

ಸುಬ್ರಹ್ಮಣ್ಯ: ಐನೆಕಿದು ಬಸ್ ನಿಲ್ದಾಣದಲ್ಲಿರುವ ಹಾಲು ಉತ್ಪಾದಕ ಸಹಕಾರ ಸಂದ ಕಚೇರಿ ಮತ್ತು ಪಕ್ಕದ ಅಂಗಡಿಯಿಂದ ಕಳ್ಳತನ ನಡೆದಿದ್ದು, ಸೋಮವಾರ ಕೃತ್ಯ ಬೆಳಕಿಗೆ ಬಂದಿದೆ. ಭಾನುವಾರ ತಡರಾತ್ರಿ ಕಳ್ಳತನ ನಡೆದಿದ್ದು, ಹಾಲು ಸೊಸೈಟಿಯ ಶಟರ್‌ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು 3,900 ರೂ. ನಗದು ಕಳವುಗೈದಿದ್ದಾರೆ. ಯಶವಂತ ಕೊಪ್ಪಲಗದ್ದೆ ಎಂಬುವರ ಅಂಗಡಿಗೆ ಬೀಗ ಮುರಿದು ನುಗ್ಗಿದ ಕಳ್ಳರು ಅಂದಾಜು 10 ಸಾವಿರ ರೂ. ನಗದು ಕಳ್ಳತನ ಮಾಡಿದ್ದಾರೆ. ಕಳ್ಳರು ಕೃತ್ಯಕ್ಕೆ ಬಳಸಿದ ಪಿಕ್ಕಾಸನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಸುಬ್ರಹ್ಮಣ್ಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.