

ಭಾರತದಲ್ಲಿ 99 ಪ್ರತಿಶತ ಜನರು ತಮ್ಮ ದೈನಂದಿನ ಆಹಾರಪದ್ಧತಿಯಲ್ಲಿ ಅನ್ನ ತಿನ್ನುವುದನ್ನು ರೂಢಿಸಿಕೊಂಡಿರುತ್ತಾರೆ. ಅನ್ನ ಇಲ್ಲದಿದ್ದರೆ ಊಟ ಅಪೂರ್ಣ ಎಂದೇ ಭಾವಿಸುತ್ತಾರೆ. ಅನ್ನ ತಿನ್ನುವುದು ಆರೋಗ್ಯಕರವಲ್ಲ ಎಂದು ಹಲವರ ಅಭಿಪ್ರಾಯವಾಗಿದೆ. ಅನ್ನ ತಿನ್ನುವುದರಿಂದ ಏನು ಪ್ರಯೋಜನ ಇಲ್ಲ ಎಂದು ಭಾವಿಸುತ್ತಾರೆ. ಆದರೆ ಅನ್ನದಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ ಇದ್ದು ಅದು ದೇಹಕ್ಕೆ ಶಕ್ತಿಯನ್ನು ಒದಗಿಸಲು ಕೆಲಸ ಮಾಡುತ್ತದೆ. ಅನ್ನದ ಜತೆಗೆ ಕೆಲವೊಂದು ಆಹಾರ ಪದಾರ್ಥಗಳನ್ನು ಸೇರಿಸಿ ತಿಂದರೆ ದೇಹಕ್ಕೆ ಅಗತ್ಯವಾದ ಸಂಪೂರ್ಣ ಶಕ್ತಿ ಲಭಿಸುವುದರ ಜತೆಗೆ ತೂಕವು ಹೆಚ್ಚಾಗುತ್ತದೆ. ನಿಮ್ಮ ಆಹಾರವನ್ನು ಹೆಚ್ಚು ಪೋಷಕಾಂಶಗಳಿಂದ ಸಮೃದ್ಧಗೊಳಿಸುವುದು ಹಾಗೂ ತೂಕ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಬೇಳೆಯು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಹೊಂದಿದ್ದು ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಆಹಾರಪದ್ಧತಿಯಲ್ಲಿ ಅನ್ನದೊಂದಿಗೆ ಬೇಳೆಯನ್ನು ಸೇರಿಸಿ.
ತುಪ್ಪದಲ್ಲಿ ಕ್ಯಾಲೋರಿಗಳು ಅಧಿಕವಾಗಿದ್ದು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಅನ್ನದ ಜತೆ ತುಪ್ಪವನ್ನು ಬಳಸುವುದು ಉತ್ತಮ.
ಪನ್ನೀರಿನಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ದೇಹಕ್ಕೆ ಅಗತ್ಯವಾದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.
ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಅನ್ನ ತಿನ್ನುವವರು ದಿನ ಬೇಯಿಸಿದ ಮೊಟ್ಟೆ ತಿನ್ನುವುದು ಒಳ್ಳೆಯದು.
ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಇತ್ಯಾದಿಗಳಲ್ಲಿ ಪ್ರೋಟೀನ್, ಕೊಬ್ಬು ಮತ್ತು ನಾರಿನಂಶವಿದ್ದು ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ. ರೈಸ್ಬಾತ್ಗಳಲ್ಲಿ ಇವುಗಳನ್ನು ಬಳಸಬಹುದು.
ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸುವ ಪ್ರೋಟೀನ್‌ಗಳು ಮತ್ತು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಪ್ರತಿದಿನ ಮೊಸರನ್ನು ಅನ್ನದೊಂದಿಗೆ ಬೆರೆಸಿ ತಿಂದರೆ ತೂಕ ಇಳಿಸುವುದುನ್ನು ತಪ್ಪಿಸುತ್ತದೆ.