ಫೋನ್​ ಚಾರ್ಜರ್‌ಗಳಿಗೂ ಇರುತ್ತೆ ಎಕ್ಸ್​ಪೈರಿ ಡೇಟ್​... ತಿಳಿಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ...Mobile Chargers

Mobile Chargers
Published on

Mobile Chargers : ನಿಮಗೆ ಗೊತ್ತಾ ಪ್ರಸ್ತುತ ಮಾರಾಟವಾಗುವ ಬಹುತೇಕ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ತಮ್ಮ ಫೋನ್‌ಗಳಿಗೆ ಚಾರ್ಜರ್‌ಗಳನ್ನು ಒದಗಿಸುವುದಿಲ್ಲ. ಬದಲಾಗಿ, ನಾವು ಹೊರಗಿನಿಂದ ಅಥವಾ ಹೆಚ್ಚುವರಿ ಹಣ ಕೊಟ್ಟು ಚಾರ್ಜರ್ ಪಡೆಯಬೇಕು.

ಅಂದಹಾಗೆ, ಇಂದು ಸ್ಮಾರ್ಟ್‌ಫೋನ್‌ಗಳು ಮಾನವ ಜೀವನದ ಅತ್ಯಗತ್ಯ ಭಾಗವಾಗಿದೆ. ಆನ್‌ಲೈನ್ ಪಾವತಿಗಳು, ಶಾಪಿಂಗ್ ಮತ್ತು ಟಿಕೆಟ್ ಬುಕಿಂಗ್ ಸೇರಿದಂತೆ ಅನೇಕ ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ನಾವು ನಮ್ಮ ಫೋನ್‌ಗಳನ್ನು ಬಳಸುತ್ತೇವೆ. ಫೋನ್​ಗಳಿಂದಲೇ ಅನೇಕ ಮಂದಿ ಸಂಪಾದನೆ ಮಾಡುತ್ತಿದ್ದಾರೆ. ಸ್ಮಾರ್ಟ್​ಫೋನ್​ ಇಲ್ಲದೇ ಹೋದರೆ ಒಂದು ಕ್ಷಣವೂ ಮನುಷ್ಯ ಸುಮ್ಮನಿರಲು ಸಾಧ್ಯವಾಗುತ್ತಿಲ್ಲ. ಅಷ್ಟರಮಟ್ಟಿಗೆ ಫೋನ್​ಗೆ ದಾಸರಾಗಿದ್ದಾರೆ. ಆದರೆ, ಫೋನ್​ ಅನ್ನು ಸರಿಯಾಗಿ ಬಳಸಿಕೊಂಡರೆ ಅದರಿಂದ ಸಾಕಷ್ಟು ಲಾಭ ಸಹ ಪಡೆದುಕೊಳ್ಳಬಹುದು. ಅದೇ ರೀತಿ ಫೋನ್​ನಿಂದ ಜೀವನ ಹಾಳು ಮಾಡಿಕೊಂಡ ಸಾಕಷ್ಟು ಉದಾಹರಣೆಗಳಿವೆ.

ಫೋನ್​ ಅಂತಾ ಬಂದಾಗ ಚಾರ್ಜರ್​ಗಳು ಕೂಡ ತುಂಬಾ ಮುಖ್ಯ. ಚಾರ್ಜರ್​ ಇಲ್ಲ ಅಂದ್ರೆ ಯಾವುದೇ ಫೋನ್​ ನಿರ್ಜಿವ ವಸ್ತುವಾಗಿಬಿಡುತ್ತದೆ. ಏಕೆಂದರೆ, ಸ್ಮಾರ್ಟ್​ಗಳ ಕಾರ್ಯನಿರ್ವಹಣೆಗೆ ಜೀವ ಅಥವಾ ಶಕ್ತಿಯನ್ನು ತುಂಬುವುದೇ ಚಾರ್ಜರ್​ಗಳು. ಹೀಗಾಗಿ, ಫೋನ್​ಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಅನೇಕ ಮಂದಿ ಮುಖ್ಯವಾಗಿ ಬೇಕಾದ ಚಾರ್ಜರ್​ಗಳ ಬಗ್ಗೆ ತಿಳಿದುಕೊಳ್ಳಲು ಬಯಸುವುದೇ ಇಲ್ಲ. ಹೀಗಾಗಿ, ಚಾರ್ಜರ್‌ಗಳ ಬಗ್ಗೆ ನಮಗೆ ತಿಳಿದಿಲ್ಲದ ವಿಷಯಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಚಾರ್ಜರ್​ಗಳಿಗೂ ಇರುತ್ತೆ ಎಕ್ಸ್​ಪೈರಿ ಡೇಟ್!

