

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ದಿನಾಂಕ, ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಕೆಲವು ರಾಶಿಗಳಲ್ಲಿ ಜನಿಸಿದ ಮಹಿಳೆಯರನ್ನು ನಿಸ್ವಾರ್ಥ ತಾಯಂದಿರು ಎಂದು ಹೇಳಲಾಗುತ್ತದೆ. ಈ ರಾಶಿಯವರು ತಾಯಂದಿರಾದ ನಂತರ, ತಮ್ಮನ್ನು ತಾವು ಯಾವುದೇ ರೀತಿಯಲ್ಲಿ ಪರಿಗಣಿಸದೆ ಅಂದರೆ, ತಮ್ಮ ಸ್ವಾರ್ಥಕ್ಕೆ ಆದ್ಯತೆ ನೀಡದೇ ತಮ್ಮ ಮಕ್ಕಳಿಗಾಗಿ ತಮ್ಮ ಪ್ರಾಣವನ್ನೇ ನೀಡುತ್ತಾರೆ. ಹಾಗಾದರೆ, ವಿಶ್ವದ ಅತ್ಯುತ್ತಮ ತಾಯಂದಿರು ಯಾವ ರಾಶಿಗಳಲ್ಲಿ ಹೆಚ್ಚಾಗಿ ಜನಿಸುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.
ಕರ್ಕಾಟಕ ರಾಶಿಯವರನ್ನು ಸಾಮಾನ್ಯವಾಗಿ ರಾಶಿಚಕ್ರದ ಪಾಲಕರು ಎಂದು ಕರೆಯಲಾಗುತ್ತದೆ ಮತ್ತು ಈ ರಾಶಿಯಡಿಯಲ್ಲಿ ಜನಿಸಿದ ಮಹಿಳೆಯರು ಅತ್ಯುತ್ತಮ ತಾಯಂದಿರಾಗಿರುತ್ತಾರೆ. ತಮ್ಮ ಮಗುವು ಕಠಿಣ ದಿನವನ್ನು ಎದುರಿಸುತ್ತಿದ್ದರೆ, ಎಲ್ಲರಿಗಿಂತ ಮೊದಲೇ ಅದನ್ನು ಅರಿತುಕೊಳ್ಳುತ್ತಾರೆ ಮತ್ತು ಅದನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಈ ರಾಶಿಯವರಿಗೆ ತಮ್ಮ ಮಗುವಿನ ಪ್ರತಿಯೊಂದು ಚಲನೆಯು ತಿಳಿದಿರುತ್ತದೆ. ಅವರು ತಮ್ಮ ಮಗುವಿಗಾಗಿ ತಮ್ಮ ಸಂಪೂರ್ಣ ಸಂತೋಷವನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ.
ವೃಷಭ ರಾಶಿಯಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿಯೇ ನ್ಯಾಯ ಮತ್ತು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರು ತಾಯಂದಿರಾದಾಗ, ಅವರು ಖಂಡಿತವಾಗಿಯೂ ತಮ್ಮ ಮಕ್ಕಳಿಗೆ ತಮ್ಮ ಜೀವನವನ್ನು ಅರ್ಪಿಸುವ ಗುಣವನ್ನು ಹೊಂದಿರುತ್ತಾರೆ. ತಮ್ಮ ಗಂಡಂದಿರಿಂದ ಬೇರ್ಪಟ್ಟರೂ ಸಹ, ಅವರು ತಮ್ಮ ಮಕ್ಕಳನ್ನು ಎಂದಿಗೂ ತ್ಯಜಿಸುವುದಿಲ್ಲ. ಅವರಿಗಾಗಿ ಅವರು ಯಾವುದೇ ಹಂತಕ್ಕೂ ಹೋಗಲು ಸಿದ್ಧರಿರುತ್ತಾರೆ.
ಕನ್ಯಾ ರಾಶಿಯ ಮಹಿಳೆಯರು ಅತ್ಯುತ್ತಮ ತಾಯಂದಿರು. ಅವರು ತಮ್ಮ ಮಕ್ಕಳ ಕಲ್ಯಾಣಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಲು ಸಿದ್ಧರಿರುತ್ತಾರೆ. ತಮ್ಮ ಮಕ್ಕಳ ಪ್ರತಿಯೊಂದು ನಿರೀಕ್ಷೆ ಮತ್ತು ಆಸೆಯನ್ನು ಪೂರೈಸಲು ಅವರು ತಮ್ಮ ಜೀವನದುದ್ದಕ್ಕೂ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಮಗುವಿಗಾಗಿ ತಮ್ಮ ಪ್ರಾಣವನ್ನೇ ನೀಡುವ ಪರಿಸ್ಥಿತಿ ಬಂದರೂ, ಅದನ್ನು ಪೂರ್ಣ ಹೃದಯದಿಂದ ಮತ್ತು ಸಂತೋಷದಿಂದ ಸ್ವೀಕರಿಸುವ ಗುಣ ಅವರಲ್ಲಿ ಖಂಡಿತವಾಗಿಯೂ ಇರುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.