ಕ್ಷಮೆ ಕೇಳುವ ಮಾತೇ ಇಲ್ಲ..; ಭಾರತ ಪ್ರಬುದ್ಧತೆಯಿಂದ ವರ್ತಿಸುತ್ತದೆ ಎಂದ ಕಾಂಗ್ರೆಸ್​ ಸಂಸದ ಶಶಿ ತರೂರ್​! | Shashi Tharoor

Shashi Tharoor
Published on

Shashi Tharoor: ಭಾರತ ಅಂತಿಮವಾಗಿ ಒತ್ತಡಕ್ಕೆ ಮಣಿದು ಅಮೆರಿಕದ ಕ್ಷಮೆಯಾಚಿಸುತ್ತದೆ ಹಾಗೂ ರಷ್ಯಾ ಜತೆಗಿನ ವ್ಯಾಪಾರ ಸಂಬಂಧಗಳ ಕುರಿತು 2 ತಿಂಗಳೊಳಗೆ ಒಪ್ಪಂದ ಮಾಡಿಕೊಳ್ಳುತ್ತದೆ ಎಂದು ಹೇಳಿಕೆ ನೀಡಿದ್ದ ಟ್ರಂಪ್​ ಸರ್ಕಾರದ ವಾಣಿಜ್ಯ ಕಾರ್ಯದರ್ಶಿ ಹೊವರ್ಡ್​ ಲುಟ್ನಿಕ್​ಗೆ ಕಾಂಗ್ರೆಸ್ ​ನಾಯಕ ಶಶಿ ತರೂರ್ ಭಾನುವಾರ ತಿರುಗೇಟು ನೀಡಿದ್ದಾರೆ.

ಭಾರತದ ನಡವಳಿಕೆಯು ಪ್ರಬುದ್ಧತೆ ಮತ್ತು ನ್ಯಾಯಯುತತೆಯಿಂದ ಕೂಡಿದ್ದು, ನಮ್ಮ ದೇಶ ಕ್ಷಮೆಯಾಚಿಸುವಂತ ಯಾವುದೇ ಸಂದರ್ಭ ಎದುರಾಗಿಲ್ಲ. ಹಾಗೇ ಇತರ ರಾಷ್ಟ್ರಗಳು ರಷ್ಯಾದೊಂದಿಗೆ ವ್ಯವಹಾರದಲ್ಲಿ ತೊಡಗಿಕೊಂಡಾಗ ನವದೆಹಲಿಯನ್ನು ಏಕೆ ಪ್ರತ್ಯೇಕಿಸಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಲುಟ್ನಿಕ್ ಅವರ ಹೇಳಿಕೆಯನ್ನು ತಿರಸ್ಕರಿಸಿದ ತರೂರ್​ ನಮಗೆ ವಿಷಾದಿಸಲು ಏನೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಭಾರತ ಈ ಎಲ್ಲದರ ಬಗ್ಗೆ ಬಹಳ ಪ್ರಬುದ್ಧತೆಯಿಂದ ವರ್ತಿಸಿದೆ" ಎಂದರು.

ಇನ್ನು ಶುಕ್ರವಾರ ಬ್ಲೂಮ್​ಬರ್ಗ್​ಗೆ ನೀಡಿದ ಹೇಳಿಕೆಯಲ್ಲಿ ಡೊನಾಲ್ಡ್​ ಟ್ರಂಪ್​ ಜೊತೆ ಒಪ್ಪಂದ ಮಾಡಿಕೊಳ್ಳಲು ಭಾರತವು ಅಂತಿಮವಾಗಿ ಮಾತುಕತೆಗೆ ಮರಳುತ್ತದೆ ಎಂದು ಪ್ರತಿಪಾದಿಸಿದರು. ಭಾರತ ಡೊನಾಲ್ಡ್​ ಟ್ರಂಪ್​​ ಜೊತೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಆದರೆ, ವಿಷಾದ ವ್ಯಕ್ತಪಡಿಸುವಂತದು ಏನು ಇಲ್ಲ ಎಂದು ಹೇಳಿದ್ದಾರೆ.

ಲುಟ್ನಿಕ್​ ತೀಕ್ಷ್ಣವಾದ ವಿಚಾರವನ್ನು ಮಂಡಿಸಿದಲ್ಲದೇ, ಭಾರತಕ್ಕೆ ಮೂರು ಷರತ್ತುಗಳನ್ನು ಹಾಕಿದ್ದಾರೆ. ಇನ್ನು ಭಾರತ ತನ್ನ ಮಾರುಕಟ್ಟೆಯನ್ನು ತೆರೆಯಲು ಬಯಸುವುದಿಲ್ಲ. ಹಾಗಾಗಿ ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿ, ನೀವು ಚೀನಾ ಹಾಗೂ ರಷ್ಯಾದ ನಡುವೆ ಸೇತುವೆಯಾಗಲು ಬಯಸಿದರೆ, ಹೋಗಿ ಡಾಲರ್​ನ್ನು ಬೆಂಬಲಿಸಿ. ನಿಮ್ಮ ದೊಡ್ಡ ಕ್ಲೈಂಟ್​ ಆದ ಅಮೇರಿಕಾವನ್ನು ಬೆಂಬಲಿಸಿ ಅಥವಾ ಪ್ರತಿಶತ 50 ರಷ್ಟು ಸುಂಕವನ್ನು ಪಾವತಿಸಿ. ಇದು ಎಷ್ಟು ಕಾಲ ಇರುತ್ತದೆ ಎಂದು ನೊಡೋಣ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net