ಗೋಲ್ಡ್ ಬೆಲೆಯಲ್ಲಿ ಇಳಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ನೋಡಿ ಮಾಹಿತಿ | Gold Price

ವಿಜಯವಾಣಿ (51)
Published on

Gold Rates: ಕಳೆದ ಒಂದು ವಾರದಲ್ಲಿ ಚಿನ್ನದ ದರದಲ್ಲಿ ಇಳಿಕೆ ಮಾತು ಬಹಳ ದೂರ ಸರಿದಿತ್ತು. ಇದರಿಂದ ಚಿನ್ನ ಖರೀದಿಸುವವರು ಸಹ ಗೋಲ್ಡ್ ಖರೀದಿ ಬಗ್ಗೆ ಆಸಕ್ತಿ ತೋರುವುದನ್ನೇ ಬಿಟ್ಟಿದ್ದರು. ಆದರೆ, ಒಂದು ವಾರದ ಬಳಿಕ ಇದೀಗ ದಿಢೀರ್ ಎಂಬಂತೆ ಚಿನ್ನದ ಬೆಲೆಯಲ್ಲಿ ಸುಧಾರಣೆ ಕಂಡಿದೆ. ಚಿನ್ನಾಭರಣಗಳ ಖರೀದಿಸಲು ತಯಾರಿ ನಡೆಸುತ್ತಿರುವವರಿಗೆ ಇದು ಶುಭ ಸುದ್ದಿ ಎಂದೇ ಹೇಳಬಹುದು.

ಚಿನ್ನದ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಆಗಸವನ್ನು ಹತ್ತುವ ಪ್ರಯತ್ನದಲ್ಲಿದೆ. ಆದರೆ, ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿರುವುದು ಗಮನಾರ್ಹ. ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 440 ರೂ. ಕುಸಿತ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 400 ರೂ. ಕುಸಿದಿದೆ. ಇದರೊಂದಿಗೆ, ಕಳೆದ ಎರಡು ದಿನಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 880 ರೂ. ಇಳಿಕೆ ಆಗಿದೆ.

ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ತೀವ್ರವಾಗಿ ಕುಸಿದಿದೆ. ಇಂದು, ಒಂದು ಕೆಜಿ ಬೆಳ್ಳಿ ದರದಲ್ಲಿ 2,000 ರೂ. ಇಳಿಕೆಯಾಗಿದೆ. ಇದರೊಂದಿಗೆ, ನಿನ್ನೆ ಮತ್ತು ಇಂದು ಒಂದು ಕೆಜಿ ಬೆಳ್ಳಿ 4,100 ರೂ. ಇಳಿಕೆ ಕಂಡಿದ್ದು, ಗ್ರಾಹಕರಿಗೆ ಸಿಹಿ ತಿಂದಷ್ಟು ಖುಷಿಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ನೋಡಿದರೆ, ಸ್ಪಾಟ್ ಚಿನ್ನದ ದರ ಔನ್ಸ್‌ಗೆ 3,022 (31.10 ಗ್ರಾಂ) ಡಾಲರ್​ನಲ್ಲಿ ಮುಂದುವರೆದಿದೆ. ಶುಕ್ರವಾರಕ್ಕೆ (ಮಾ.21) ಹೋಲಿಸಿದರೆ, ಚಿನ್ನದ ಔನ್ಸ್ ಬೆಲೆ 13.79 ಡಾಲರ್​ನಷ್ಟು ಕಡಿಮೆಯಾಗಿದೆ.

ಅದೇ ರೀತಿ, ಸ್ಪಾಟ್ ಬೆಳ್ಳಿ ದರವು ಔನ್ಸ್‌ಗೆ 33 ಡಾಲರ್​ಗಿಂತ ಹೆಚ್ಚಿದೆ. ಈ ಸಂದರ್ಭದಲ್ಲಿ, ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರಗಳು ಎಷ್ಟಿದೆ? ಎಂಬುದರ ವಿವರ ಹೀಗಿದೆ ಗಮನಿಸಿ.

ಇಂದಿನ ಚಿನ್ನದ ಬೆಲೆ

  • ದೆಹಲಿಯಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 82,450 ರೂ. ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ 89,980 ರೂ. ತಲುಪಿದೆ.
  • ಮುಂಬೈ, ಬೆಂಗಳೂರು ಮತ್ತು ಚೆನ್ನೈನಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 82,300 ರೂ. ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ 89,780 ರೂ. ಆಗಿದೆ.
  • ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 82,300 ರೂ. ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ 89,780 ರೂ. ಆಗಿದೆ.

ಬೆಳ್ಳಿ ಬೆಲೆ ವಿವರ

ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,01,000 ರೂ. ಆಗಿದೆ.

ಇನ್ನು ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,10,000 ರೂ. ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net