More

    ವಿಶ್ವ ಹಿಂದು ಪರಿಷತ್ತಿನಿಂದ ಮತದಾನ ಜಾಗೃತಿ

    ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡುವಂತೆ ವಿಶ್ವ ಹಿಂದು ಪರಿಷತ್ತಿನ ನಗರ ವಿಭಾಗದಿಂದ ಮಹಿಳೆಯರಿಗೆ ಅರಿಶಿಣ, ಕುಂಕುಮ ನೀಡುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸಲಾಯಿತು.
    ವಿದ್ಯಾರಣ್ಯಪುರಂನಲ್ಲಿರುವ ಅಂಬೇಡ್ಕರ್ ಕಾಲನಿಯಲ್ಲಿ ಮನೆ, ಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ, ಕುಂಕುಮ ಹಾಗೂ ಕಡ್ಡಾಯ ಮತದಾನದ ಕರೆಯೋಲೆ ನೀಡಿ ಮತದಾನಕ್ಕೆ ಆಹ್ವಾನಿಸಲಾಯಿತು.
    ವಿಶ್ವ ಹಿಂದು ಪರಿಷತ್ತಿನ ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ ಮಾತನಾಡಿ, ಮತಹಕ್ಕು ಕೇವಲ ನಮ್ಮ ಹಕ್ಕು ಮಾತ್ರವಲ್ಲ, ನಮ್ಮ ಜವಾಬ್ದಾರಿ ಆಯ್ಕೆಯೂ ಆಗಿದೆ. ಜಿಲ್ಲೆ, ದೇಶದ ಅಭಿವೃದ್ಧಿಗೆ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದಾಗಿದೆ. ಹಾಗಾಗಿ, ಏ.26ರಂದು ನಡೆಯುವ ಮತದಾನದಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಆಹ್ವಾನ ನೀಡಲಾಗಿದೆ ಎಂದರು.
    ನಾವು ಪ್ರತಿಯೊಂದು ಹಬ್ಬವನ್ನು ಕುಟುಂಬದ ಸದಸ್ಯರ ಜತೆಗೆ ಆಚರಣೆ ಮಾಡುತ್ತೇವೋ ಅದೇ ರೀತಿ ನಮ್ಮ ರಾಜ್ಯದ ಮತ್ತು ದೇಶದ ಅತಿದೊಡ್ಡ ಹಬ್ಬ ಈ ಚುನಾವಣೆ ಹಬ್ಬವು ನಮ್ಮ ದೇಶದ ಹೆಮ್ಮೆ, ಗರ್ವವಾದ ಹಬ್ಬವಾಗಿದೆ. ಈ ಹಬ್ಬದಲ್ಲಿ ನಗರ ಮತ್ತು ಜಿಲ್ಲೆಯ ಜನರು ಭಾಗವಹಿಸಬೇಕು ಎಂದರು.
    ವಿಶ್ವ ಹಿಂದು ಪರಿಷತ್ತಿನ ಸಹ ಕಾರ್ಯದರ್ಶಿಗಳಾದ ಜಯಶ್ರೀ ಶಿವರಾಂ, ಪುನೀತಾ, ಸೇವಾ ಪ್ರಮುಖ ಸರಸ್ವತಿ ಹಲಸಗಿ, ಪ್ರಖಂಡ ಸಂಯೋಜಕಿಯಾದ ರೂಪಾ, ಭಾಗ್ಯ, ಲಲಿತಾಂಬ, ಸರಸ್ವತಿ ಪ್ರಸಾದ್ ಇತರರು ಮತದಾನದ ಬಾಗಿನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts