

ಕಾಸರಗೋಡು: ಜಿಲ್ಲೆಯನ್ನು ಮಾಲಿನ್ಯಮುಕ್ತ ಜಿಲ್ಲೆಯಾಗಿ ಮಾ.30ರ ಮೊದಲು ಘೋಷಿಸಲು ಅಗತ್ಯ ಕ್ರಮಗಳಿಗಾಗಿ ಕಾಲಾನುಕಾಲಕ್ಕೆ ಕೈಗೊಳ್ಳಬೇಕಾದ ಕಾರ್ಯಯೋಜನೆಗಳಿರಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಆಗ್ರಹಿಸಿದರು.
ಡಿಪಿಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಸಮುಕ್ತ ನವಕೇರಳ ಅಭಿಯಾನದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಿತು. ಎಡಿಎಂ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯಾಡಳಿತ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಕೆ.ಬಾಲರಾಜ್, ಹಸಿರು ಕೇರಳ ಮಿಷನ್ ರಾಜ್ಯ ಕಾರ್ಯಕ್ರಮ ಅಧಿಕಾರಿ ಕೃಷ್ಣಕುಮಾರ್, ಸ್ವಚ್ಛತಾ ಮಿಷನ್‌ನ ಪ್ರತಿನಿಧಿ ಮಿಥುನ್, ಪ್ರಚಾರ ಕಾರ್ಯದರ್ಶಿ ಸುಹಾನಾ, ಕೆಎಸ್‌ಡಬ್ಲ್ಯುಎಂಪಿ ಪ್ರತಿನಿಧಿ ಹಿರಣ್‌ಕೃಷ್ಣ ಮಾತನಾಡಿದರು.
ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್, ನಗರ ಯೋಜನಾಧಿಕಾರಿ ಲೀಲಿತಿ, ಕಾರ್ಯಪಾಲಕ ಅಭಿಯಂತರ ಶೈನಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶ್ಯಾಮಲಕ್ಷ್ಮಿ. ಎಸ್, ಉಪನಿರ್ದೇಶಕ ಕೆ. ವಿ.ಹರಿದಾಸ್, ಸ್ವಚ್ಛತಾ ಮಿಷನ್ ಯುವ ವೃತ್ತಿಪರ ಎಸ್.ಎಚ್.ಅಂಜಲಿ, ಕುಟುಂಬಶ್ರೀ ಜಿಲ್ಲಾ ಸಂಯೋಜಕ ಟಿ.ಟಿ.ಸುರೇಂದ್ರನ್, ಕ್ಲೀನ್ ಕೇರಳ ಕಂಪನಿ ಜಿಲ್ಲಾ ವ್ಯವಸ್ಥಾಪಕ ಮಿಥುನ್ ಗೋಪಿ ಮತ್ತು ಕಿಲಾ ಸಂಚಾಲಕ ಕೆ.ಅಜಯಕುಮಾರ್ ಮಾತನಾಡಿ, ಚರ್ಚೆಯನ್ನು ಕ್ರೋಡೀಕರಿಸಿದರು.
ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜಿ. ಸುಧಾಕರನ್ ಸ್ವಾಗತಿಸಿ, ಕೆಎಸ್‌ಡಬ್ಲ್ಯುಎಂಪಿ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಿಥುನ್ ಕೃಷ್ಣನ್ ವಂದಿಸಿದರು.