More

    ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!

    ಭಿಕಾರಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು!ಪಾಕಿಸ್ತಾನಕ್ಕೆ ಜೈಕಾರದ ಘೊಷಣೆಗಳು ರಾಜ್ಯದೆಲ್ಲೆಡೆ ಮೊಳಗುತ್ತಿವೆ. ಕಾಂಗ್ರೆಸ್ಸಿನ ಗೆಲುವಿನ ಹಿನ್ನೆಲೆಯಲ್ಲಿ ಈ ಘೊಷಣೆಗಳು ಎನ್ನುವುದು ನಿಜವಾದರೂ ಒಂದಷ್ಟು ಮುಸಲ್ಮಾನರ ಮಾನಸಿಕ ಸ್ಥಿತಿ ಬಹಳ ಕಾಲದಿಂದಲೂ ಹೀಗೆಯೇ ಇದೆ. ಎಡಪಂಥೀಯ ಬುದ್ಧಿಜೀವಿಗಳು, ಮುಸಲ್ಮಾನ ಪರ ಕೆಲವು ಹಿಂದೂ ಸಂಘಟನೆಗಳು ಮತ್ತು ಸ್ವತಃ ಮುಸಲ್ಮಾನರೊಂದಷ್ಟು ಜನ ಈ ಚಿಂತನೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಆದರೆ, ಅವರಿಗೆ ಸದ್ಯದ ಪಾಕಿಸ್ತಾನದ ಪರಿಸ್ಥಿತಿ ಎಂಥದ್ದಿದೆ ಎಂಬುದರ ಅರಿವು ಇರಲಿಕ್ಕಿಲ್ಲ. ಅಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಜನ ಮತ್ತು ಸೇನೆಯ ನಡುವೆ ಕಾದಾಟ ಶುರುವಾಗಿದೆ.

    ಯಾವ ಸೇನೆಯ ವಿಶ್ವಾಸದಿಂದಲೇ ಭಾರತವನ್ನು ಎದುರಿಸುತ್ತೇವೆಂದು ಪಾಕಿಸ್ತಾನಿಗಳು ಹೇಳುತ್ತಿದ್ದರೋ ಇಂದು ಅದೇ ಸೇನೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಘರ್ಷಣೆ ಎಲ್ಲಿಗೆ ಹೋಗಿ ನಿಲ್ಲುವುದೋ ತಿಳಿದಿಲ್ಲ ನಿಜ. ಆದರೆ, ಪಾಕಿಸ್ತಾನವೇ ಚೂರು-ಚೂರಾಗಿ ತನ್ನ ಅಸ್ತಿತ್ವ ಕಳೆದುಕೊಂಡರೂ ಅಚ್ಚರಿಯಿಲ್ಲ. 1971ರಲ್ಲಿ ಪಾಕಿಸ್ತಾನವನ್ನು ಎರಡು ತುಂಡು ಮಾಡಿದ ಇಂದಿರಾಗೆ ಸಿಕ್ಕ ಗೌರವದ ನೂರ್ಪಟ್ಟು ಪಾಕಿಸ್ತಾನವನ್ನು ನಾಲ್ಕು ಚೂರು ಮಾಡುವ ಮೋದಿಗೆ ಸಿಕ್ಕರೂ ಸಿಗಬಹುದು. ಪಾಕಿಸ್ತಾನವೇ ಬಲೂಚಿಸ್ತಾನ, ಸಿಂಧ್, ಪಂಜಾಬು, ಕಾಶ್ಮೀರವೆಂದು ನಾಲ್ಕು ಭಾಗಗಳಾಗಿ ವಿಭಜನೆಗೊಂಡರೆ ಇವರು ಜೈಕಾರ ಹಾಕುವ ಪಾಕಿಸ್ತಾನಕ್ಕೆ ಅಸ್ತಿತ್ವವೇ ಇರುವುದಿಲ್ಲ. ಮುಸಲ್ಮಾನರನ್ನು ಈ ದಿಕ್ಕಿನಲ್ಲಿ ಭಡಕಾಯಿಸಿ ಅವರಿಂದ ಜೈಕಾರ ಹೇಳಿಸುವ ಮಂದಿ, ನಾಳೆಯ ದಿನ ಅಸ್ತಿತ್ವವೇ ಇಲ್ಲದ ಪಾಕಿಸ್ತಾನದ ಕಾರಣಕ್ಕೆ ಇವರೆಲ್ಲ ಅತಂತ್ರರಾಗುವುದನ್ನು ನೋಡಿ ನಗಲಿರುವುದಂತೂ ಸತ್ಯ.

