

Uric acid : ಮಾನವನ ದೇಹದಲ್ಲಿ ಪ್ರತಿನಿತ್ಯ ಅನೇಕ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಶಕ್ತಿ ಉತ್ಪಾದಿಸಿದರೆ, ಇನ್ನು ಕೆಲವು ವಿಷಕಾರಿ ವಸ್ತುಗಳನ್ನು ಉತ್ಪಾದಿಸುತ್ತವೆ. ಅವುಗಳಲ್ಲಿ ಯೂರಿಕ್ ಆಮ್ಮವೂ ಒಂದು. ಸಾಮಾನ್ಯವಾಗಿ ಹೇಳುವುದಾದರೆ, ಮೂತ್ರಪಿಂಡಗಳು ಯೂರಿಕ್ ಆಮ್ಮವನ್ನು ಫಿಲ್ಟರ್ ಮಾಡಿ ಮೂತ್ರದ ಮೂಲಕ ಹೊರಹಾಕುತ್ತವೆ. ಆದರೆ, ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ, ಯೂರಿಕ್ ಆಮ್ಲವು ರಕ್ತದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ.
ಇದು ಕ್ರಮೇಣ ಕೀಲುಗಳಲ್ಲಿ ಸಂಗ್ರಹವಾಗಿ ಗೌಟ್ (ಆರ್ಥ್ರೈಟಿಸ್)ನಂತಹ ನೋವು ಉಂಟಾಗಲು ಕಾರಣವಾಗುತ್ತದೆ. ಅನೇಕ ಜನರು ನಾವು ಸೇವಿಸುವ ಮಾಂಸಹಾರ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಆದರೆ, ನಾವು ಸೇವಿಸುವ ಕೆಲವು ತರಕಾರಿಗಳು ಸಹ ಯೂರಿಕ್ ಆಮ್ಮವನ್ನು ಹೆಚ್ಚಿಸುತ್ತವೆ. ಹಾಗಿದ್ದರೆ ಯಾವ ತರಕಾರಿ ಎಂದು ತಿಳಿಯಿರಿ......
ಪಾಲಕ್ ಸೊಪ್ಪು ಜೀವಸತ್ವಗಳು ಮತ್ತು ಕಬ್ಬಿಣ ಅಂಶವನ್ನು ಹೇರಳವಾಗಿ ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪ್ಯೂರಿನ್‌ಗಳು ಅಧಿಕವಾಗಿರುತ್ತದೆ. ದೇಹವು ಪ್ಯೂರಿನ್ಗಳನ್ನು ಪರಿವರ್ತಿಸಿದಾಗ ಯೂರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಆದರಿಂದ ಪಾಲಕ್ನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗುತ್ತದೆ. ಇದರಿಂದ ಕೀಲುಗಳಲ್ಲಿ ನೋವು, ಊತ ಉಂಟಾಗುತ್ತದೆ. ಹಾಗಾಗಿ ಪ್ರತಿದಿನ ಪಾಲಕ್ನ್ನು ತಿನ್ನುವುದನ್ನು ತಪ್ಪಿಸಿ.
ಅಣಬೆಯು ಪ್ರೊಟೀನ್ ಹಾಗೂ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದರೂ, ಇದರಲ್ಲಿ ಪ್ಯೂರಿನ್ಗಳ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಯಾರಲ್ಲಿ ಯೂರಿಕ್ ಆಮ್ಲ ಹೆಚ್ಚಾಗಿರುತ್ತದೆಯೋ ಅವರು ಮಿತವಾಗಿ ಅಣಬೆಯನ್ನು ಸೇವಿಸಬೇಕು. ಹೆಚ್ಚಾಗಿ ಸೇವಿಸುವುದರಿಂದ ಇದು ಜನರಲ್ಲಿ ಕೀಲು ನೋವನ್ನು ಹೆಚ್ಚಿಸುತ್ತದೆ.
