ಅಡಕೆ ಕಳವುಗೈದವರ ಬಂಧನ

Arrest Kaidhi
Published on

ಕಾಸರಗೋಡು: ಮನೆಯಿಂದ ಗೋಟಡಕೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಯಾರು ಪ್ರದೇಶದ ನಿವಾಸಿಗಳಾದ ಮಹಮ್ಮದ್ ಸಾಲಿ ಹಾಗೂ ಮನಾಫ್ ಬಂಧಿತರು. ಬಾಯಾರು ನಿವಾಸಿ, ಅಡಕೆ ವ್ಯಾಪಾರಿ ಅಬ್ದುಲ್ ಖಾದರ್ ಅವರ ಮನೆಯಿಂದ ಅಡಕೆ ಕಳವು ನಡೆಸಿದ್ದು, ಹಮ್ಮದ್ ಸಾಲಿ ಹಾಗೂ ಮನಾಫ್ ತಮ್ಮ ಸ್ಕೂಟರಲ್ಲಿ ಗೋಟಡಕೆ ಸಾಗಿಸುತ್ತಿರುವ ಬಗ್ಗೆ ಸಂಶಯಗೊಂಡ ಸ್ಥಳೀಯರು ಅವರನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಅಬ್ದುಲ್ ಖಾದರ್ ಮನೆಯಿಂದ ಅಡಕೆ ಕಳವು ನಡೆಸಿರುವ ಬಗ್ಗೆ ಮಾಹಿತಿ ಲಭಿಸಿತ್ತು. ನಂತರ ಊರವರು ಸೇರಿ ಅವರನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net