    ಪಾಕಿಸ್ತಾನದ ದುರಂತ ಪರ್ವ ಆರಂಭವಾಗಿದ್ದು ಮೋದಿ ಆಗಮನದ ನಂತರವೇ. ಅಲ್ಲಿಯವರೆಗೂ ಭಾರತದಲ್ಲಿ ಎಲ್ಲೆಂದರಲ್ಲಿ ಬಾಂಬ್ ಸ್ಪೋಟಗಳನ್ನು ಮಾಡಿಸುತ್ತಿದ್ದ ಪಾಕಿಸ್ತಾನ ಏಕಾಕಿ ದಿಗ್ಬಂಧನಕ್ಕೆ ಒಳಗಾಯ್ತು. ಭಾರತೀಯ ಬೇಹುಗಾರಿಕೆ ಎಷ್ಟು ಚುರುಕಾಯ್ತೆಂದರೆ ಕಾಶ್ಮೀರದಲ್ಲಿ ಕಂಡ-ಕಂಡಲ್ಲಿ ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಯ್ತು. ಬುರ್ಹನ್ ವನಿಯಂಥವರನ್ನು ಹುಚ್ಚುನಾಯಿಗಿಂತಲೂ ಕಡೆಯಾಗಿ ಕೊಲ್ಲಲಾಯ್ತು. ಅವನ ಶವವನ್ನು ಮನೆಯವರಿಗೆ ಕೊಟ್ಟು ಶವಯಾತ್ರೆಗೆಂದು ಬಂದಿದ್ದ ಮತ್ತಷ್ಟು ಭಯೋತ್ಪಾದಕ ನಾಯಕರನ್ನು ಹಿಂಬಾಲಿಸಿಕೊಂಡು ಹೋಗಿ ಕಾಶ್ಮೀರದ ಕೊಳ್ಳವನ್ನು ಇವರಿಂದ ಮುಕ್ತಗೊಳಿಸಲಾಯ್ತು. ಅತ್ತ ಬುರ್ಹನ್​ವನಿಯ ಸಾವನ್ನು ಕಂಡು ಬೆದರಿದ ಹೊಸ ಪೀಳಿಗೆಯ ತರುಣರು ಭಯೋತ್ಪಾದನೆಯಿಂದ ದೂರ ಉಳಿಯಲು ನಿಶ್ಚಯಿಸಿದರು. ಪಾಕ್ ಸೇನೆಗೆ ಸಿಗಬಹುದಾಗಿದ್ದ ಕಚ್ಚಾ ವಸ್ತುಗಳೇ ಇಲ್ಲವಾದಮೇಲೆ ಸಂಕಟ ಎರಗಿದ್ದಂತೂ ನಿಜ. ನಿಧಾನವಾಗಿ ಕಾಶ್ಮೀರ ಶಾಂತವಾಯ್ತು, ದೇಶವೂ ಕೂಡ. ಅತ್ತ ಪಾಕಿಸ್ತಾನದಲ್ಲಿ ನಿಧಾನವಾಗಿ ಅಸಹನೆ ಆರಂಭವಾಯ್ತು. ಭಾರತವನ್ನು ಅಶಾಂತವಾಗಿರಿಸಲೆಂದೇ ವಿದೇಶೀ ಹೂಡಿಕೆಯನ್ನು ಪಡೆಯುತ್ತಿದ್ದ ಪಾಕಿಸ್ತಾನಕ್ಕೆ ಈಗ ಬಲುದೊಡ್ಡ ಸಂಕಟ. ನೋಡ-ನೋಡುತ್ತಲೇ ಅವರ ವಿದೇಶೀ ವಿನಿಮಯ ಬರಿದಾಗುತ್ತಾ ಹೋಯ್ತು. ಮೋದಿ ಸರ್ಕಾರದ ನಿರಂತರ ಪ್ರಯಾಸದಿಂದಾಗಿ ಐಎಂಎಫ್, ವಿಶ್ವ ಬ್ಯಾಂಕುಗಳು ಸಾಲ ಕೊಡುವುದನ್ನು ನಿಲ್ಲಿಸಿದವು. ಈ ಹೊತ್ತಿನಲ್ಲಿಯೇ ಭುಟ್ಟೋ ಮತ್ತು ಶರೀಫ್ ಕುಟುಂಬಗಳ ರಾಜಕಾರಣದಿಂದ ಬೇಸತ್ತಿದ್ದ ಸೇನೆಗೆ ಹೊಸ ಮುಖವೊಂದನ್ನು ಪಟ್ಟಕ್ಕೆ ಕೂರಿಸುವ ಆತುರವಿತ್ತು. ಆಗ ಕಣ್ಮುಂದೆ ಬಂದವರು ಇಮ್ರಾನ್ ಖಾನ್. ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್ ಪಕ್ಷವನ್ನು ಕಟ್ಟಿಕೊಂಡು ಓಡಾಟ ನಡೆಸುತ್ತಿದ್ದ ಅವರು ಪರಿವಾರ ರಾಜಕಾರಣಕ್ಕೆ ಸಡ್ಡು ಹೊಡೆಯುವುದಾಗಿ ಸೇನೆಗೆ ಭರವಸೆ ಕೊಟ್ಟು ಮುನ್ನುಗ್ಗಿದರು. 2018ರಲ್ಲಿ ಚುನಾವಣೆ ನಡೆದಾಗ ಇಮ್ರಾನ್ ಖಾನ್​ಗೆ ಎಲ್ಲ ಬಗೆಯ ಸಹಕಾರವನ್ನು ಕೊಟ್ಟಿದ್ದು ಸೇನೆಯೇ. ಅವರು ಚುನಾವಣೆ ಗೆದ್ದು ಅಲ್ಪ ಬಹುಮತದೊಂದಿಗೆ ಪಾಕಿಸ್ತಾನದ ಚುಕ್ಕಾಣಿ ಹಿಡಿದುಬಿಟ್ಟರು. ಆಗ ಸೇನೆಯ ಮುಖ್ಯಸ್ಥ ಕಾಶ್ಮೀರ ವಿಚಾರದಲ್ಲಿ ವಿಶೇಷವಾದ ಪರಿಣತಿ ಹೊಂದಿದ್ದ ಜನರಲ್ ಕಮರ್ ಬಾಜ್ವಾ. ಇವರೀರ್ವರ ಸಂಬಂಧ ಎಷ್ಟು ಬಲವಾಗಿತ್ತೆಂದರೆ ನ್ಯೂಯಾರ್ಕ್ ಟೈಮ್ಸ್​ಗೆ ನೀಡಿದ ಸಂದರ್ಶನವೊಂದರಲ್ಲಿ ಇಮ್ರಾನ್, ‘ನಾನು ಗೆಳೆತನವಿಟ್ಟುಕೊಂಡಿರೋದು ಪಾಕಿಸ್ತಾನೀ ಸೇನೆಯೊಂದಿಗೆ, ಶತ್ರು ಸೇನೆಯೊಂದಿಗಲ್ಲ. ನಾವು ಜೊತೆಗೂಡಿಯೇ ನಡೆಯುತ್ತೇವೆ’ ಎಂದಿದ್ದರು. ಪಾಕಿಸ್ತಾನದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಬಾಜ್ವಾರೆ ಕಾರಣ ಎಂದು ಹೇಳುವುದಕ್ಕೆ ಅವರು ಹಿಂಜರಿಯಲಿಲ್ಲ. ಅಧಿಕಾರ ಪಡೆದೊಡನೆ ‘ಒಂದೇ ಪುಸ್ತಕದ ಒಂದೇ ಪುಟದಲ್ಲಿ ನಾವಿಬ್ಬರೂ ಇದ್ದೇವೆ’ ಎಂದು ತಮ್ಮ ಚಟುವಟಿಕೆಗಳನ್ನು ಸಮರ್ಥಿಸಿಕೊಂಡಿದ್ದರು. 