ಸೀಮಾ ಹೈದರ್​​ಗೆ ಆರ್‌ಪಿಐ ಟಿಕೆಟ್ ನೀಡುವ ವಿಚಾರ: 'ಕೊಡುತ್ತೇವೆ, ಪಕ್ಷದಿಂದಲ್ಲ ಪಾಕಿಸ್ತಾನಕ್ಕೆ…' ಎಂದ ರಾಮ್ ದಾಸ್ ಅಠವಳೆ

ramdas
Published on

ನವದೆಹಲಿ: ಸೀಮಾ ಹೈದರ್​​​​​ಗೆ ಆರ್‌ಪಿಐ ಟಿಕೆಟ್ ನೀಡುವ ವಿಚಾರದಲ್ಲಿ ರಾಮ್ ದಾಸ್ ಅಠವಳೆ ಹೇಳಿಕೆ ಮುನ್ನೆಲೆಗೆ ಬಂದಿದೆ. ಸೀಮಾ ಅವರಿಗೆ ತಮ್ಮ ಪಕ್ಷದಿಂದ ಟಿಕೆಟ್ ನೀಡುವ ಹೇಳಿಕೆಯನ್ನು ಅವರು ನಿರಾಕರಿಸಿದ್ದಾರೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಅಧ್ಯಕ್ಷ ರಾಮದಾಸ್ ಅಠವಳೆ ಅವರು ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ತಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತ ವರದಿಗಳನ್ನು ತಳ್ಳಿಹಾಕಿದ್ದಾರೆ. ಪಾಕಿಸ್ತಾನಿ ಮಹಿಳೆಯನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಅಠವಳೆ ಹೇಳಿದ್ದಾರೆ. ತಮ್ಮ ಪಕ್ಷವು ಹೈದರ್‌ಗೆ ನೀಡಬಹುದಾದ ಏಕೈಕ ಟಿಕೆಟ್ ಅಂದರೆ ಅದು ಪಾಕಿಸ್ತಾನಕ್ಕೆ ಮಾತ್ರ ಎಂದು ಅವರು ಹೇಳಿದರು.

“ನಮ್ಮ ಪಕ್ಷಕ್ಕೂ ಸೀಮಾ ಹೈದರ್​​ಗೂ ಯಾವುದೇ ಸಂಬಂಧವಿಲ್ಲ, ಅವರು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ...ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ..ಅವರಿಗೆ ಟಿಕೆಟ್ ನೀಡಬೇಕಿದ್ದರೆ ಅದು ಭಾರತದಿಂದ ಪಾಕಿಸ್ತಾನಕ್ಕೆ" ಎಂದು ಅಠವಳೆ ಹೇಳಿದರು.
ಸೀಮಾ ಅವರಿಗೆ ಭಾರತೀಯ ಪೌರತ್ವ ಸಿಕ್ಕರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧ ಎಂದು ಆರ್‌ಪಿಐ ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಮಾಸೂಮ್ ಹೇಳಿದ್ದರು. ಸೀಮಾ ಹೈದರ್ ಅವರನ್ನು ಉತ್ತರ ಪ್ರದೇಶ ಮಹಿಳಾ ವಿಭಾಗದ ಅಧ್ಯಕ್ಷೆ ಮತ್ತು ರಾಷ್ಟ್ರೀಯ ವಕ್ತಾರರನ್ನಾಗಿ ಮಾಡುವುದಾಗಿಯೂ ಅವರು ತಮ್ಮ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಹೇಳಿದ್ದರು. ಈ ಬಗ್ಗೆ ಮಾತನಾಡಿದ ರಾಮದಾಸ್ ಅಠವಳೆ ಅವರು ತಮಗೆ ಗೊತ್ತಿಲ್ಲದೆ ಕಿಶೋರ್ ಹೇಳಿಕೆ ನೀಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net