

Zodiac Signs : ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.
ಸಾಮಾನ್ಯವಾಗಿ ಎಲ್ಲಾ ಮನುಷ್ಯರಿಗೂ ಸಂತೋಷ ಮತ್ತು ದುಃಖ ಸಹಜ. ಪ್ರತಿಯೊಬ್ಬರೂ ಒಮ್ಮೆಯಾದರೂ ಕಷ್ಟದ ಸಮಯಗಳನ್ನು ಎದುರಿಸಲೇಬೇಕು. ಈ ವೇಳೆ ಕೆಲವರು ಧೈರ್ಯದಿಂದ ಕಷ್ಟಗಳನ್ನು ಎದುರಿಸಿದರೆ, ಇನ್ನು ಕೆಲವರು ಕಷ್ಟಗಳನ್ನು ಎದುರಿಸಲಾಗದೇ ದುಡುಕಿನ ನಿರ್ಧಾರ ತೆಗೆದುಕೊಂಡು ಜೀವನವನ್ನೇ ಕೊನೆಗಾಣಿಸುತ್ತಾರೆ. ಆದರೆ, ಇಲ್ಲಿ ಯಾವುದು ಶಾಶ್ವತವಲ್ಲ ಎಂಬುದನ್ನು ಅರಿತು ಕಷ್ಟಗಳನ್ನು ಎದುರಿಸಿ ನಿಂತರೆ ಯಶಸ್ಸು ಖಂಡಿತ ಸಿಗುತ್ತದೆ ಅನ್ನೋದನ್ನು ಮರೆಯಬಾರದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಜೀವನದಲ್ಲಿ ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ತಮ್ಮ ಆತ್ಮವಿಶ್ವಾಸವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲವಂತೆ! ಹಾಗಾದರೆ, ಯಾವ ರಾಶಿಯವರು ನೋವು ಮತ್ತು ಅಡೆತಡೆಗಳನ್ನು ನಿವಾರಿಸುವ ಮತ್ತು ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮಕರ ರಾಶಿಯಲ್ಲಿ ಜನಿಸಿದ ಜನರು ನೈತಿಕತೆಯ ಗ್ರಹವಾದ ಶನಿಯಿಂದ ಆಳಲ್ಪಡುತ್ತಾರೆ. ಆದ್ದರಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ನ್ಯಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಈ ಜನರು ತಮ್ಮನ್ನು ನೋಯಿಸಿದ ಮತ್ತು ದ್ರೋಹ ಮಾಡಿದವರಿಗೆ ತಮ್ಮ ಯಶಸ್ಸಿನ ಮೂಲಕ ಪ್ರತೀಕಾರ ತೀರಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ತಮ್ಮ ಸುತ್ತಲಿನ ಪ್ರತಿಯೊಬ್ಬರೂ ತಮ್ಮ ಬೆಳವಣಿಗೆಗೆ ಅಡ್ಡಿಯಾಗಲು ಪ್ರಯತ್ನಿಸಿದರೂ ಸಹ, ಅವರು ಸ್ವಾಭಾವಿಕವಾಗಿ ಏಕಾಂಗಿಯಾಗಿ ನಿಂತು ಜೀವನದಲ್ಲಿ ಸಾಧಿಸುವ ಧೈರ್ಯವನ್ನು ಹೊಂದಿರುತ್ತಾರೆ.
ವೃಶ್ಚಿಕ ರಾಶಿಯವರು ಬೆಂಕಿಗೆ ಹಾರಿದರೂ ಸಹ ತಮ್ಮನ್ನು ತಾವು ಚಿನ್ನವನ್ನಾಗಿ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಅವರು ಎಂದಿಗೂ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ. ವೃಶ್ಚಿಕ ರಾಶಿಯವರಿಗೆ ಒತ್ತಡ ಹೊಸದೇನಲ್ಲ, ಅವರು ನೋವನ್ನು ಸಹಿಸಿಕೊಳ್ಳುವ ಮತ್ತು ಜೀವನದಲ್ಲಿ ಅನೇಕ ಸಾಧನೆಗಳನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ಮೇಷ ರಾಶಿಯವರು ಯುದ್ಧ ಮತ್ತು ಧೈರ್ಯದ ಗ್ರಹವಾದ ಮಂಗಳ ಗ್ರಹದಿಂದ ಆಳಲ್ಪಡುತ್ತಾರೆ. ಆದ್ದರಿಂದ ಅವರು ಸ್ವಾಭಾವಿಕವಾಗಿ ಅದ್ಭುತ ಧೈರ್ಯವನ್ನು ಹೊಂದಿರುತ್ತಾರೆ. ಅವರು ತಮ್ಮ ಶಕ್ತಿ ಮತ್ತು ನಿರ್ಭೀತ ಮನೋಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ಅವರಿಗೆ ನೋವುಂಟು ಮಾಡುವ ಮೂಲಕ ಅವರ ಬೆಳವಣಿಗೆಯನ್ನು ತಡೆಯುವುದು ತುಂಬಾ ಕಷ್ಟಕರವಾಗಿರುತ್ತದೆ. ಅವರು ತಮ್ಮ ನೋವನ್ನು ಸಾಧನೆಗಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.