

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬಗ್ಗೆ ಹೇಳಲು ವಿಶೇಷ ಏನೂ ಇಲ್ಲ ಎಂದೇ ಹೇಳಬಹುದು. ಐಪಿಎಲ್ ನೋಡುವುದು ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿ ಹಬ್ಬವಿದ್ದಂತೆ. ಈ ಟಿ20 ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಮಾರ್ಚ್-ಏಪ್ರಿಲ್ ತಿಂಗಳಿಗಾಗಿ ತೀವ್ರ ಕಾತರ ವ್ಯಕ್ತಪಡಿಸುವ ಫ್ಯಾನ್ಸ್, ಇಂದು ನಡೆಯಲಿರುವ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ 2025ರ ಮೊದಲ ಶುಭಾರಂಭ ಪಂದ್ಯಕ್ಕಾಗಿ ಕಾಯತೊಡಗಿದ್ದಾರೆ. ಈ ಪಂದ್ಯದ ಮೂಲಕ 2025ರ ಐಪಿಎಲ್ಗೆ ಅದ್ಧೂರಿ ಚಾಲನೆ ಸಿಗಲಿದೆ.
ಐಪಿಎಲ್ ಇತಿಹಾಸದಲ್ಲಿ ಹಲವು ಮರೆಯಲಾಗದ ಘಟನೆಗಳು ನಡೆದಿದ್ದು, ಸ್ಟಾರ್ ಹಾಗೂ ಯುವ ಆಟಗಾರರ ದಾಖಲೆಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿದೆ. 2008ರಿಂದ ಆರಂಭಗೊಂಡ ಐಪಿಎಲ್ ಇದೀಗ 18ನೇ ಆವೃತ್ತಿಗೆ ಕಾಲಿಟ್ಟಿದೆ. ಯಾವ ವರ್ಷದಲ್ಲಿ ಐಪಿಎಲ್ ಶುರುವಾಯಿತೋ, ಅದೇ ವರ್ಷದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಯಾವ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತ್ತೋ ಅದೇ ತಂಡಗಳು 2025ರ ಐಪಿಎಲ್ನಲ್ಲಿಯೂ ಎದುರು-ಬದುರು ಆಡುತ್ತಿರುವುದು ವಿಶೇಷ. ಇದು ಹಲವರ ಕುತೂಹಕ್ಕೂ ಕಾರಣವಾಗಿದೆ.
ಅಸಲಿಗೆ ಐಪಿಎಲ್ನಲ್ಲಿ ಮೊದಲಿಗೆ ಟಾಸ್ ಗೆದ್ದವರು ಯಾರು? ಮೊದಲ ಬೌಂಡರಿ, ಸಿಕ್ಸರ್, ವಿಕೆಟ್, ಅರ್ಧಶತಕ, ಶತಕ ಗಳಿಸಿದವರು ಯಾರು? ಎಂಬ ಹತ್ತು ಹಲವು ಮೊದಲುಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಮೊದಲ ಟಾಸ್: ಅಂದಿನ ಆರ್‌ಸಿಬಿ ಕ್ಯಾಪ್ಟನ್ ರಾಹುಲ್ ದ್ರಾವಿಡ್
ಮೊದಲ ಎಸೆತ: ಪ್ರವೀಣ್ ಕುಮಾರ್ (ಆರ್‌ಸಿಬಿ)
ಮೊದಲ ಬೌಂಡರಿ: ಬ್ರೆಂಡನ್ ಮೆಕಲಮ್
ಮೊದಲ ಸಿಕ್ಸರ್: ಬ್ರೆಂಡನ್ ಮೆಕಲಮ್
ಮೊದಲ ವಿಕೆಟ್: ಸೌರವ್ ಗಂಗೂಲಿ
ಮೊದಲ ಅರ್ಧಶತಕ: ಬ್ರೆಂಡನ್ ಮೆಕಲಮ್
ಮೊದಲ ಶತಕ: ಬ್ರೆಂಡನ್ ಮೆಕಲಮ್ (158)
ಮೊದಲ ಗೆಲುವು: ಕೆಕೆಆರ್
ಮೊದಲ ಪ್ಲೇಯರ್ ಆಫ್ ದಿ ಮ್ಯಾಚ್: ಬ್ರೆಂಡನ್ ಮೆಕಲಮ್
ಶತಕ ಗಳಿಸಿದ ಮೊದಲ ಭಾರತೀಯ: ಮನೀಶ್ ಪಾಂಡೆ (ಆರ್‌ಸಿಬಿ) vs ಡೆಕ್ಕನ್ ಚಾರ್ಜರ್ಸ್ (2009) ಪಂದ್ಯ
ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ: ಲಕ್ಷ್ಮಿಪತಿ ಬಾಲಾಜಿ (ಸಿಎಸ್‌ಕೆ) vs ಪಂಜಾಬ್ ಕಿಂಗ್ಸ್ (2008)
5 ವಿಕೆಟ್ ಪಡೆದ ಮೊದಲ ಆಟಗಾರ: ಸೊಹೈಲ್ ತನ್ವೀರ್ (ರಾಜಸ್ಥಾನ ರಾಯಲ್ಸ್) vs ಸಿಎಸ್‌ಕೆ (2008)
ಮೊದಲ ಐಪಿಎಲ್ ಚಾಂಪಿಯನ್: ರಾಜಸ್ಥಾನ ರಾಯಲ್ಸ್ (2008)
ಮೊದಲ ಪರ್ಪಲ್ ಕ್ಯಾಪ್ ವಿಜೇತ: ಸೊಹೈಲ್ ತನ್ವೀರ್ (ರಾಜಸ್ಥಾನ ರಾಯಲ್ಸ್) - 22 ವಿಕೆಟ್
ಮೊದಲ ಆರೆಂಜ್ ಕ್ಯಾಪ್ ವಿಜೇತ: ಶಾನ್ ಮಾರ್ಷ್ (ಕಿಂಗ್ಸ್ ಇಲೆವೆನ್ ಪಂಜಾಬ್) - 616 ರನ್
ಇದನ್ನೂ ಓದಿ: Karnataka Bandh | ಬಾಗಲಕೋಟೆಯಲ್ಲಿ ಕರವೇ ಶಿವರಾಮೇಗೌಡ ಬಣದಿಂದ ಮಾತ್ರ ಬಂದ್ಗೆ ಬೆಂಬಲ200 ಅಧಿಕ ರನ್ ಗಳಿಸಿದ ತಂಡ: ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ರನ್ ಔಟ್: ಆಶ್ಲೇ ನಾಫ್ಕೆ (ಆರ್‌ಸಿಬಿ)
ಮೊದಲ ಸ್ಟಂಪಿಂಗ್: ಮಾರ್ಕ್ ಬೌಚರ್ (ಆರ್‌ಸಿಬಿ)
ಮೊದಲ ಇಂಪ್ಯಾಕ್ಟ್ ಪ್ಲೇಯರ್: ತುಷಾರ್ ದೇಶಪಾಂಡೆ (ಸಿಎಸ್‌ಕೆ)
ಮೊದಲ ಉದಯೋನ್ಮುಖ ಪ್ಲೇಯರ್ ಪ್ರಶಸ್ತಿ: ಶ್ರೀವತ್ಸ್ ಗೋಸ್ವಾಮಿ (ಆರ್‌ಸಿಬಿ), (ಏಜೆನ್ಸೀಸ್).