Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ ಮತ್ತು ನಕ್ಷತ್ರವು ಅವರ ಭವಿಷ್ಯದ ಜೀವನ ಮತ್ತು ಅವರ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ನಾವೀಗ ವರ್ಷದ ಕೊನೆಯ ತಿಂಗಳಿಗೆ ಪ್ರವೇಶ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ 2024 ಮುಗಿದು 2025ರ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರು ಕೂಡ ಇದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ. 2025ರ ಭವಿಷ್ಯದ ಜಾತಕದ ಆಧಾರದ ಮೇಲೆ, ಹೊಸ ವರ್ಷವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ದಿನಗಳನ್ನು ತಂದುಕೊಡಲಿದೆ.
ಎಲ್ಲ 12 ರಾಶಿಚಕ್ರದ ಚಿಹ್ನೆಗಳ ಮೇಲಿನ ಗ್ರಹಗಳ ಸ್ಥಾನಗಳು ಕೂಡ ಗಮನಾರ್ಹ ಪ್ರಭಾವ ಬೀರುತ್ತದೆ. ಒಬ್ಬರ ರಾಶಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುವ ಸ್ಥಾನದಲ್ಲಿ ಗ್ರಹಗಳಿದ್ದರೆ ಭಿಕ್ಷುಕನು ಕೂಡ ರಾಜನಾಗಬಹುದು. ಗ್ರಹಗಳ ಸ್ಥಾನಗಳು ಸರಿಯಿಲ್ಲದಿದ್ದಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ 2025ರ ಜ್ಯೋತಿಷ್ಯದ ಭವಿಷ್ಯವಾಣಿಯ ಪ್ರಕಾರ, ಹೊಸ ವರ್ಷವು ಅಪರೂಪದ ಗ್ರಹಗಳ ಸಂಯೋಜನೆಯಿಂದ ಸಂಭವಿಸುತ್ತದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಗುರು ಮತ್ತು ಶುಕ್ರನ ಸಂಯೋಜನೆಯೂ ಮಂಗಳಕರವಾದ ಗಜಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸುತ್ತದೆ. ಇದು 2025 ರಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ರಾಜಯೋಗಕ್ಕೆ ಕಾರಣವಾಗುತ್ತದೆ. ಆ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ವೃಷಭ ರಾಶಿ
ವೃಷಭ ರಾಶಿಯಲ್ಲಿ ಜನಿಸಿದವರಿಗೆ 2025 ರಲ್ಲಿ ಗಜಲಕ್ಷ್ಮಿ ರಾಜಯೋಗದಿಂದ ಆರ್ಥಿಕ ಬೆಳವಣಿಗೆಗೆ ಅವಕಾಶವಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಗುರು ಮತ್ತು ಶುಕ್ರನ ಸಂಯೋಗವು ವೃತ್ತಿಪರರಿಗೆ ಬಡ್ತಿ ಮತ್ತು ಸಂಬಳ ಹೆಚ್ಚಳವನ್ನು ನೀಡುತ್ತದೆ. ಅಲ್ಲದೆ, ವ್ಯಾಪಾರಸ್ಥರಿಗೂ ಭಾರಿ ಲಾಭವಾಗಲಿದೆ.
ತುಲಾ ರಾಶಿ
ಗುರು ಮತ್ತು ಶುಕ್ರನ ಸಂಯೋಗದಿಂದ ತುಲಾ ರಾಶಿಯವರಿಗೆ 2025ರ ಹೊಸ ವರ್ಷ ಸುವರ್ಣಯುಗವಾಗಲಿದೆ. ಅನೇಕ ರೀತಿಯಲ್ಲಿ ಹಣದ ಹರಿವು ಬರುತ್ತದೆ. ರಾಜನಂತೆ ಜೀವನವನ್ನು ನಡೆಸುವ ಅವಕಾಶವು ಈ ಅವಧಿಯಲ್ಲಿ ಖಂಡಿತವಾಗಿ ಉದ್ಭವಿಸುತ್ತದೆ. ಸಾಲದ ಸಮಸ್ಯೆಗಳು ಬಗೆಹರಿಯಲಿವೆ.
ಮೀನ ರಾಶಿ
ಗುರುವಿನ ಪ್ರಾಬಲ್ಯವಿರುವ ಮೀನ ರಾಶಿಯವರು ಈ ಗಜಲಕ್ಷ್ಮಿ ರಾಜಯೋಗದಿಂದ ಅನಿರೀಕ್ಷಿತ ಮತ್ತು ಅಗಾಧವಾದ ಲಾಭಗಳನ್ನು ಪಡೆಯುತ್ತಾರೆ. ಈ ಗ್ರಹಗಳ ಸಂಯೋಗವು ಮೀನ ರಾಶಿಯವರ ದೀರ್ಘಾವಧಿಯ ಆರ್ಥಿಕ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ಆದಾಯದ ಬಹು ದಾರಿಗಳು ತೆರೆದುಕೊಳ್ಳುತ್ತವೆ. ಒಟ್ಟಾರೆಯಾಗಿ, ಅವರು 2025 ರಲ್ಲಿ ರಾಜನಂತೆ ಜೀವನವನ್ನು ನಡೆಸಲಿದ್ದಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.
2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money