More

    ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ಇತಿಹಾಸ ಸೃಷ್ಟಿಸಿದ ಚಿನ್ನದ ಬೆಲೆ, 72 ಸಾವಿರ ರೂ. ದಾಟಿದ ಬೆಳ್ಳಿ

    ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿ ಇತಿಹಾಸವನ್ನು ಸೃಷ್ಟಿಸಿದ ನಂತರ, ಬುಲಿಯನ್ ಮಾರುಕಟ್ಟೆ ಕೂಡ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 65000 ರೂ. ಗಡಿಯನ್ನು ದಾಟಿದೆ.

    ಗುರುವಾರದಂದು 24 ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ 10 ಗ್ರಾಂಗೆ 65049 ರೂ.ಗೆ ತಲುಪಿದೆ. ಅಲ್ಲದೆ, ಬೆಳ್ಳಿಯ ಹೊಳಪು ಕೂಡ ಹೆಚ್ಚಿದೆ. ಬೆಳ್ಳಿಯ ಬೆಲೆ ಕೆಜಿಗೆ 411 ರೂ ಏರಿಕೆಯಾಗಿ 72121 ರೂಪಾಯಿ ಮುಟ್ಟಿದೆ.

    IBJA (ಇಂಡಿಯಾ ಬುಲಿಯನ್​ ಆ್ಯಂಡ್​ ಜ್ಯುವೆಲರ್ಸ್​ ಅಸೋಸಿಯೇಷನ್​) ಹೊಸ ದರಗಳ ಪ್ರಕಾರ, ಈಗ ಚಿನ್ನವು ಮಾರ್ಚ್ 5, 2024 ರ ಸಾರ್ವಕಾಲಿಕ ಗರಿಷ್ಠ ಬೆಲೆಯನ್ನು ಹಿಂದಿಕ್ಕಿ, ಗುರುವಾರ ಮಾರ್ಚ್ 7 ರಂದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಈಗ ಪ್ರತಿ 10 ಗ್ರಾಂಗೆ 509 ರೂಪಾಯಿಗಳಷ್ಟು ಜಿಗಿದಿದ್ದು, 59584 ರೂಪಾಯಿಗಳಿಗೆ ತಲುಪಿದೆ.

    18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 417 ರೂಪಾಯಿ ಏರಿಕೆಯಾಗಿದ್ದು, 48786 ರೂಪಾಯಿಗೆ ತಲುಪಿದೆ. 14 ಕ್ಯಾರೆಟ್ ಚಿನ್ನದ ಬೆಲೆಯೂ 325 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂಗೆ 38053 ರೂ. ಆಗಿದೆ.

    ಚಿನ್ನ ಮತ್ತು ಬೆಳ್ಳಿಯ ಈ ದರಗಳನ್ನು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(IBJA) ನೀಡುತ್ತದೆ. ಈ ದರದಲ್ಲಿ ಜಿಎಸ್‌ಟಿ ಮತ್ತು ಆಭರಣ ತಯಾರಿಕೆ ಶುಲ್ಕಗಳು ಅನ್ವಯಿಸುವುದಿಲ್ಲ. ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ 1000 ರಿಂದ 2000 ರೂ.ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಷೇರುಪೇಟೆಯಲ್ಲಿ 10-15 % ಕುಸಿತವಾದಾಗ ಈ 3 ಷೇರುಗಳಲ್ಲಿ ಹೂಡಿಕೆ ಮಾಡಲು ಹಣ ಇಟ್ಟುಕೊಳ್ಳಿ: ಮುಂದೆ ಸಿಗಲಿದೆ ಬಂಪರ್ ಲಾಭ…

    7 ರೂಪಾಯಿ ಇದ್ದ ಷೇರು ಬೆಲೆ 80 ಪೈಸೆಗೆ ಕುಸಿತ: ಮಂಗಳವಾರ ಈ ಪೆನ್ನಿ ಸ್ಟಾಕ್​ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಕೋಟ್ಯಂತರ ಜನರಿಗೆ ಸಿಹಿ ಸುದ್ದಿ: ಹೋಳಿ ಹಬ್ಬದಂದು ಎಲ್‌ಪಿಜಿ ಸಿಲಿಂಡರ್ ಉಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts