

ವಿಜಯವಾಣಿ ಸುದ್ದಿಜಾಲ ಮಂಗಳೂರು
ತನ್ನ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳದವರು ಮಹತ್ವದ ಲೇಖಕರು ಆಗುತ್ತಾರೆ. ಲೇಖಕ ಶೀನಾ ನಾಡೋಳಿಯವರ ಸಾಂಸ್ಕೃತಿಕ ಬೇರುಗಳು ಅವರು ಹುಟ್ಟಿ ಬೆಳೆದ ತುಳು ಭಾಷೆ, ಸಂಸ್ಕೃತಿ, ಪಾಡ್ದನ ಒಳಗೊಂಡಿರುವ ತುಳು ಜಗತ್ತಿನಲ್ಲಿದೆ. ಆದ್ದರಿಂದ ಹೊಸ ಕೃತಿಗಳ ಮೂಲಕ ಅವರು ಇಂಗ್ಲಿಷ್ ನಿಂದ ಕನ್ನಡ ಮತ್ತು ತುಳುವಿಗೆ ತಂದಿರುವ ಕೃತಿಗಳು ಮಹತ್ವ ಪಡೆದಿವೆ ಎಂದು ಕರ್ನಾಟಕ ಜಾನಪದ ವಿಶ್ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು.
ಫೋಟೋ
ಎಂಎನ್‌ಜಿ- ಜುಲೈ 12- ಬುಕ್ ರಿಲೀಸ್
ಮಂಗಳೂರು ಕೆನರಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಮಾರಂಭದಲ್ಲಿ ಶೀನಾ ನಾಡೋಳಿ ಅವರ ಬೊಳಂತ್ಯೆ- ಉರ್ಪೆಲ್ (ತುಳು), ದರ್ಮೊದಿಟ್ಟಿ /ಧರ್ಮದೃಷ್ಟಿ ಮತ್ತು ಪ್ಲೀಸ್, ಫೀಸ್ ಪಿರಕೊರ‌್ಲೆ /ಪ್ಲೀಸ್ ನನ್ನ ಫೀಸ್ ಕೊಡಿ ಕೃತಿಗಳನ್ನು ಕರ್ನಾಟಕ ಜಾನಪದ ವಿಶ್ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅನಾವರಣಗೊಳಿಸಿದರು. ತುಳು ಸಾಹಿತ್ಯ ಆಕಾಡೆಮಿ ಸದಸ್ಯೆ ಆಕ್ಷಯ ಆರ್. ಶೆಟ್ಟಿ, ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಸಾಹಿತಿ ರಘು ಇಡ್ಕಿದು, ಕಾಂಜವೇ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ ಸಂಚಾಲಕ ಆನಂದ ಡಿ. ಉಪಸ್ಥಿತರಿದ್ದರು.