2020ರಲ್ಲಿ ಅಲ್​ಜಝೀರಾದೊಂದಿಗೆ ಮಾತನಾಡುತ್ತಾ ‘ಸೇನೆ ಮತ್ತು ಸರ್ಕಾರದ ಸಂಬಂಧಗಳು ಬಲು ಸೌಹಾರ್ದಯುತವಾಗಿದೆ’ ಎಂದಿದ್ದರು. ಸೇನೆಯೂ ಆಗ ಎಲ್ಲ ಅಧಿಕಾರವನ್ನು ಮುಕ್ತವಾಗಿ ಅನುಭವಿಸಿತು. ಅನೇಕ ಸರ್ಕಾರಿ ನಿರ್ಣಯಗಳಲ್ಲೂ ಅವರು ಮೂಗು ತೂರಿಸುತ್ತಿದ್ದುದು ಸಾಮಾನ್ಯವಾಗಿತ್ತು. ಇದರ ಹಿಂದೆ ಬಿದ್ದ ಇಮ್ರಾನ್ ಆಡಳಿತವನ್ನು ಕಡೆಗಣಿಸಿದರು. ಪರಿಣಾಮ ಕೋವಿಡ್ ಸಂದರ್ಭದಲ್ಲಿ ಜನ ಹಾಹಾಕಾರ ಪಡುವಂತಾಯ್ತು. ಪಾಕಿಸ್ತಾನದ ಆರ್ಥಿಕ ಸ್ಥಿತಿಯೂ ಹದಗೆಟ್ಟು ಅದನ್ನು ಹಳಿಗೆ ತರುವಲ್ಲಿ ಇಮ್ರಾನ್ ಸೋತುಹೋದರು. ಜನರ ಅರಚಾಟ ಆರಂಭವಾಯ್ತು. ಇಮ್ರಾನ್ ಮೇಲಿದ್ದ ಆಕ್ರೋಶವೆಲ್ಲ ಸ್ವಲ್ಪಮಟ್ಟಿಗೆ ಸೇನೆಯತ್ತಲೂ ತಿರುಗಿತು. ಪದವಿಯಲ್ಲಿ ಬೇರೆಯವರನ್ನು ತಾನೇ ಕೂರಿಸಿ ಹಿಂದಿನಿಂದ ಅಧಿಕಾರ ನಡೆಸುವ ಪಾಕ್ ಸೇನೆ ಎಂದೂ ಜನರ ಬೈಗುಳವನ್ನು ತಿಂದಿರಲಿಲ್ಲ. ಅದಕ್ಕೆ ಎದುರಿಗೆ ಅಧ್ಯಕ್ಷನೋ ಪ್ರಧಾನಿಯೋ ಇರುತ್ತಿದ್ದ. ಇಮ್ರಾನ್ ಥೇಟು ಕೇಜ್ರಿವಾಲರಂತೆ. ಎಷ್ಟು ಬೇಕಾದರೂ ನಾಟಕಗಳನ್ನು ಮಾಡಬಲ್ಲರು, ಯಾರ ಮೇಲಾದರೂ ಗೂಬೆ ಕೂರಿಸಬಲ್ಲರು, ಒಟ್ಟಿನಲ್ಲಿ ತಾನು ಗೆಲ್ಲಬೇಕಷ್ಟೇ! ಹೀಗಾಗಿಯೇ ಅವರ ಮೇಲಿದ್ದ ಆಕ್ರೋಶವೆಲ್ಲ ಸೇನೆಯ ವಿರುದ್ಧ ತಿರುಗಿತು. ತಡಮಾಡದೇ ಸೇನೆ ಇಮ್ರಾನರೊಂದಿಗಿದ್ದ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟಿತು. ಅಲ್ಲಿಗೆ ಇಮ್ರಾನ್ ಮತ್ತು ಸೇನೆ ಯುದ್ಧಕ್ಕೆ ನಿಂತರು. ಈ ವೇಳೆಗೆ ಜನರಲ್ ಬಾಜ್ವಾ ನಂತರ ಫೈಜ್ ಹಮೀದ್​ರನ್ನು ಆ ಸ್ಥಾನಕ್ಕೆ ತರಬೇಕೆಂದು