More

    ಕೋಟ್ಯಂತರ ಜನರಿಗೆ ಸಿಹಿ ಸುದ್ದಿ: ಹೋಳಿ ಹಬ್ಬದಂದು ಎಲ್‌ಪಿಜಿ ಸಿಲಿಂಡರ್ ಉಚಿತ!

    ನವದೆಹಲಿ: ಹೋಳಿ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಕೋಟ್ಯಂತರ ಜನರಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ಸಿಗಲಿದೆ. ಹೌದು, ನೀವು ಸರಿಯಾಗಿ ಕೇಳಿದ್ದೀರಿ. ನೀವು ಉತ್ತರ ಪ್ರದೇಶದ ನಿವಾಸಿಗಳಾಗಿದ್ದರೆ, ಹೋಳಿ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಉಚಿತ ಗ್ಯಾಸ್ ಸಿಲಿಂಡರ್​ಗಳನ್ನು ನೀಡುತ್ತದೆ. ಇದಕ್ಕಾಗಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ.

    2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆಯನ್ನು ಪ್ರಾರಂಭಿಸಿದ್ದರು. ಈ ಯೋಜನೆಯಡಿ 9 ಕೋಟಿಗೂ ಹೆಚ್ಚು ಜನರಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ.

    ವಾಸ್ತವವಾಗಿ, ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯದ 1.75 ಕೋಟಿ ಅರ್ಹ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ಮರುಪೂರಣ ವಿತರಣಾ ಅಭಿಯಾನವನ್ನು ಪ್ರಾರಂಭಿಸಿದ್ದರು. ವರ್ಷಕ್ಕೆ ಎರಡು ಬಾರಿ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲು ಸರ್ಕಾರ ಯೋಜಿಸಿದೆ. ದೀಪಾವಳಿ ಮತ್ತು ಹೋಳಿ ಸಂದರ್ಭದಲ್ಲಿ. ಈ ಯೋಜನೆಯಡಿ, ನವೆಂಬರ್ ತಿಂಗಳ ದೀಪಾವಳಿಯ ಸಂದರ್ಭದಲ್ಲಿ ಎಲ್​ಪಿಜಿ ಸಿಲಿಂಡರ್​ಗಳನ್ನು ನೀಡಲಾಗಿದೆ. ಈಗ ಫಲಾನುಭವಿಗಳಿಗೆ ಹೋಳಿಯಲ್ಲಿಯೂ ಈ ಉಡುಗೊರೆ ಸಿಗಲಿದೆ.

    2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ವಲಾ ಯೋಜನೆ ಆರಂಭಿಸಿದ್ದರು. ಈ ಯೋಜನೆಯಡಿ 9 ಕೋಟಿಗೂ ಹೆಚ್ಚು ಜನರಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಈ ಯೋಜನೆಯಲ್ಲಿ ಸರ್ಕಾರ ಪ್ರತಿ ಸಿಲಿಂಡರ್‌ಗೆ 300 ರೂ. ನಿಗದಿಪಡಿಸಿದೆ. ಈ ಮೊದಲು ಈ ಸಬ್ಸಿಡಿ 200 ರೂಪಾಯಿ ಇತ್ತು, ಕಳೆದ ವರ್ಷವಷ್ಟೇ ಸಬ್ಸಿಡಿಯನ್ನು 100 ರೂಪಾಯಿ ಹೆಚ್ಚಿಸಲಾಗಿತ್ತು. ಫಲಾನುಭವಿ ವರ್ಗವು ಒಂದು ವರ್ಷದಲ್ಲಿ 12 ಎಲ್​ಪಿಜಿ ಸಿಲಿಂಡರ್‌ಗಳಿಗೆ ಈ ಸಬ್ಸಿಡಿಯನ್ನು ಪಡೆಯುತ್ತದೆ.

    7 ರೂಪಾಯಿ ಇದ್ದ ಷೇರು ಬೆಲೆ 80 ಪೈಸೆಗೆ ಕುಸಿತ: ಮಂಗಳವಾರ ಈ ಪೆನ್ನಿ ಸ್ಟಾಕ್​ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಸಚಿನ್​ ತೆಂಡೂಲ್ಕರ್ ಬಳಿ 4.5 ಲಕ್ಷ ಷೇರು: ಒಂದೇ ತಿಂಗಳಲ್ಲಿ 44ರಷ್ಟು ಏರಿಕೆ, ದೊಡ್ಡ ಒಪ್ಪಂದದ ನಂತರ ಟಾರ್ಗೆಟ್​ ಪ್ರೈಸ್​ ಹೆಚ್ಚಳ

    74000 ಗಡಿ ದಾಟಿದ ಬಿಎಸ್​ಇ ಸೂಚ್ಯಂಕ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts