

ಹೆಬ್ರಿ: ವಿಶ್ವಕರ್ಮರು ತಮ್ಮ ಕಾರ್ಯಗಳಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡವರು. ಹೆಬ್ರಿ ವಿಶ್ವಕರ್ಮ ಸಂಘದ ಶಿಸ್ತು, ವಸ ಸಂಹಿತೆ ಹಾಗೂ ಸಾಧಕರ ಗುರುತಿಸುವಿಕೆ ಕಾರ್ಯ ಶ್ಲಾಘನಾರ್ಹ ಎಂದು ತೆಂಕ ವಾಗಣೆ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೋಕ್ತೇಸರ ನವೀನ್ ಆಚಾರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಬ್ರಿ ಶ್ರೀ ವಿಶ್ವಕರ್ಮ ಸವಾಜ ಸೇವಾ ಸಂದ ವತಿಯಿಂದ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಮತ್ತು ಶ್ರೀ ವಿಶ್ವಕರ್ಮ ಯುವ ವಂದ ಸಹಕಾರದಲ್ಲಿ ಮಂಗಳವಾರ ಜರುಗಿದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ವಾತನಾಡಿದರು.
ಸಾಧಕ ವಿದ್ಯಾರ್ಥಿಗಳಾದ ಆಪ್ತಿ ಆಚಾರ್ಯ, ವಿನೀಶ್ ಆಚಾರ್ಯ, ನಾಟಿ ವೈದ್ಯೆ ಶಾರದಾ ಗಣಪತಿ ಆಚಾರ್ಯ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಶಿಶಂಕರ್ ಎಚ್.ಎಂ. ಹಾಗೂ ಹೆಬ್ರಿ ವಿಶ್ವಕರ್ಮ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಟಿ.ಜಿ.ಆಚಾರ್ಯ, ಅನುಷಾ, ಸಂತೋಷ್ ಆಚಾರ್ಯ, ಶೇಖರ ಆಚಾರ್ಯ, ರತ್ನಾಕರ ಆಚಾರ್ಯ, ಸಂದ ವಿವಿಧ ಪದಾಧಿಕಾರಿಗಳು ಉಪಸಿತರಿದ್ದರು. ಸದಾಶಿವ ಆಚಾರ್ಯ, ಪ್ರಶಾಂತ ಆಚಾರ್ಯ, ಪ್ರೇಮಾ ಸಹಕರಿಸಿದರು. ಎಳಗೋಳಿ ರವೀಂದ್ರ ಪುರೋಹಿತ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ರಾಜೇಶ ಆಚಾರ್ಯ ಮಠದ ಬೆಟ್ಟು ಸ್ವಾಗತಿಸಿದರು. ಕೇಶವ ಆಚಾರ್ಯ ವರದಿ ಮಂಡಿಸಿದರು. ರತ್ನಾಕರ ಆಚಾರ್ಯ ಶಿವಪುರ ವಂದಿಸಿದರು. ಶಶಿಶಂಕರ್ ನಿರೂಪಿಸಿದರು.