ಬೆಳಗಿನ ತಿಂಡಿಗೆ ಈ ಬೈಟ್ಸ್​ ಟ್ರೈ ಮಾಡಿ ನೋಡಿ..ಇದು ಕರುಳಿನ ರೋಗಕ್ಕೂ ಬೆಸ್ಟ್ | Peanut Butter-Date Bites

Peanut Butter-Date Bites
Published on

Peanut Butter-Date Bites: ಬೆಳಿಗ್ಗೆ ತಿಂಡಿ ತಿನ್ನುವುದು ಎಲ್ಲರ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಇದು ಆ ದಿನದ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು, ಮಧ್ಯಾಹ್ನದವರೆಗೆ ಹಸಿವನ್ನು ತಡೆಯಲು ನೆರವಾಗುತ್ತದೆ. ಮೂರು ಹೊತ್ತು ಸರಿಯಾದ ಸಮಯಕ್ಕೆ ತಿಂಡಿ, ಊಟ ಮಾಡುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗಿರತ್ತದೆ ಎನ್ನುವುದು ವೈದ್ಯರ ಸಲಹೆ.

ಇತ್ತೀಚೆಗೆ ಅನೇಕ ಜನರು ಚಿಪ್ಸ್, ಕುಕೀಸ್ ಮತ್ತು ಪಾನೀಯಗಳತ್ತ ಮುಖ ಮಾಡಿದ್ದು, ಇದು ಪೌಷ್ಟಿಕಾಂಶಗಳನ್ನು ಕಡಿಮೆ ಮಾಡುವುದರೊಂದಿಗೆ, ಅನಾರೋಗ್ಯಕ್ಕೂ ಕಾರಣವಾಗಬಹುದು. ಅಂತಹ ತಿಂಡಿಗಳನ್ನು ತಿನ್ನುವುದರಿಂದ ಪದೇ ಪದೇ ಹಸಿವಾಗುತ್ತದೆ. ಸರಿಯಾದ ಸಮಯಕ್ಕೆ ನಾವು ಆಹಾರ ಸೇವಿಸದಿದ್ದರೆ ಇದು ಅನಾರೋಗ್ಯಕ್ಕೂ ಕಾರಣವಾಗಬಹುದು, ಆದ್ದರಿಂದ ನಾಬು ಸೇವಿಸುವ ಆಹಾರಗಳನ್ನು ಜಾಣ್ಮೆಯಿಂದ ಆಯ್ಕೆ ಮಾಡುವುದು ತುಂಬಾ ಮುಖ್ಯ.

ಇತ್ತೀಚೆಗೆ, AIIMS, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದಿರುವ ಗ್ಯಾಸ್ಟ್ರೋಎಂಟರಾಲಜಿಸ್ಟ್, ಕರುಳಿನ ವೈದ್ಯ ಎಂದೇ ಜನಪ್ರಿಯರಾಗಿರುವ ಡಾ. ಸೌರಭ್ ಸೇಥಿ, ಕೇವಲ 5 ಹಂತಗಳಲ್ಲಿ ನೀವು ತಯಾರಿಸಬಹುದಾದ ಕರುಳಿಗೆ ಅನುಕೂಲಕರವಾದ ತಿಂಡಿಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಡಾ. ಸೌರಭ್ ಸೇಥಿ, ಹೆಚ್ಚಿನ ಜನರು ತಿಂಡಿಗಳು ಜಂಕ್ ಆಗಿರಬೇಕೆಂದು ಇಚ್ಛಿಸುತ್ತಾರೆ. ಒಬ್ಬ ಗ್ಯಾಸ್ಟ್ರೋಎಂಟರಾಲಜಿಸ್ಟ್ ಆಗಿ ಇದನ್ನು ನಾನು ಒಪ್ಪುವುದಿಲ್ಲ. ಕಡಲೆಕಾಯಿ ಬೆಣ್ಣೆ-ಖರ್ಜೂರದ ಬೈಟ್ಸ್ 5 ಸರಳ ಹಂತಗಳಲ್ಲಿ ಕರುಳು ಮತ್ತು ಯಕೃತ್ತಿಗೆ ಅನುಕೂಲಕರವಾದ ತಿಂಡಿಯಾಗಿ ಹೇಗೆ ತಯಾರಿಸುತ್ತೇನೆ ಎಂಬುದು ಇಲ್ಲಿದೆ ಎಂದಿದ್ದಾರೆ.

1. ಖರ್ಜೂರಗಳು ನೈಸರ್ಗಿಕವಾಗಿ ಸಿಹಿಯಾಗಿರುವುದರೊಂದಿಗೆ, ಫೈಬರ್‌ ಅಂಶಗಳನ್ನು ಒಳಗೊಂಡಿರುತ್ತವೆ. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿದೆ.

2. ಖರ್ಜೂರಗಳನ್ನು ಹೋಳುಗಳಾಗಿ ಕತ್ತರಿಸಿ, ಬೀಜಗಳನ್ನು ತೆಗೆದುಹಾಕಿ ಬೈಟ್ಸೈಗಾಗಿ ಸಿದ್ಧಗೊಳಿಸಬೇಕು.

3. ಒಂದು ಚಮಚ ನೈಸರ್ಗಿಕ ಕಡಲೆಕಾಯಿ ಬೆಣ್ಣೆಯನ್ನು ಸೇರಿಸಿ. ಇದು ಖರ್ಜೂರದಲ್ಲಿರುವ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ನೈಸರ್ಗಿಕ ಸಕ್ಕರೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

4. ಇದಕ್ಕೆ ಅಗಸೆಬೀಜದ ಪುಡಿಯನ್ನು ಸಿಂಪಡಿಸಿ. ಇದು ಫೈಬರ್, ಒಮೆಗಾ-3 ಗಳನ್ನು ಸೇರಿಸುತ್ತದೆ ಮತ್ತು ಕರುಳು ಮತ್ತು ಹೃದಯದ ಆರೋಗ್ಯಕ್ಕೆ ಹೆಚ್ಚುವರಿ ವರ್ಧಕವನ್ನು ನೀಡುತ್ತದೆ.

5. ಇದನ್ನು ಮುಚ್ಚಿ 10-15 ನಿಮಿಷಗಳ ಕಾಲ ತಣ್ಣಗಾಗಿಸಿ. ನೀವು ಯಾವುದೇ ಸಮಯದಲ್ಲಿ ತಿನ್ನಬಹುದಾದ ಅಗಿಯುವ, ಪೋಷಕಾಂಶಗಳಿಂದ ತುಂಬಿದ ಬೈಟ್ಸ್ ಸಿದ್ಧ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net