ಶ್ರಮಿಕ ವರ್ಗ ಆರೋಗ್ಯಕ್ಕೆ ಉದಾಸೀನತೆ ತೋರಬಾರದು

14kkr3(4-25 uchita tool kit
ಕಿಕ್ಕೇರಿ ಸಮೀಪದ ಹಿರಿಕಳಲೆ ಗ್ರಾಮದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರಿಗೆ ಉಚಿತವಾಗಿ ಟೂಲ್, ಕಿಟ್ ಆರೋಗ್ಯ ತಪಾಸಣೆ ಭಾನುವಾರ ನಡೆಸಿದರು. ಆರ್‌ಟಿಒ ಮಲ್ಲಿಕಾರ್ಜುನ, ರಾಮಕೃಷ್ಣ, ಜವರೇಗೌಡ, ಮಂಜುನಾಥ್, ರಾಜೇಶ್ ಮತ್ತಿತರರಿದ್ದರು.
Published on

ಕಿಕ್ಕೇರಿ: ಶ್ರಮಿಕ ವರ್ಗ ತನ್ನ ಆರೋಗ್ಯ ಲೆಕ್ಕಿಸದೆ ದುಡಿಯಲು ಚಿಂತಿಸಿ, ಆರೋಗ್ಯ ಕೈಕೊಟ್ಟಾಗ ಯೋಚಿಸುತ್ತದೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಹೇಳಿದರು.

ಸಮೀಪದ ಹಿರಿಕಳಲೆ ಗ್ರಾಮದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಹಾಗೂ ನೊಂದಾಯಿತ ಕಟ್ಟಡ ಹಾಗೂ ಅವಲಂಬಿತರಿಗೆ ಗ್ರಾಮ ವಿಕಾಸ ಕೇಂದ್ರ, ಮಂಡ್ಯ ಇವರ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕೂಲಿ ಕಾರ್ಮಿಕರು ತಮ್ಮ ಕುಟುಂಬದ ಸದಸ್ಯರ ಒಳಿತಿಗಾಗಿ ತನ್ನ ಆರೋಗ್ಯವನ್ನು ಲೆಕ್ಕಿಸದೆ ಹಗಲು ಇರುಳು ದುಡಿಯುತ್ತಾರೆ. ಶ್ರಮಿಕ ವರ್ಗಕ್ಕೆ ಆರೋಗ್ಯವೇ ಸಂಪತ್ತು ಎಂಬುದನ್ನು ಮರೆಯಬಾರದು ಎಂದರು.

ಶಿಬಿರದಲ್ಲಿ ದೈಹಿಕ ಪರೀಕ್ಷೆ, ಲಿವರ್, ಆಡಿಯೋ ಮೆಟ್ರಿ ಸ್ಕ್ರೀನ್ ಪರೀಕ್ಷೆ, ನೇತ್ರ ತಪಾಸಣೆ, ಸಿಬಿಸಿ, ಇಎಸ್‌ಆರ್ ಪರೀಕ್ಷೆ, ರಕ್ತದಲ್ಲಿ ಸಕ್ಕರೆ, ಕೊಬ್ಬಿನಾಂಶ, ಕಬ್ಬಿಣ, ಮೆಗ್ನಿಷಿಯಂ ಪ್ರಮಾಣ ಪರೀಕ್ಷೆ, ಕಿಡ್ನಿ ಕಾರ್ಯ ಪರೀಕ್ಷೆ, ಮಲೇರಿಯಾ ಪ್ಯಾರಸೈಟ್, ಮೂತ್ರ ಪರೀಕ್ಷೆ, ಥೈರಾಯಿಡ್, ಜಿಜಿಟಿಪಿ, ಸಿಆರ್‌ಪಿ ಕ್ವಾಂಟಿಟೇಟಿವ್, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ. ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಿ ಟೂಲ್ ಕಿಟ್ ವಿತರಿಸಲಾಯಿತು.

ಮುಖಂಡರಾದ ರಾಮಕೃಷ್ಣ, ಜವರೇಗೌಡ, ಮಂಜುನಾಥ್, ರಾಜೇಶ್, ಕೃಷ್ಣೇಗೌಡ, ಬಸವರಾಜು, ಯೋಗೇಶ್, ಮಂಜೇಗೌಡ, ಶಿವಲಿಂಗೇಗೌಡ, ಭರತ್, ಯೋಗೇಶ್, ಚಿರಂಜೀವಿ, ಕೌಶಿಕ್, ಗ್ರಾಮ ವಿಕಾಸ್ ಸಂಸ್ಥಾಪಕ ಮಹೇಶ್ ಮತ್ತಿತರರಿದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net