ಇಮ್ರಾನ್ ನಿಶ್ಚಯಿಸಿಕೊಂಡಿದ್ದರು. ಅದಕ್ಕಾಗಿ ಆತನನ್ನು ಐಎಸ್​ಐನ ನಿರ್ದೇಶಕನಾಗಿ ಮುಂದುವರಿಸಬೇಕೆಂದೂ ಆಗ್ರಹಿಸಿದ್ದರು. ಆದರೆ, ಬಾಜ್ವಾ ಹಮೀದ್​ರನ್ನು ಪಕ್ಕಕ್ಕೆ ಸರಿಸಿ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಂರನ್ನು ಕೂರಿಸಿದರು. ಇದು ಸೇನೆ ಮತ್ತು ಇಮ್ರಾನ್ ನಡುವಿನ ಕಾದಾಟವನ್ನು ತೀವ್ರಗೊಳಿಸಿತು. ಸಾಲದೆಂಬಂತೆ ರಷ್ಯಾ-ಯೂಕ್ರೇನ್ ಯುದ್ಧದ ಹೊತ್ತಲ್ಲಿ ಪಶ್ಚಿಮದ ಒತ್ತಡಕ್ಕೆ ಮಣಿದು ರಷ್ಯಾ ವಿರೋಧಿಸುವ ನಿರ್ಣಯ ಕೈಗೊಳ್ಳಲಾರೆನೆಂದು ಇಮ್ರಾನ್ ಹೇಳಿದರೆ, ಯೂಕ್ರೇನ್ ಪರವಾದ ಹೇಳಿಕೆಯನ್ನು ಬಾಜ್ವಾ ಕೊಟ್ಟು ಸರ್ಕಾರದ ವಿರುದ್ಧ ನಿಂತರು. ಅಲ್ಲಿಗೆ ಇವರಿಬ್ಬರ ನಡುವಿನ ಕಂದಕ ಜಗಜ್ಜಾಹೀರಾಗುವಷ್ಟು ದೊಡ್ಡದಾಗಿತ್ತು.

    ಪಾಕಿಸ್ತಾನದಲ್ಲಿ ಸೇನೆ ಏನು ಬೇಕಿದ್ದರೂ ಮಾಡಬಲ್ಲದು. 2022ರಲ್ಲಿ ಇಮ್ರಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯ್ತು. ಈ ಗೊತ್ತುವಳಿ ಕಾನೂನುಬಾಹಿರ ಎಂದು ಇಮ್ರಾನ್ ವಾದಿಸುವ ಪ್ರಯತ್ನ ಮಾಡಿದರೂ ಅದು ಅರಣ್ಯರೋದನವಾಯ್ತು. ಅವರದೇ ಪಕ್ಷದ ಕೆಲವು ಸದಸ್ಯರು ತಿರುಗಿಬಿದ್ದು ಇಮ್ರಾನ್ ಅಧಿಕಾರದಿಂದ ಕೆಳಗಿಳಿಯುವಂತಾಯ್ತು. ಆನಂತರ ಇಮ್ರಾನ್ ತನಗನ್ನಿಸಿದ್ದನ್ನು ನೇರವಾಗಿ ಹೇಳುವ ಚಾಳಿ ಬೆಳೆಸಿಕೊಂಡರು. ದಿನ ಬೆಳಗಾದರೆ ಸೇನೆಯನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದರು. ಅವರ ಆರೋಪಗಳ ಕೇಂದ್ರಬಿಂದು ಸೇನಾ ಮುಖ್ಯಸ್ಥ ಬಾಜ್ವಾರೇ ಆಗಿರುತ್ತಿದ್ದರು. ‘ಎಲ್ಲ ಬಗೆಯ ಕೆಟ್ಟ ಕೆಲಸಗಳನ್ನು ಮಾಡಿ ಅವನಿಗೆ ಅನುಭವವಿದೆ, ಸರ್ಕಾರದ ಹಿಂದೆನಿಂತು ಒತ್ತಡಹಾಕಿ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವವರು ಸೇನೆಯ ಮಂದಿ’ ಎಂದೆಲ್ಲ ಆರೋಪ ಮಾಡಿದರು. ಈ ಹೊತ್ತಿಗೆ ಸರಿಯಾಗಿ ಪಾಕಿಸ್ತಾನದ ಪತ್ರಕರ್ತ ಅರ್ಷದ್ ಶರೀಫ್​ರನ್ನು ಕೀನ್ಯಾದಲ್ಲಿ ಕೊಲೆ ಮಾಡಲಾಯ್ತು. ಆತ ಅವಿಶ್ವಾಸ ಗೊತ್ತುವಳಿಯ ಸಂದರ್ಭದಲ್ಲಿ ಸೇನೆಯ ವಿರುದ್ಧವಾಗಿ, ಇಮ್ರಾನ್ ಪರವಾಗಿ ಸಾಕಷ್ಟು ವರದಿಗಳನ್ನು ಮಾಡಿದ್ದರು. ಸೇನೆ ಅವರನ್ನು ಗುರಿಯಾಗಿಸಿತ್ತು. ಬ್ರಿಗೇಡಿಯರ್ ಮೊಹಮ್ಮದ್ ಶಾಫಿಕ್, ಬ್ರಿಗೇಡಿಯರ್ ಫಹೀನ್ ರಜಾ ಮತ್ತು ಐಎಸ್​ಐನ ಮೇಜರ್ ಜನರಲ್ ಫೈಜಲ್ ನಜೀರ್ ಇವರು ಆತನಿಗೆ ಬೆದರಿಕೆಯ ಕರೆ ಮಾಡಲಾರಂಭಿಸಿದರು. ಪತ್ರಕರ್ತ ಅರ್ಷದ್ ಶರೀಫ್ ಪಾಕಿಸ್ತಾನ ಬಿಟ್ಟು ಓಡಿದರು. ಆತನ ಮಿತ್ರರೆಲ್ಲ ದುಬೈಯಲ್ಲೋ, ಲಂಡನ್ನಿನಲ್ಲೋ ಇದ್ದಾನೆ ಎಂದು ಭಾವಿಸಿದ್ದರೆ, ಕೀನ್ಯಾದಲ್ಲಿ ಹೆಣವಾಗಿದ್ದ. ನಿಸ್ಸಂಶಯವಾಗಿ ಇದು ಐಎಸ್​ಐ ಕೈವಾಡವೇ ಆಗಿತ್ತಲ್ಲದೆ, ಫೈಜಲ್ ನಜೀರ್​ನೇ ಇದರ ಹಿಂದಿದ್ದ ಎಂದು ಎಲ್ಲರೂ ನಂಬಿದರು. ಸ್ವತಃ ಶರೀಫ್​ನ ತಾಯಿ ರಿಫಾತ್ ಅಲ್ವಿ ಪಾಕಿಸ್ತಾನದ ನ್ಯಾಯಾಧೀಶರಿಗೆ ಪತ್ರಬರೆದು ಈ ವಿಚಾರ ಉಲ್ಲೇಖಿಸಿದರು. ಇಮ್ರಾನ್ ಇದನ್ನು ಬಲವಾಗಿ ಹಿಡಿದುಕೊಂಡರು. ‘ಡರ್ಟಿ ಹ್ಯಾರಿ’ ಎಂದು ಕರೆಯಲ್ಪಡುವ ಫೈಜಲ್ ನಜೀರ್ ವಿರುದ್ಧ ಮನಸೋ ಇಚ್ಛೆ ಮಾತನಾಡಲಾರಂಭಿಸಿದರು. ಇದು ಐಎಸ್​ಐಗೆ ಸರಿ ಕಾಣಲಿಲ್ಲ.