ಹೂಕೋಸು ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಭರಿತ ತರಕಾರಿಯಾಗಿದೆ. ಆದರೆ, ಇದು ಸಾಧಾರಣ ಮಟ್ಟದಲ್ಲಿ ಪ್ಯೂರಿನ್ಗಳನ್ನು ಹೊಂದಿರುತ್ತದೆ. ಪ್ರತಿದಿನ ಆಹಾರದಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಮವನ್ನು ಹೆಚ್ಚಾಗಿಸುತ್ತದೆ. ಇದರಿಂದ ಕಾಲುಗಳಲ್ಲಿ ಊತ, ನೋವಿನಂತಹ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗಾಗಿ ಪ್ರತಿನಿತ್ಯ ಸೇವಿಸುವುದನ್ನು ಕಡಿಮೆ ಮಾಡಿ.
ಎಲ್ಲಾ ಆಹಾರಗಳು ಪ್ರೊಟೀನ್ನ ಅತ್ಯುತ್ತಮ ಮೂಲಗಳಾಗಿವೆ ಜೊತೆಗೆ ಪ್ಯೂರಿನ್ಗಳನ್ನು ಒಳಗೊಂಡಿದೆ. ಬಟಾಣಿಯನ್ನು ಆಗ್ಗಾಗೆ ಸೇವಿಸುವುದಿಂದ ದೇಹದಲ್ಲಿ ಯೂರಿಕ್ ಆಮ್ಮ ಹೆಚ್ಚಾಗುತ್ತದೆ. ಇದು ಮೂತ್ರಪಿಒಂಡದಲ್ಲಿ ಕಲ್ಲುಗಳು ಮತ್ತು ಕೀಲು ನೋವಿನ ಅಪಾಯವನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ವೈದ್ಯರ ಸಲಹೆಯ ಪ್ರಕಾರ, ವಾರಕ್ಕೆ ಸೀಮಿತವಾಗಿ ಸೇವಿಸಿರಿ..
ಬೆಂಡೆಕಾಯಿ ಹಲವಾರು ಜನರು ಇಷ್ಟಪಡುವಂತಹ ಒಂದು ತರಕಾರಿಯಾಗಿದೆ. ಇದರಲ್ಲಿ ಪ್ಯೂರಿನ್‌ಗಳು ಕಡಿಮೆ ಇದ್ದರೂ, ಸೂಕ್ಷ್ಮ ವ್ಯಕ್ತಿಗಳಲ್ಲಿ ಇದು ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಬೆಂಡೆಕಾಯಿ ಸೇವಿಸುವುದರಿಂದ ನಮ್ಮ ಕೀಲುಗಳಲ್ಲಿ ಊತವನ್ನು ಅನುಭವಿಸುತ್ತಾರೆ. ಹಾಗಾಗಿ ಇದರ ಬದಲಿಗೆ ಹಾಲು, ಮೊಸರು, ಸಸ್ಯ ಆಧಾರಿತ ಪ್ರೊಟೀನ್ ಆಹಾರಗಳನ್ನು ಸೇವಿಸಿ.
ಬೀನ್ಸ್ ಕಾಳುಗಳಲ್ಲಿ ಯೂರಿಕ್ ಆಮ್ಮ ಹೆಚ್ಚಾಗಿರುತ್ತದೆ ಇದು ಅಧಿಕ ಪ್ರೊಟೀನ್ಗಳನ್ನು ಹೊಂದಿದ್ದರೂ, ಇದರ ಜೊತೆಗೆ ಪ್ಯೂರಿನ್ಗಳನ್ನು ಹೊಂದಿರುತ್ತದೆ. ಯೂರಿಕ್ ಸಮಸ್ಯೆ ಇರುವಂತವರು ಬೀನ್ಸ್ ಬೀಜಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಸೇವಿಸುವುದಕ್ಕೂ ಮುನ್ನ ವೈದ್ಯರ ಸಲಹೆ ಪಡೆಯಿರಿ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