More

    ಈ 5 ಷೇರುಗಳ ಬೆಲೆ ಗುರುವಾರ ಒಂದೇ ದಿನದಲ್ಲಿ 20%ರಷ್ಟು ಏರಿಕೆ: ಶುಕ್ರವಾರವೂ ಈ ಸ್ಟಾಕ್​ಗಳಲ್ಲಿ ಲಾಭದ ನಿರೀಕ್ಷೆ

    ಮುಂಬೈ: ಈ ಸ್ಟಾಕ್‌ಗಳಲ್ಲಿ ಸದ್ಯ ಅಪ್‌ಟ್ರೆಂಡ್ ಇದ್ದು, ಟ್ರೇಡಿಂಗ್ ಸೆಟಪ್ ಆಗಿದೆ. ಈ ಷೇರುಗಳು ಮುಂಬರುವ ವಹಿವಾಟು ಅವಧಿಗಳಲ್ಲಿಯೂ ಲಾಭ ಮಾಡಬಹುದಾಗಿದೆ.

    ಗುರುವಾರ ಷೇರು ಮಾರುಕಟ್ಟೆ ಬಹುತೇಕ ಯಥಾಸ್ಥಿತಿಯಲ್ಲಿದ್ದರೂ ಕೆಲವು ಪೆನ್ನಿ ಸ್ಟಾಕ್‌ಗಳು 20 ಪ್ರತಿಶತದಷ್ಟು ಏರಿಕೆ ದಾಖಲಿಸಿವೆ. ಈ ಸ್ಟಾಕ್‌ಗಳಲ್ಲಿ ಅಪ್‌ಟ್ರೆಂಡ್ ಇದ್ದು, ಇವುಗಳ ಟ್ರೇಡಿಂಗ್ ಸೆಟಪ್ ಆಗಿದೆ. ಈ ಷೇರುಗಳು ಮುಂಬರುವ ವಹಿವಾಟು ಅವಧಿಗಳಲ್ಲಿಯೂ ಲಾಭ ನೀಡಬಹುದು. ಶುಕ್ರವಾರ ಮಾರುಕಟ್ಟೆಯಲ್ಲಿ ಏರುಗತಿಯಲ್ಲಿ ಉಳಿಯಬಹುದಾದ ಷೇರುಗಳತ್ತ ಒಂದು ನೋಟ.

    ಸ್ವಸ್ತಿಕ್ ಪ್ಲಾಸ್ಕಾನ್ (Swashthik Plascon):

    ಗುರುವಾರ ಈ ಸ್ಟಾಕ್‌ನಲ್ಲಿ ಉತ್ತಮ ಪ್ರಮಾಣದ ಖರೀದಿ ಕಂಡುಬಂದು, ಈ ಸ್ಟಾಕ್ ಅನ್ನು ಶೇಕಡಾ 20 ರಷ್ಟು ಏರಿಕೆ ಕಂಡು 85.20 ರೂಪಾಯಿ ಮಟ್ಟ ಮುಟ್ಟಿತು. ಈ ಸ್ಟಾಕ್‌ನಲ್ಲಿ ಖರೀದಿದಾರರಿದ್ದಾರೆ. ಶುಕ್ರವಾರದ ವಹಿವಾಟಿನ ಅವಧಿಯಲ್ಲೂ ಈ ಷೇರುಗಳಲ್ಲಿ ಗಮನಾರ್ಹ ಏರಿಕೆ ಕಾಣಬಹುದು.

    ಲಾರ್ಡ್ಸ್ ಕ್ಲೋರೋ ಅಲ್ಕಲಿ (Lords Chloro Alkali):

    ಗುರುವಾರದ ವಹಿವಾಟಿನಲ್ಲಿ ಈ ಸ್ಟಾಕ್‌ನಲ್ಲಿ ಬುಲ್ಲಿಶ್ ಭಾವನೆಗಳು ಕಂಡುಬಂದವು. ಈ ಷೇರು ಶೇಕಡಾ 20 ರಷ್ಟು ಏರಿಕೆಯಾದ ನಂತರ, 139.20 ರೂಪಾಯಿ ಮಟ್ಟವನ್ನು ಮುಟ್ಟಿತು. ಈ ಷೇರುಗಳಲ್ಲಿನ ಬುಲ್ಲಿಶ್ ಭಾವನೆಗಳು ಶುಕ್ರವಾರದ ಮಾರುಕಟ್ಟೆಯಲ್ಲೂ ಮುಂದುವರಿಯಬಹುದು.

    ಬಯೋಫಿಲ್ ಕೆಮಿಕಲ್ಸ್ (Biofil Chemicals):

    ಗುರುವಾರದ ವಹಿವಾಟಿನಲ್ಲಿ ಈ ಸ್ಟಾಕ್‌ನಲ್ಲಿ ಗಮನಾರ್ಹ ಏರಿಕೆ ಕಂಡುಬಂದು, 20 ಪ್ರತಿಶತದಷ್ಟು ಹೆಚ್ಚಿದ ನಂತರ, ಈ ಸ್ಟಾಕ್ ರೂ 72.23 ಮಟ್ಟದಲ್ಲಿ ಕೊನೆಗೊಂಡಿತು. ಈ ಏರುಗತಿಯು ಶುಕ್ರವಾರದ ವಹಿವಾಟಿನ ಅವಧಿಯಲ್ಲೂ ಮುಂದುವರಿಯಬಹುದು.

    ಕ್ರಿಶ್ಕಾ ಸ್ಟ್ರಾಪಿಂಗ್ ಸೋಲುಷನ್ಸ್​ (Krishca Strapping Solutions):

    ಗುರುವಾರದ ಮಾರುಕಟ್ಟೆಯಲ್ಲಿ ಈ ಸ್ಟಾಕ್‌ನಲ್ಲಿ ಖರೀದಿದಾರರು ಹೆಚ್ಚಿನ ಆಸಕ್ತಿಯನ್ನು ತೋರಿಸಿದರು. 20 ರಷ್ಟು ಏರಿಕೆಯಾದ ನಂತರ ಈ ಷೇರು ರೂ 261.95 ರ ಮಟ್ಟ ಮುಟ್ಟಿತು. ಶುಕ್ರವಾರವೂ ಈ ಸ್ಟಾಕ್‌ನಲ್ಲಿ ಖರೀದಿದಾರರ ಪ್ರವೃತ್ತಿಯನ್ನು ಕಾಣಬಹುದು, ಇದರಿಂದಾಗಿ ಈ ಸ್ಟಾಕ್ ಮತ್ತಷ್ಟು ಏರಿಕೆಯಾಗಬಹುದು.

    ನೆಟ್ ಅವೆನ್ಯೂ ಟೆಕ್ (Net Avenue Tech):

    ಗುರುವಾರದ ವಹಿವಾಟಿನ ಅವಧಿಯಲ್ಲಿ ಈ ಸ್ಟಾಕ್‌ನಲ್ಲಿ ಖರೀದಿಯ ಭಾವನೆಗಳು ಕಂಡುಬಂದವು. ಶೇಕಡಾ 20 ರಷ್ಟು ಏರಿಕೆಯಾದ ನಂತರ, ಈ ಸ್ಟಾಕ್ ರೂ 23.85 ರ ಮಟ್ಟ ಮುಟ್ಟಿತು. ಶುಕ್ರವಾರ ಮಾರುಕಟ್ಟೆಯಲ್ಲೂ ಈ ಷೇರು ಮುನ್ನಡೆಯಲ್ಲಿ ಉಳಿಯಬಹುದು.

    ಟಾಟಾ ಮಿಡ್ ಕ್ಯಾಪ್ ಫಂಡ್ ಸಿಪ್​: 10 ಸಾವಿರವಾಯ್ತು 1.42 ಕೋಟಿ ರೂಪಾಯಿ!

    1:5 ಸ್ಟಾಕ್ ಸ್ಪ್ಲಿಟ್, 1:1 ಬೋನಸ್ ಷೇರು ನೀಡುತ್ತಿದೆ ಐಟಿ ಕಂಪನಿ​: 3 ತಿಂಗಳಲ್ಲಿ 265% ಏರಿಕೆ ದಾಖಲಿಸಿದ ಮಲ್ಟಿಬ್ಯಾಗರ್​ ಸ್ಟಾಕ್​ಗೆ ಮತ್ತೆ ಬೇಡಿಕೆ

    ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ಇತಿಹಾಸ ಸೃಷ್ಟಿಸಿದ ಚಿನ್ನದ ಬೆಲೆ, 72 ಸಾವಿರ ರೂ. ದಾಟಿದ ಬೆಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts