ಕಾಸರಗೋಡು: ಕೋಳಿ ಸಾಗಾಟದ ಮರೆಯಲ್ಲಿ ರಸ್ತೆ ಅಂಚಿಗಿರಿಸಿದ್ದ ಬ್ಯಾರಲ್ ಕಳವುಗೈದು ಸಾಗಿಸುತ್ತಿದ್ದ ಚಿಕ್ಕಮಗಳೂರು ನಿವಾಸಿ ವಿನಯಕುಮಾರ್ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಸನಿಹದ ಶಿರಿಯಾದಲ್ಲಿ ರಸ್ತೆ ಷಟ್ಪಥ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಕಂಪನಿ ರಸ್ತೆ ವಿಭಾಜಕಕ್ಕಾಗಿ ಇರಿಸಿದ್ದ ಹತ್ತಕ್ಕೂ ಹೆಚ್ಚು ಬ್ಯಾರಲ್‌ಗಳನ್ನು ತನ್ನ ವಾಹನದಲ್ಲಿ ಹೇರಿ ಸಾಗಿಸುವಾಗ ತ್ತಿಗೆದಾರ ಕಂಪನಿ ಸಿಬ್ಬಂದಿ ಈತನನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದರು. ಈ ಹಿಂದೆಯೂ ಬ್ಯಾರಲ್ ಕಳವು ಗೈದಿರುವುದಾಗಿ ಮಾಹಿತಿಯಿದೆ. ಬ್ಯಾರಲ್ ನಾಪತ್ತೆಯಾಗುತ್ತಿರುವ ಬಗ್ಗೆ ನಿಗಾವಹಿಸಿದ್ದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಕೋಳಿ ಸಾಗಾಟ ನಡೆಸಿ, ವಾಪಸಾಗುವಾಗ ಬ್ಯಾರಲ್ ಕಳವುಗೈದು ಸಾಗಿಸುತ್ತಿದ್ದನೆನ್ನಲಾಗಿದೆ.
ಮಾಲಿನ್ಯಮುಕ್ತ ಜಿಲ್ಲೆ ಮಾಡಲು ಕ್ರಮ : ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಆಗ್ರಹ
ಉತ್ತಮ ಶಿಕ್ಷಣದಿಂದ ಸದೃಢ ವ್ಯಕ್ತಿತ್ವ ರೂಪು : ಕಾರ್ಪೊರೇಟ್ ಮ್ಯಾನೇಜರ್ ಲಿಲ್ಲಿ ಪಿರೇರ ಅಭಿಮತ