ಮನೆಗೆ ನುಗ್ಗಿ ಕಳವಿಗೆ ಯತ್ನ

theft
Published on

ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಎಂಬಲ್ಲಿ ಮನೆ ಮಂದಿ ನಿದ್ರಿಸಿದ್ದ ಸಂದರ್ಭ ಮನೆಯೊಳಗೆ ನುಗ್ಗಿ ಕಳವು ಮಾಡಲು ಯತ್ನಿಸಿದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ರೋಹಿತ್ ಎಂಬುವರ ಮನೆಗೆ ಕಳೆದ ಭಾನುವಾರ ಬೆಳಗ್ಗೆ ಕಳ್ಳ ನುಗಿದ್ದು, ಕೋಣೆಯೊಳಗೆ ಕಳವಿಗೆ ಯತ್ನಿಸುತ್ತಿದ್ದಾಗ ರೋಹಿತ್ ಅವರ ತಾಯಿ ಕಿರುಚಿದ್ದಾರೆ. ಭಯಭೀತನಾದ ಕಳ್ಳ ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾನೆ. ಮನೆಗೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತೀವ್ರ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net