More

    ರಿಲಯನ್ಸ್ ಮೀಡಿಯಾ- ಡಿಸ್ನಿ ಡೀಲ್ ಬಗ್ಗೆ ಅಂಬಾನಿ ಕಂಪನಿ ಸ್ಪಷ್ಟನೆ: ಷೇರು ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿದ ಬ್ರೋಕರೇಜ್​ ಸಂಸ್ಥೆ

    ಮುಂಬೈ: ವಾಲ್ಟ್ ಡಿಸ್ನಿ ಜತೆಗಿನ ವಿಲೀನ ಒಪ್ಪಂದದ ಸುದ್ದಿಗೆ ಮುಖೇಶ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಸ್ಪಷ್ಟನೆ ನೀಡಿದೆ.

    ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ರಿಲಯನ್ಸ್ ಕಂಪನಿಯು ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ನಾವು ಮಾಧ್ಯಮ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಮಗೆ ಹಾಗೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗೆ ಮಾಡಿದರೆ ನಮಗೆ ಅನ್ಯಾಯವಾಗುತ್ತದೆ ಎಂದು ರಿಲಯನ್ಸ್ ತಿಳಿಸಿದೆ.

    ಕಂಪನಿಯು ವಿಭಿನ್ನ ಅವಕಾಶಗಳನ್ನು ಮೌಲ್ಯಮಾಪನ ಮಾಡುತ್ತದೆ. ಇದರ ಹೊರತಾಗಿ ಅಂತಹದ್ದೇನೂ ಇಲ್ಲ ಎಂದು ರಿಲಯನ್ಸ್ ಕಂಪನಿಯು ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಮಾಹಿತಿ ನೀಡಿದೆ.

    ಡಿಸ್ನಿ ಮತ್ತು ರಿಲಯನ್ಸ್ ಭಾರತದಲ್ಲಿ ತಮ್ಮ ಮಾಧ್ಯಮ (ಮೀಡಿಯಾ) ಕಾರ್ಯಾಚರಣೆಗಳನ್ನು ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಮಾಧ್ಯಮಗಳ ವರದಿಗಳು ಹೇಳಿವೆ.

    ರಿಲಯನ್ಸ್‌ನ ಮಾಧ್ಯಮ ವಿಭಾಗ ಮತ್ತು ಅದರ ಸಂಬಂಧಿತ ಕಂಪನಿಗಳು ವಿಲೀನಗೊಂಡ ಘಟಕದಲ್ಲಿ ಕನಿಷ್ಠ 61 ಪ್ರತಿಶತ ಪಾಲನ್ನು ಹೊಂದುವ ನಿರೀಕ್ಷೆಯಿದೆ. ಏತನ್ಮಧ್ಯೆ, ಡಿಸ್ನಿ ಉಳಿದ ಪಾಲನ್ನು ಹೊಂದಲಿದೆ. ಈ ವಾರದಲ್ಲಿ ಒಪ್ಪಂದವನ್ನು ಪ್ರಕಟಿಸಬಹುದು ಎಂದು ವರದಿಗಳಲ್ಲಿ ಹೇಳಲಾಗಿದೆ. ಆದರೆ, ಈಗ ರಿಲಯನ್ಸ್ ಈ ವರದಿಗಳನ್ನು ನಿರಾಕರಿಸಿದೆ.

    ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು 3000 ರೂಪಾಯಿಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿದವು.

    ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ವಿವಿಧ ಅವಧಿಗಳಲ್ಲಿ ಬಿಎಸ್ಇ ಸೂಚ್ಯಂಕಕ್ಕೆ ಹೋಲಿಸಿದರೆ ಹೆಚ್ಚಿನ ಆದಾಯವನ್ನು ನೀಡಿವೆ. ಇತ್ತೀಚೆಗೆ ರಿಲಯನ್ಸ್ ಷೇರುಗಳ ಮೇಲೆ ಎಲಾರಾ ಸೆಕ್ಯುರಿಟೀಸ್ ಬ್ರೋಕರೇಜ್​ ಸಂಸ್ಥೆಯು 3,354 ರೂ.ಗಳ ಗುರಿಯನ್ನು ನಿಗದಿಪಡಿಸಿದೆ.

    ಎಲೆಕ್ಟ್ರಿಕ್​ ವಾಹನ ತಯಾರಿಕೆ ವಲಯದಲ್ಲಿ ಹೂಡಿಕೆ: ಟಾಟಾ ಗ್ರೂಪ್​ನಿಂದ ಶೀಘ್ರದಲ್ಲಿಯೇ ಮತ್ತೊಂದು ಬೃಹತ್​ ಐಪಿಒ

    1:5 ಷೇರು ವಿಭಜನೆಗೆ ಅನುಮತಿ: ಸರ್ಕಾರಿ ಬ್ಯಾಂಕ್​ ಸ್ಟಾಕ್​ ಖರೀದಿಗೆ ಬ್ರೋಕರೇಜ್​ ಸಂಸ್ಥೆಗಳ ಸಲಹೆ, ಟಾರ್ಗೆಟ್​ ಪ್ರೈಸ್​ ಏರಿಕೆ

    ಕ್ಷಿಪಣಿ ತಯಾರಿಸುವ ಕಂಪನಿಯ ಷೇರು ಗಳಿಕೆ ರಾಕೆಟ್​ ವೇಗ: ವಿದೇಶಿಗರನ್ನು ಸೆಳೆಯುತ್ತಿರುವ ಸಂಸ್ಥೆಯಿಂದ ಹೊಸ ಉತ್ಪಾದನೆ ಸೌಲಭ್ಯ ಸ್ಥಾಪನೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts