ವಿಟಮಿನ್ ಬಿ 12 ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ. ಆರೋಗ್ಯಕರ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ಗಳನ್ನು ತಯಾರಿಸಲು B12 ಅಗತ್ಯವಿದೆ. ಈ ಜೀವಸತ್ವಗಳ ಕೊರತೆಯಿದ್ದರೆ, ಕೆಂಪು ರಕ್ತ ಕಣಗಳು ಸಾಯುವಂತೆ ಮಾಡುತ್ತದೆ. ಇದು ರಕ್ತಹೀನತೆಗೆ ಕಾರಣವಾಗುತ್ತದೆ. ನಿಮ್ಮ ದೇಹವು ವಿಟಮಿನ್ ಬಿ 12 ಅನ್ನು ಸ್ವಂತವಾಗಿ ತಯಾರಿಸುವುದಿಲ್ಲ. ನೀವು ಸೇವಿಸುವ ಆಹಾರದಿಂದ ಪಡೆಯಬಹುದು. ಹಾಗಾದ್ರೆ ಯಾವೆಲ್ಲಾ ಆಹಾರದಿಂದ ವಿಟಮಿನ್ ಬಿ 12 ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ.
ಇದನ್ನು ಓದಿ: ಮೊಡವೆ, ಕಲೆಗಳಿಗೆ ರಾಮಬಾಣ; ತ್ವಚೆಯ ಸೌಂದರ್ಯ ಹೆಚ್ಚಿಸಲು ನೀವು ಇದನೊಮ್ಮೆ ಬಳಸಿ
- ಹಾಲು ನೈಸರ್ಗಿಕವಾಗಿ ವಿಟಮಿನ್ B12 ಅನ್ನು ಹೊಂದಿರುತ್ತದೆ. ಇದು ಪ್ರೋಟೀನ್‌ನ ಮೂಲವೂ ಆಗಿದೆ. ಎರಡೂ ಪೋಷಕಾಂಶಗಳು ಒಟ್ಟಾಗಿ ಇರುವುದರಿಂದ ಸ್ನಾಯು ದೌರ್ಬಲ್ಯ ದೂರವಾಗುತ್ತದೆ. ಇದು ಸಾಕಷ್ಟು ಕ್ಯಾಲ್ಸಿಯಂ ಒದಗಿಸಿ ಮೂಳೆಗಳನ್ನು ಬಲಪಡಿಸುತ್ತದೆ.
- ಬಾದಾಮಿ ಹಾಲು ಪ್ರೋಟೀನ್, ಆರೋಗ್ಯಕರ ಕೊಬ್ಬು, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 12ನ ಅತ್ಯುತ್ತಮ ಮೂಲವಾಗಿದೆ. ಇದನ್ನು ಕುಡಿಯುವುದರಿಂದ ಆಯಾಸ, ದೌರ್ಬಲ್ಯ ದೂರವಾಗಿ ದೇಹಕ್ಕೆ ಪುಷ್ಟಿ ಸಿಗುತ್ತದೆ.
- ಕಿತ್ತಳೆ ಜ್ಯೂಸ್ ಕುಡಿಯುವುದರಿಂದ ವಿಟಮಿನ್ ಬಿ 12 ಕೊರತೆಯನ್ನು ನೀಗಿಸಬಹುದು. ಕೋಬಾಲಾಮಿನ್ ಕೊರತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ವಿಟಮಿನ್ ಸಿ ಸಹ ಲಭಿಸುತ್ತದೆ.
- ಮಾಂಸ, ಮೀನು, ಮೊಟ್ಟೆಯು ವಿಟಮಿನ್ ಬಿ 12 ಅನ್ನು ನೈಸರ್ಗಿಕವಾಗಿ ನೀಡುವ ಆಹಾರ ಪದಾರ್ಥಗಳಾಗಿವೆ.
- ವಿಟಮಿನ್ ಬಿ 12 ಸಮೃದ್ಧವಾಗಿರುವ ಪಾನೀಯಗಳಲ್ಲಿ ಸೋಯಾ ಹಾಲು ಕೂಡ ಒಂದು. ಇದು ನರಗಳಿಗೆ ಬಲವನ್ನು ನೀಡಲು ಸಹಾಯ ಮಾಡುತ್ತದೆ.
ತೂಕ ಹೆಚ್ಚಿಸಿಕೊಳ್ಳುವ ಆಸೆಯೇ.. ನಿಮ್ಮ ಆಹಾರದಲ್ಲಿ ಅನ್ನದೊಂದಿಗೆ ಈ ಪದಾರ್ಥಗಳನ್ನು ಬಳಸಿ