2 ಟನ್ ರಬ್ಬರ್ ಹಾಲು ಕಳವು

Kottur theft
Published on

ಕಾಸರಗೋಡು: ಪೈವಳಿಕೆ ಪಂಚಾಯಿತಿ ಬಾಯಿಕಟ್ಟೆ ಪೆರಿಯಪ್ಪಾಡಿಯಲ್ಲಿ ರಬ್ಬರ್ ತೋಟದಲ್ಲಿ ದಾಸ್ತಾನಿರಿಸಿದ್ದ 2 ಟನ್ ರಬ್ಬರ್ ಹಾಲನ್ನು ಕಳವುಗೈದಿರುವ ಬಗ್ಗೆ ಶಿಹಾಬ್ ಎಂಬುವರ ದೂರಿನ ಮೇರೆಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಬ್ಬರ್ ತೋಟ ಗುತ್ತಿಗೆಗೆ ವಹಿಸಿ ಶಿಹಾಬ್, ಇಲ್ಲಿನ ಕಟ್ಟಡದೊಳಗೆ ರಬ್ಬರ್ ಹಾಲು ದಾಸ್ತಾನಿರಿಸಿದ್ದರು. ಅ.12ರಂದು ಊರಿಗೆ ತೆರಳಿದ್ದ ಅವರು 18ರಂದು ವಾಪಸಾದಾಗ ಕಳವು ಗಮನಕ್ಕೆ ಬಂದಿದೆ. ತೋಟದ ಗೇಟು ಹಾಗೂ ಕಟ್ಟಡದ ಬಾಗಿಲಿಗೆ ಅಳವಡಿಸಿದ್ದ ಬೀಗ ಒಡೆದು ಕಳವು ನಡೆಸಲಾಗಿದೆ. ಕಳವುಗೈದ ರಬ್ಬರ್ ಹಾಲಿನ ಮೌಲ್ಯ ಮೂರು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ, ಈ ಪ್ರದೇಶದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net