ಬದಿಯಡ್ಕದಲ್ಲಿ ವ್ಯಾಪಾರಿ ದಿನಾಚರಣೆ

New Project (4)
Published on

ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕ ವತಿಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಶನಿವಾರ ದೇಶೀಯ ವ್ಯಾಪಾರ ದಿನಾಚರಣೆ ನಡೆಯಿತು.

ಘಟಕ ಅಧ್ಯಕ್ಷ ನರೇಂದ್ರ ಬಿ.ಎನ್. ಧ್ವಜಾರೋಹಣಗೈದರು. ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬಸ್ ತಂಗುದಾಣದ ಪರಿಸರದಲ್ಲಿ ಸಾರ್ವಜನಿಕರಿಗೆ ಪಾಯಸ ವಿತರಿಸಲಾಯಿತು. ನಂತರ ವಿಶ್ರಾಂತಿ ಜೀವನ ನಡೆಸುತ್ತಿರುವ ಹಿರಿಯ ವ್ಯಾಪಾರಿಗಳಾದ ಸೂಫಿ, ಕುಮಾರನ್ ನಾಯರ್, ದಾಮೋದರನ್ ಮಣಿಯಾಣಿ ಅವರ ಮನೆಗೆ ತೆರಳಿ ಅವರನ್ನು ಗೌರವಿಸಲಾಯಿತು. ಬದಿಯಡ್ಕ ಪೊಲೀಸ್ ಠಾಣೆಗೆ ಟಾರ್ಚ್ ಲೈಟ್ ಕೊಡುಗೆಯಾಗಿ ನೀಡಲಾಯಿತು. ಯೂತ್‌ವಿಂಗ್ ಬದಿಯಡ್ಕ ಘಟಕ ವತಿಯಿಂದ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಅನ್ನದಾನ ನಡೆಯಿತು.

ಬದ್ರಿಯಾ ಮುಹಮ್ಮದ್, ಜಿಲ್ಲಾ ಕಾರ್ಯದರ್ಶಿ ಕುಂಜಾರು ಮುಹಮ್ಮದ್, ಘಟಕ ಉಪಾಧ್ಯಕ್ಷ ರಾಜು ಸ್ಟೀಫನ್, ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ, ಕೋಶಾಧಿಕಾರಿ ಜ್ಞಾನದೇವ ಶೆಣೈ, ಕಾರ್ಯದರ್ಶಿಗಳಾದ ಉದಯಶಂಕರ, ವಿಶ್ವನಾಥನ್, ಯೂತ್‌ವಿಂಗ್ ಅಧ್ಯಕ್ಷ ಸುಬ್ರಹ್ಮಣ್ಯ ಪೈ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸೈಯಿದ್, ಮಹಿಳಾ ಸಮಿತಿ ಅಧ್ಯಕ್ಷೆ ಜಯಂತಿ ಚೆಟ್ಟಿಯಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net