ಬಸ್​ ಖಾಲಿಯಿದ್ದರೂ ಯುವಕನ ಪಕ್ಕದಲ್ಲಿ ಕುಳಿತ ಭುಜಕ್ಕೆ ತಲೆಯಿಟ್ಟ ಯುವತಿ! ನಂತರ ನಡೆದಿದ್ದಿಷ್ಟು…

Germany
Published on

ನವದೆಹಲಿ: ಪ್ರತಿನಿತ್ಯ ಹಲವಾರು ಅಚ್ಚರಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಮತ್ತೊಂದು ವಿಡಿಯೋ ಎಲ್ಲರ ಮನಸೆಳೆಯುತ್ತಿದೆ. ಸ್ವಲ್ಪ ಸುಸ್ತಾಗಿರುವಂತೆ ಕಾಣುವ ಹುಡುಗಿಯೊಬ್ಬಳು ಬಸ್‌ ಪ್ರವೇಶಿಸಿ, ಕಿಟಕಿಯ ಸೀಟಿನಲ್ಲಿ ಕುಳಿತಿದ್ದ ಹುಡುಗನ ಪಕ್ಕದಲ್ಲಿ ಕುಳಿತು ಆತನ ಭುಜದ ಮೇಲೆ ತಲೆ ಇಡುತ್ತಾಳೆ. ಬಳಿಕ ಆ ಯುವಕ ತೋರಿದ ವರ್ತನೆ ನೆಟ್ಟಿಗರ ಗಮನ ಸೆಳೆದಿದೆ.

ವೈರಲ್​ ವಿಡಿಯೋ ಗಮನಿಸಿದರೆ, ಬಸ್ ತುಂಬಾ ಖಾಲಿಯಾಗಿದೆ. ಅನೇಕ ಸೀಟುಗಳಲ್ಲಿ ಪ್ರಯಾಣಿಕರೇ ಇಲ್ಲ. ಆದರೆ ಯುವತಿ ಮಾತ್ರ ಯುವಕನ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತಾಳೆ. ಬಳಿಕ ಆತನ ಭುಜದ ಮೇಲೆ ಹಾಕಿಕೊಂಡು ಹಾಯಾಗಿ ಮಲಗುತ್ತಾಳೆ. ಕೆಲವು ಸೆಕೆಂಡುಗಳ ನಂತರ ಹುಡುಗ, ಆಶ್ಚರ್ಯದಿಂದ ಹುಡುಗಿಯನ್ನು ನೋಡುತ್ತಾನೆ. ಆಗ ಹುಡುಗಿ ನಗುತ್ತಾಳೆ. ಹುಡುಗನೂ ತುಂಬಾ ನಾಚಿಕೆಯಿಂದ ನಗುತ್ತಾನೆ.

ಬಳಿಕ ಯುವಕ ಹುಡುಗಿಯೊಂದಿಗೆ ನಗುತ್ತಾ ಮಾತನಾಡುತ್ತಾನೆ ಮತ್ತು ತನ್ನ ಭುಜದ ಮೇಲೆ ತಲೆಯಿಟ್ಟು ಆರಾಮಾಗಿ ಮಲಗಬಹುದು ಎಂದು ಹೇಳುತ್ತಾ ಮತ್ತಷ್ಟು ನಗುತ್ತಾನೆ. ಈ ವೇಳೆ ಹುಡುಗಿಯು ಸಹ ಮುಗುಳ್ನಗುತ್ತಾಳೆ. ವಿಡಿಯೋದಲ್ಲಿ ಹುಡುಗಿ ಸ್ಲೀವ್​ಲೆಸ್​ ಟಾಪ್, ತಿಳಿ ಗುಲಾಬಿ ಬಣ್ಣದ ಪ್ಯಾಂಟ್ ಧರಿಸಿದ್ದಾಳೆ. ತಲೆಗೂದಲನ್ನು ಕಟ್ಟಿ, ಕನ್ನಡಕ ಮತ್ತು ಬ್ಯಾಗ್‌ನೊಂದಿಗೆ ಕಾಣಿಸಿಕೊಂಡಿದ್ದಾಳೆ. ಇದಲ್ಲದೆ ಹುಡುಗಿಯ ಕೈಯಲ್ಲಿ ಕ್ಯಾಮೆರಾ ಕೂಡ ಇದೆ. ಬಸ್ಸಿನ ಮುಂದೆ ನಿಂತಿದ್ದ ಮತ್ತೊಬ್ಬ ಈಕೆಯ ವಿಡಿಯೋ ತೆಗೆಯುತ್ತಿದ್ದಾನೆ. ಇದೊಂದು ಸಾಮಾಜಿಕ ಪ್ರಯೋಗವಿದ್ದಂತೆ ಕಾಣುತ್ತದೆ.

ಈ ವಿಡಿಯೋವನ್ನು ಫಗುಯಿಂಬಾ ದಾಬೋ ಎಂಬ ವ್ಯಕ್ತಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊಗೆ "ಮ್ಯಾನ್​ ಇಸ್​ ಮ್ಯಾನ್​" ಎಂದು ಶೀರ್ಷಿಕೆ ನೀಡಿದ್ದಾರೆ. ಜರ್ಮನಿಯಲ್ಲಿ ಸೆರೆಹಿಡಿದ ವಿಡಿಯೋ ಆಗಿದೆ. ಈಗಾಗಲೇ ಈ ವಿಡಿಯೋ 49 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದೆ. ಲಕ್ಷಾಂತರ ಜನರು ಇದನ್ನು ಲೈಕ್ ಮಾಡಿದ್ದಾರೆ ಮತ್ತು ಶೇರ್ ಮಾಡಿದ್ದಾರೆ. ಈ ವಿಡಿಯೋದ ಅಡಿಯಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಸಹ ಮಾಡಿದ್ದಾರೆ. ಇದೊಂದು ರೀತಿಯಲ್ಲಿ ತುಂಬಾ ಚೆನ್ನಾಗಿದೆ. ಆದರೆ, ಹುಡುಗ ಹುಡುಗಿಯ ಭುಜದ ಮೇಲೆ ತಲೆಯಿಟ್ಟಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು. ದೊಡ್ಡ ಜಗಳವೇ ನಡೆಯುತ್ತಿತ್ತು ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net