ಮಾರುಕಟ್ಟೆಯಲ್ಲಿ ಕೆಲವು ಕಡಿಮೆ ಗುಣಮಟ್ಟದ ಚಾರ್ಜರ್‌ಗಳು ಮಾರಾಟವಾಗುತ್ತಿವೆ. ಇಂತಹ ಚಾರ್ಜರ್​ಗಳು ಫೋನ್ ಅತಿಯಾಗಿ ಬಿಸಿಯಾಗಲು, ಬ್ಯಾಟರಿ ಕಾರ್ಯಕ್ಷಮತೆ ಕ್ಷೀಣಿಸಲು ಮತ್ತು ಫೋನ್ ಸ್ಫೋಟಗೊಳ್ಳುವ ಅಪಾಯಕ್ಕೆ ಕಾರಣವಾಗಬಹುದು. ಇದನ್ನು ತಡೆಯಲು, ನೀವು ಉತ್ತಮ ಗುಣಮಟ್ಟದ ಚಾರ್ಜರ್‌ಗಳನ್ನು ಹುಡುಕಬೇಕು ಮತ್ತು ಅವುಗಳನ್ನು ಖರೀದಿಸಬೇಕು.

ಏನು ಮಾಡಬೇಕೆಂದರೆ, ನಿಮ್ಮ ಫೋನ್‌ಗಳಲ್ಲಿ ನೀವು BIS Care ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಲಭ್ಯವಿದೆ. ಈ ಅಪ್ಲಿಕೇಶನ್‌ನ ಮುಖಪುಟಕ್ಕೆ ಹೋಗಿ ಮತ್ತು ಅಲ್ಲಿ ನೀಡಲಾದ ಆಯ್ಕೆಗಳನ್ನು ಆರಿಸಿ. ಅದರ ನಂತರ, ನೀವು Verify R no. CRS ಅನ್ನು ಆಯ್ಕೆ ಮಾಡಬೇಕು. ನಂತರ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ, ಇದಕ್ಕಾಗಿ ನೀವು ಪ್ರಾಡಕ್ಟ್​ ನೋಂದಣಿ ಸಂಖ್ಯೆಯನ್ನು ನಮೂದಿಸಿ ಚಾರ್ಜರ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.

ಹೀಗೆ ಮಾಡುವುದರಿಂದ ನಿಮ್ಮ ಚಾರ್ಜರ್‌ನ ಎಲ್ಲಾ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. ಚಾರ್ಜರ್ ಬಗ್ಗೆ ವಿವರವಾದ ಮಾಹಿತಿಯನ್ನು ನೀವು ಕಂಡುಹಿಡಿಯಬಹುದು. ಇದಕ್ಕಾಗಿ, ನೀವು ಖರೀದಿಸಿದ ಚಾರ್ಜರ್‌ನ ನೋಂದಣಿ ಸಂಖ್ಯೆ ಅಥವಾ QR ಕೋಡ್ ಅನ್ನು ಬಳಸಲಾಗುತ್ತದೆ. ಇದು ಚಾರ್ಜರ್‌ನ ಎಕ್ಸ್​ಪೈರಿ ಡೇಟ್​ ಸಹ ಹೊಂದಿರುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net