    ಮತ್ತೊಂದೆಡೆ ಅಧಿಕಾರ ಕಳೆದುಕೊಂಡೊಡನೆ ಲಾಂಗ್​ವಾರ್ಚ್ ಆರಂಭಿಸಿದ ಇಮ್ರಾನ್ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರನ್ನು ಸೆಳೆಯತೊಡಗಿದರು. ನಾಟಕೀಯ ಭಾಷಣಗಳಿಂದ ಅವರನ್ನು ಆಕರ್ಷಿಸುತ್ತಾ ಸೇನೆಯ ವಿರುದ್ಧ ಎತ್ತಿಕಟ್ಟುವಲ್ಲಿ ಸಫಲನಾಗುತ್ತಿದ್ದರು. ಇದರ ಪರಿಣಾಮವೇ ಪಂಜಾಬಿನಲ್ಲಿ ಉಪ ಚುನಾವಣೆಗಳು ನಡೆದಾಗ ಇಮ್ರಾನ್ ಪಕ್ಷ ಜಯಭೇರಿ ಬಾರಿಸಿತು. ಇಮ್ರಾನ್ ತಮ್ಮಿಂದ ಅಧಿಕಾರವನ್ನು ಕಸಿಯುತ್ತಾರೆ ಎಂಬುದು ಸೇನೆಗೆ ಖಾತ್ರಿಯಾಗುತ್ತಿದ್ದಂತೆ ಅವರ ಭ್ರಷ್ಟಾಚಾರದ ಪ್ರಕರಣಗಳನ್ನು ಮುಂದಿಟ್ಟು ನ್ಯಾಯಾಲಯದ ಮೂಲಕ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಯಮಗಳನ್ನು ಹೇರಿಬಿಟ್ಟಿತು. ಇಮ್ರಾನ್ ಲಾಂಗ್​ವಾರ್ಚ್ ಮತ್ತೆ ಮುಂದುವರಿಯಿತು. ರ್ಯಾಲಿಯಲ್ಲಿ ಭಾಗವಹಿಸಿರುವಾಗಲೇ ಇಮ್ರಾನ್ ಮೇಲೆ ಗುಂಡು ಹಾರಿಸಲಾಯ್ತು. ಕಾಲಿಗೆ ಮೂರು ಗುಂಡು ಹೊಕ್ಕಿದವೆಂದು ಬೆಂಬಲಿಗರು ಹೇಳಿದರು. ಆದರೆ, ನೋಡುಗರಿಗೆ ಚುನಾವಣೆಯ ಹೊತ್ತಲ್ಲಿ ಪಶ್ಚಿಮ ಬಂಗಾಳದಲ್ಲಿ ದೀದಿ ಕಾಲಿಗೆ ಬ್ಯಾಂಡೇಜು ಕಟ್ಟಿಕೊಂಡಂತೆ ಕಾಣುತ್ತಿತ್ತು. ಭಿನ್ನ-ಭಿನ್ನ ಸ್ವರೂಪದ ನಾಟಕಗಳಿಂದ ಇಮ್ರಾನ್ ಜನರನ್ನು ಸೆಳೆಯುತ್ತಲೇ ಹೋದರು. ಇನ್ನು ಇವರನ್ನು ತಡೆಯಲಾಗದು ಎಂದೇ ಏಕಾಕಿ ಬಂಧಿಸುವ ನಿರ್ದೇಶನವನ್ನು ಸೇನೆ ಅಲ್ಲಿನ ಅರೆಸೈನಿಕಪಡೆಗೆ ನೀಡಿತು. ಇಮ್ರಾನ್ ವಿರುದ್ಧ ಭ್ರಷ್ಟಾಚಾರದ ಪ್ರಕರಣವೊಂದಿದೆ. ವಿದೇಶಗಳಿಗೆ ಹೋದಾಗಲೆಲ್ಲ ಅಲ್ಲಿ ಸಿಗುತ್ತಿದ್ದ ಉಡುಗೊರೆಗಳನ್ನು ಸರ್ಕಾರದ ತೊಶಾಖಾನಾಗಳಿಗೆ ಕೊಟ್ಟು ಅಲ್ಲಿಂದ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರುತ್ತಿದ್ದರು. ಪಾಕಿಸ್ತಾನದ ಪ್ರಧಾನಿ ಎಂದು ಸಾಬೀತುಪಡಿಸಬೇಕಲ್ಲ, ಮತ್ತೇನಿದೆ ಮಾರ್ಗ? ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮರಳಿ ಮನೆಗೆ ಹೋಗುವಾಗ ಉಡುಗೊರೆಗಳನ್ನೆಲ್ಲ ಗಂಟುಮೂಟೆ ಕಟ್ಟಿಕೊಂಡು ಒಯ್ದಿದ್ದರಲ್ಲ, ಇದು ಅಂಥದ್ದೇ ಮತ್ತೊಂದು ಕಥೆ ಅಷ್ಟೇ.

    ವಿಚಾರಣೆಗೆಂದು ಸಾಗುತ್ತಿರುವ ಇಮ್ರಾನ್ ಖಾನ್ ಬಂಧನದೊಂದಿಗೆ ಪಾಕಿಸ್ತಾನದಲ್ಲಿ ಅಕ್ಷರಶಃ ಬೆಂಕಿ ಹೊತ್ತಿಕೊಂಡಿತು. ಜನ ಬೀದಿಗೆ ಬಂದರು. ಸೇನಾ ಮುಖ್ಯನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದರು. ಅನೇಕ ಸೇನಾ ನಾಯಕರ ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಿದರು. ಲೂಟಿಗೈಯ್ಯುತ್ತಿರುವ ಜನರನ್ನು ಪ್ರಶ್ನಿಸಿದಾಗ ‘ಇದು ನಮ್ಮದ್ದೇ ದುಡ್ಡು, ಅದಕ್ಕೇ ಒಯ್ಯುತ್ತಿದ್ದೇವೆ’ ಎಂದು ಹೇಳುವುದನ್ನು ಕಂಡಾಗ, ಅವರಲ್ಲಿದ್ದ ಆಕ್ರೋಶ ಎದ್ದು ಕಾಣುತ್ತಿತ್ತು. ಅಚ್ಚರಿ ಎಂದರೆ ಜನರ ಈ ಆಕ್ರೋಶ ತಡೆಯುವಲ್ಲಿ ಸೇನೆ ತೋರಿದ ನಿರ್ಲಕ್ಷ್ಯ. ಕೆಲವು ಕಡೆಯಲ್ಲಂತೂ ನುಗ್ಗಿ ಬರುತ್ತಿರುವ ಜನರ ಮೇಲೆ ಗುಂಡು ಹಾರಿಸಲೆಂದು ಕೊಟ್ಟ ಆದೇಶವನ್ನೂ ಧಿಕ್ಕರಿಸಲಾಗಿತ್ತು. ಇದು ಸೇನೆಯೊಳಗಿನ ಕುರ್ಚಿಯ ಕಾರಣಕ್ಕಾಗಿ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಅಂದರೆ ಇಮ್ರಾನ್ ಹಚ್ಚಿದ ಬೆಂಕಿ ಸೇನೆಯನ್ನೂ ಸುಡುತ್ತಿದೆ. ಭಾರತವನ್ನು ನಾಶ ಮಾಡುತ್ತೇವೆಂದು ಬದುಕು ಆರಂಭಿಸಿದ ಪಾಕಿಸ್ತಾನ ಇಂದು ತನ್ನ ಅಂಗಡಿಯನ್ನು ಗಂಟು-ಮೂಟೆ ಕಟ್ಟಿಕೊಂಡು ಭಾರತದೆದುರು ಗೋಗರೆಯಬೇಕಾದ ಪರಿಸ್ಥಿತಿ ಬಂದಿದೆ. ಇವ್ಯಾವನ್ನೂ ಅರಿಯದ ಇಲ್ಲಿನ ಮುಸಲ್ಮಾನರು ಮಸೀದಿಯಲ್ಲಿ ಮೌಲ್ವಿಯ ಮಾತು ಕೇಳಿ, ಬೀದಿಗೆ ಬಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುತ್ತಾರಲ್ಲ, ಅಯ್ಯೋ ಪಾಪ ಎನಿಸುತ್ತದೆ.

    ಒಂದಂತೂ ಸತ್ಯ, ಅಧಿಕಾರದಲ್ಲಿರುವ ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಮೀಸಲಾತಿಯನ್ನೂ ವಿಸ್ತರಿಸಿ ಜಾತಿ-ಜಾತಿಗಳ ನಡುವಿನ ಕದನವನ್ನು ತೀವ್ರಗೊಳಿಸಿತೆಂದರೆ ಸುಭಿಕ್ಷವಾಗಿದ್ದ ಕರ್ನಾಟಕವೂ ಪಾಕಿಸ್ತಾನದಂತಾಗಲು ಐದು ವರ್ಷ ಸಾಕು! ಆಗ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವ ಅಗತ್ಯವಿಲ್ಲ. ಮುಸಲ್ಮಾನರು ಕರ್ನಾಟಕವೂ ಪಾಕಿಸ್ತಾನವೇ ಎಂದು ಹೆಮ್ಮೆಪಡಬಹುದು.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಚುನಾವಣಾ ಫಲಿತಾಂಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ಅಭ್ಯರ್ಥಿ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts