

Victoria: ವಿಕ್ಟೋರಿಯಾ ಫ್ಲೈಯಿಂಗ್ ಕ್ಲಬ್‌ನಲ್ಲಿ ಸಣ್ಣ ವಿಮಾನವನ್ನು ಕದ್ದು ಪೈಲಟ್ ಪರಾರಿಯಾಗಿದ್ದ. ಈ ಘಟನೆಯಿಂದ ಹಲವು ವಿಮಾನಗಳ ಹಾರಾಟಗಳೂ ಕೂಡ ರದ್ದಾಗಿದ್ದು, ನಂತರ ಪೈಲಟ್ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದ ನಂತರ ಆತನನ್ನು ಬಂಧಿಸಿದ ಘಟನೆ ಕೆನಡಾದಲ್ಲಿ ನಡೆದಿದೆ.
ಒಬ್ಬ ಪೈಲಟ್ ಹಾರಿಸಬಹುದಾದ ಸಣ್ಣ ಸೆಸ್ನಾ 172 ವಿಮಾನವನ್ನು ಕಳ್ಳತನ ಮಾಡಲಾಗಿತ್ತು. ಹೈಜಾಕ್ ಆಗಿರುವ ವಿಮಾನ ಕೆನಾಡ ಗಡಿ ಪ್ರವೇಶಿಸಿರುವ ಮಾಹಿತಿ ದೊರೆತ ನಂತರ ಪೊಲೀಸರು ಮತ್ತು ಏರ್‌ಪೋರ್ಟ್ ಸಿಬ್ಬಂದಿ ಅಲರ್ಟ್ ಆಗಿ, ವಿಮಾನ ಲ್ಯಾಂಡ್ ಆಗುವ ಮುನ್ನವೇ ಏರ್ಪೋರ್ಟ್ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿತ್ತು. ಮುಂಜಾಗ್ರತ ಕ್ರಮವಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.
ಹೈಜಾಕ್ ಅಗಿರುವ ಸಣ್ಣ ವಿಮಾನವೊಂದು ವ್ಯಾಂಕೋವರ್ ಏರ್‌ಪೋರ್ಟ್‌ನತ್ತ ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ವ್ಯಾಂಕೋವರ್‌ಗೆ ಬರಬೇಕಿದ್ದ ಒಂಬತ್ತು ವಿಮಾನಗಳನ್ನು ಬೇರೆ ನಿಲ್ದಾಣಕ್ಕೆ ತಿರುಗಿಸಲಾಗಿತ್ತು. ಇಲ್ಲಿಂದ ಟೇಕಾಫ್ ಆಗಿದ್ದ ವಿಮಾನಗಳ ಸಮಯವನ್ನು ಮುಂದೂಡಿಕೆ ಮಾಡಲಾಗಿತ್ತು. ವಿಮಾನ ನಿಲ್ದಾಣ ಮತ್ತು ಪಶ್ಚಿಮ ಕರಾವಳಿ ನಗರದಾದ್ಯಂತ ಹೈ ಅಲರ್ಟ್‌ನಲ್ಲಿತ್ತು. ಕೆಲವು ಗಂಟೆಗಳ ನಂತರ ಮಾತ್ರ ಇತರ ವಿಮಾನಗಳು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಅನುಮತಿ ನೀಡಲಾಗಿದೆ. ಕೆಲ ಸಮಯ ವ್ಯಾಂಕೋವರ್‌ಗೆ ನಿಲ್ದಾಣದಲ್ಲಿ ಆತಂಕದ ವಾತಾವಾರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 1:45 ಕ್ಕೆ ವಿಮಾನವು YVR ನಲ್ಲಿ ಸುರಕ್ಷಿತವಾಗಿ ಇಳಿಯಿತು, ಅಧಿಕಾರಿಗಳು ಶಂಕಿತನನ್ನು ಬಂಧಿಸಿದರು. (ಏಜೆನ್ಸೀಸ್)