭಿಮಾನಿಗಳತ್ತ ನೋಡಿ ಮಾತನಾಡಲು ಯತ್ನಿಸಿದರು.

    ಮೈದಾನದಲ್ಲಿ ಸ್ಮೃತಿ ಮಂದನಾ ಕ್ರೇಜ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಕೊಹ್ಲಿಗೆ ಆರ್​ಸಿಬಿ ಅಭಿಮಾನಿಗಳು ತೋರುವ ಮಟ್ಟದಲ್ಲೇ ಸ್ಮೃತಿಗೂ ಅಭಿಮಾನ ತೋರುತ್ತಿದ್ದಾರೆ. ಬೆಂಗಳೂರಿನಲ್ಲಿ ವಿರಾಟ್​ಗೆ ಇರುವಷ್ಟು ಕ್ರೇಜ್ ಸ್ಮೃತಿಗೆ ಇದೆ. ನಿಷ್ಠಾವಂತ ಅಭಿಮಾನಿಗಳನ್ನು ಹೊಂದಲು ಅದೃಷ್ಟ ಎಂದು ಕೊಹ್ಲಿ ಮತ್ತು ಸ್ಮೃತಿ ಹೇಳುತ್ತಿದ್ದಾರೆ. ಒಂದೇ ಒಂದು ಟ್ರೋಫಿ ಗೆಲ್ಲದಿದ್ದರೂ ಆರ್‌ಸಿಬಿ ಹಾಗೂ ಆ ತಂಡದ ಆಟಗಾರರ ಮೇಲೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ನಂಬಲಸಾಧ್ಯ. ಮಹಿಳಾ ಕ್ರಿಕೆಟಿಗರಲ್ಲಿ ಸ್ಮೃತಿ ಕ್ರೇಜ್ ಬೇರೆ ಲೆವೆಲ್​ನಲ್ಲಿದೆ ಎಂದು ಹೇಳಲಾಗುತ್ತದೆ. ಸ್ಮೃತಿ ಮಂದಾನ ಕ್ರೇಜ್ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​​)

    ಪ್ರಶಾಂತ್​ ನೀಲ್​ vs ಶಾರುಖ್​ ಖಾನ್​! ಇದು ನಿಜವಾದ ಫೈಟ್​, ಯಾರು ಗೆಲ್ತಾರೆ ಗೆಸ್​ ಮಾಡಿ…

    ಶೂ ಕ್ಲೀನ್​ ಮಾಡಿ ತಿಂಗಳಿಗೆ 1.20 ಲಕ್ಷ ರೂ. ಗಳಿಕೆ! ಬದುಕು ಬದಲಿಸಿತು ಫ್ರೆಂಡ್​ ಸಲಹೆ, ಯೂಟ್ಯೂಬ್​ ಪಾಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts