More

    7 ರೂಪಾಯಿ ಇದ್ದ ಷೇರು ಬೆಲೆ 80 ಪೈಸೆಗೆ ಕುಸಿತ: ಮಂಗಳವಾರ ಈ ಪೆನ್ನಿ ಸ್ಟಾಕ್​ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: 84 ಪೈಸೆಯ ಪೆನ್ನಿ ಸ್ಟಾಕ್​ ಮೇಲೆ ಹೂಡಿಕೆದಾರರು ಮುಗಿಬಿದ್ದು ಖರೀದಿಸಿದ್ದರಿಂದ ಮಂಗಳವಾರ ಈ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಯಿತು.
    ಪೆನ್ನಿ ಷೇರುಗಳು ಕಡಿಮೆ ಅವಧಿಯಲ್ಲಿ ಬಲವಾದ ಆದಾಯ ನೀಡುತ್ತವೆ. ಆದರೆ, ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡದಿದ್ದರೆ ಇವುಗಳ ಮೇಲಿನ ಬೆಟ್ಟಿಂಗ್ ಅಪಾಯಕಾರಿ ಕೂಡ.
    ವಿಯಾನ್​ ಇಂಡಸ್ಟ್ರೀಸ್​ ಲಿಮಿಟೆಡ್​ (Viaan Industries Ltd) ಷೇರುಗಳ ಬೆಲೆ ಮಂಗಳವಾರ ಶೇ. 5ರಷ್ಟು ಹೆಚ್ಚಳ ಕಂಡಿದ್ದರಿಂದ ಅಪ್ಪರ್​ ಸರ್ಕ್ಯೂಟ್​ ವಿಧಿಸಲಾಯಿತು. ಈ ಮೂಲಕ ಈ ಷೇರುಗಳ ಬೆಲೆ 0.84 ರೂಪಾಯಿ (84 ಪೈಸೆ) ತಲುಪಿತು.

    ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳ ಬೆಲೆ ಕಳೆದ ಐದು ದಿನಗಳಲ್ಲಿ 3.70% ಹೆಚ್ಚಾಗಿದೆ.ಒಂದು ತಿಂಗಳಲ್ಲಿ 7% ಮತ್ತು ಆರು ತಿಂಗಳಲ್ಲಿ 45% ನಷ್ಟು ಏರಿಕೆ ಕಂಡಿದೆ. ಈ ವರ್ಷದ ಆರಂಭದಿಂದ ಇದುವರೆಗೆ 27.27%ರಷ್ಟು ಲಾಭ ನೀಡಿದೆ. ಈ ಷೇರು ಒಂದು ವರ್ಷದಲ್ಲಿ 21.74% ಏರಿಕೆಯಾಗಿದ್ದರೂ, ಕಳೆದ ಐದು ವರ್ಷಗಳಲ್ಲಿ 89% ನಷ್ಟು ಕುಸಿದಿದೆ.

    ಐದು ವರ್ಷಗಳ ಹಿಂದೆ ಈ ಸ್ಟಾಕ್ ಬೆಲೆ 7 ರೂಪಾಯಿಗೂ ಅಧಿಕ ಇತ್ತು. ಇದರ 52 ವಾರದ ಗರಿಷ್ಠ ಬೆಲೆ ರೂ 0.96 ಮತ್ತು 52 ವಾರದ ಕನಿಷ್ಠ ಬೆಲೆ ರೂ 0.49 ಆಗಿದೆ.

    ಕಂಪನಿಯ ಮಾರುಕಟ್ಟೆ ಮೌಲ್ಯ 9.26 ಕೋಟಿ ರೂ. ಇದೆ. ವಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತೀಯ ಮೂಲದ ಕಂಪನಿಯಾಗಿದೆ. ಕಂಪನಿಯು ಸರಕುಗಳು, ಎಲೆಕ್ಟ್ರಾನಿಕ್ಸ್ ಸರಕುಗಳು ಮತ್ತು ಮೊಬೈಲ್ ಆಧಾರಿತ ಆಟಗಳು, ಅಪ್ಲಿಕೇಶನ್‌ಗಳು ಮತ್ತು ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅನಿಮೇಟೆಡ್ ಚಲನಚಿತ್ರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಈ ಕಂಪನಿಯ ಉತ್ಪನ್ನಗಳನ್ನು ಭಾರತ ಮತ್ತು ವಿದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ.

    ಭಾರತದ ಮೊದಲ ನಾಲ್ವರು ಗಗನಯಾತ್ರಿಗಳ ಹೆಸರು ಬಹಿರಂಗ: ಹೆಸರು ಘೋಷಿಸಿ ಚಪ್ಪಾಳೆ ತಟ್ಟಿ ಹರ್ಷದ ವ್ಯಕ್ತಪಡಿಸಿದ ಪ್ರಧಾನಿ ಮೋದಿ

    ರಿಲಯನ್ಸ್ ಮೀಡಿಯಾ- ಡಿಸ್ನಿ ಡೀಲ್ ಬಗ್ಗೆ ಅಂಬಾನಿ ಕಂಪನಿ ಸ್ಪಷ್ಟನೆ: ಷೇರು ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿದ ಬ್ರೋಕರೇಜ್​ ಸಂಸ್ಥೆ

    ಎಲೆಕ್ಟ್ರಿಕ್​ ವಾಹನ ತಯಾರಿಕೆ ವಲಯದಲ್ಲಿ ಹೂಡಿಕೆ: ಟಾಟಾ ಗ್ರೂಪ್​ನಿಂದ ಶೀಘ್ರದಲ್ಲಿಯೇ ಮತ್ತೊಂದು ಬೃಹತ್​ ಐಪಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts