More

  16 ತಿಂಗಳುಗಳ ಬಳಿಕ ಸೆಮೀಸ್‌ಗೆ ಶ್ರೀಕಾಂತ್

  ಬಸೆಲ್: ಮಾಜಿ ವಿಶ್ವ ನಂ. 1 ಷಟ್ಲರ್ ಕಿಡಂಬಿ ಶ್ರೀಕಾಂತ್ ಸ್ವಿಸ್ ಓಪನ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿೈನಲ್‌ಗೇರಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯ ಎನಿಸಿದ್ದಾರೆ. ಕಿರಣ್ ಜಾರ್ಜ್, ಪ್ರಿಯಾಂಶು ರಾಜಾವತ್ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್ ಕ್ವಾರ್ಟರ್‌ೈನಲ್‌ನಲ್ಲಿ ನಿರಾಸೆ ಅನುಭವಿಸಿದರು.

  ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕೆ. ಶ್ರೀಕಾಂತ್ 21-10, 21-14 ನೇರಗೇಮ್‌ಗಳಿಂದ ಚೀನಾ ತೈಪೆಯ ಚಿಯಾ ಹಾವೊ ಲೀ ವಿರುದ್ಧ 35 ನಿಮಿಷಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಂಡರು. ಇದರೊಂದಿಗೆ ಶ್ರೀಕಾಂತ್ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ 16 ತಿಂಗಳ ಬಳಿಕ ಸೆಮಿೈನಲ್‌ಗೆ ಅರ್ಹತೆ ಪಡೆದರು. 2022ರಲ್ಲಿ ಹೈಲೋ ಓಪನ್‌ನಲ್ಲಿ ಕೊನೆಯ ಬಾರಿ ಉಪಾಂತ್ಯದಲ್ಲಿ ಶ್ರೀಕಾಂತ್ ಆಡಿದ್ದರು.

  2021ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಸೆಮೀಸ್‌ನಲ್ಲಿ ಚೀನಾ ತೈಪೆಯ ವಿಶ್ವ ನಂ.22 ಲಿನ್ ಚುನ್-ಯಿ ವಿರುದ್ಧ ಸೆಣಸಲಿದ್ದಾರೆ. ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಕಿರಣ್ ಜಾರ್ಜ್ 23-21, 17-21,15-21 ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ವಿರುದ್ಧ ಸೋಲನುಭವಿಸಿದರೆ, ಮತ್ತೋರ್ವ ಭಾರತೀಯ ಪ್ರಿಯಾಂಶು ರಾಜಾವತ್ 15-21,19-21 ರಿಂದ ಚೌ ಟಿಯೆನ್ ಚೆನ್ ಎದುರು ಪರಾಭವಗೊಂಡರು.
  ಮಹಿಳಾ ಡಬಲ್ಸ್‌ನಲ್ಲಿ ತ್ರಿಸಾ ಜೋಲಿ-ಗಾಯತ್ರಿ ಜೋಡಿ 14-21, 15-21 ರಿಂದ ಆಸ್ಟ್ರೇಲಿಯಾದ ಸೆಟ್ಯಾನ ಮಪಾಸ- ಅಂಜೆಲಾ ಯುವೋ ಎದುರು ನಿರಾಸೆ ಕಂಡಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts