ತ್ಯಾಜ್ಯವಿವಾದ, ಸತ್ಯ ಪ್ರಮಾಣದ ಸವಾಲು

Published on

ಸುಳ್ಯ: ಕಲ್ಚರ್ಪೆಯಲ್ಲಿ ತ್ಯಾಜ್ಯ ಹಾಕುವುದರಿಂದ ತಾನು ಹಣ ಗಳಿಸುತ್ತಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡುವವರು ದೇವಸ್ಥಾನಕ್ಕೆ ಬಂದು ಸತ್ಯ ಪ್ರಮಾಣ ಮಾಡಲಿ ಎಂದು ನ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿನಯಕುಮಾರ್​ ಕಂದಡ್ಕ ಹೇಳಿದ್ದಾರೆ.

ಕಲ್ಚರ್ಪೆ ಹೋರಾಟ ಸಮಿತಿಯ ಪದಾಧಿಕಾರಿಗಳು ಕಳೆದೆರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದಕ್ಕೆ ಪ್ರತಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಕಂದಡ್ಕ, ತನಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಆರೋಪ ಮಾಡಿ ತಾನು ಕಣದಿಂದ ಹಣ ಮಾಡಿದ್ದೇನೆ ಎಂದಿದ್ದಾರೆ.

ಈ ರೀತಿಯ ಆರೋಪ ಮಾಡುವವರು ಸನಿಹದ ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ. ನಾನು ಸಿದ್ಧನಿದ್ದೇನೆ ಎಂದರಲ್ಲದೆ ಕಲ್ಚರ್ಪೆಯ ನಿವಾಸಿಗಳಲ್ಲದೆ ಹೊರಗಿನವರು ಬಂದು ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಲ್ಲ. ಅಲ್ಲಿನ ಜನರಿಗೆ ತೊಂದರೆಯಾಗದಂತೆ ವೈಜ್ಞಾನಿಕ ಕ್ರಮ ಅನುಸರಿಸಿ ಕಸ ವಿಲೇವಾರಿಗೆ ಪ್ರಯತ್ನಿಸಲಾಗುವುದು ಎಂದರು.

ನ.ಪಂ ಅಧ್ಯೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ, ಸದಸ್ಯರಾದ ಶಿಲ್ಪ ಸುದೇವ್​, ಕಿಶೋರಿ ಶೇಟ್​, ಶೀಲಾ ಕುರುಂಜಿ, ಸುಧಾಕರ್​ ಕುರುಂಜಿಭಾಗ್​ ಹಾಗೂ ಸುಶೀಲ ಕಲ್ಲುಮುಟ್ಲು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net