ಫುಟ್‌ಬಾಲ್ ಪ್ರೇಮಿಗಳಿಗೆ ಸೆಕ್ಸ್ ಸಮಯದಲ್ಲೂ ಇವರದ್ದೇ ನೆನಪು!

football
Published on

ಲಂಡನ್: ಇತರ ಎಲ್ಲ ಕ್ರೀಡಾ ಅಭಿಮಾನಿಗಳಿಗಿಂತ ಫುಟ್‌ಬಾಲ್ ಪ್ರೇಮಿಗಳು ಸ್ವಲ್ಪ ಭಿನ್ನವಾದವರು. ಫಿಫಾ ವಿಶ್ವಕಪ್ ವೇಳೆ ಕೆಲ ಫುಟ್‌ಬಾಲ್ ಪ್ರೇಮಿಗಳ ಅಭಿಮಾನದ ಅತಿರೇಕವನ್ನು ನೋಡಿರುತ್ತೀರಿ. ಅವರಿಗೆ ಎಲ್ಲ ಸಮಯದಲ್ಲೂ ಫುಟ್‌ಬಾಲ್‌ನದ್ದೇ ಚಿಂತೆ. ಎಷ್ಟರ ಮಟ್ಟಿಗೆ ಎಂದರೆ ಸೆಕ್ಸ್ ಮಾಡುತ್ತಿರುವ ಸಮಯದಲ್ಲೂ ಅವರಿಗೆ ಫುಟ್‌ಬಾಲ್‌ನದ್ದೇ ನೆನಪು ಕಾಡುತ್ತಿರುತ್ತದೆಯಂತೆ! ಅಧ್ಯಾಯನವೊಂದರ ಪ್ರಕಾರ, ಪ್ರತಿ ನಾಲ್ವರು ಫುಟ್‌ಬಾಲ್ ಪ್ರೇಮಿಗಳ ಪೈಕಿ ಒಬ್ಬರು ಸೆಕ್ಸ್ ಸಮಯದಲ್ಲೂ ಫುಟ್‌ಬಾಲ್ ಆಟಗಾರರನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಸೆಕ್ಸ್ ಸಮಯದಲ್ಲಿ ಫುಟ್‌ಬಾಲ್ ಪ್ರೇಮಿಗಳು ಯಾವೆಲ್ಲ ಆಟಗಾರರ ಬಗ್ಗೆ ಯೋಚಿಸುತ್ತಿರುತ್ತಾರೆ ಎಂಬುದರ ವಿವರ ಇಲ್ಲಿದೆ ನೋಡಿ...

‘ಫ್ರೀ ಸೂಪರ್ ಟಿಪ್ಸ್’ ಸಂಸ್ಥೆಯಿಂದ ಸುಮಾರು 2 ಸಾವಿರ ಫುಟ್‌ಬಾಲ್ ಪ್ರೇಮಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಶೇ. 26ರಷ್ಟು ಮಂದಿ ಬೆಡ್‌ರೂಂನಲ್ಲೂ ತಾವು ಇಂಗ್ಲೆಂಡ್ ಫುಟ್‌ಬಾಲ್ ತಾರೆ ಡೇವಿಡ್ ಬೆಕ್‌ಹ್ಯಾಂರನ್ನು ನೆನಪಿಸಿಕೊಳ್ಳುತ್ತೇವೆ ಎಂದಿದ್ದಾರೆ. ಫುಟ್‌ಬಾಲ್ ಪ್ರೇಮಿಗಳು ಸೆಕ್ಸ್ ಸಮಯದಲ್ಲೂ ನೆನಪು ಮಾಡಿಕೊಳ್ಳುವ ಅಗ್ರ 10 ಆಟಗಾರರ ಪೈಕಿ ಬೆಕ್‌ಹ್ಯಾಂ ಅಗ್ರಸ್ಥಾನ ಪಡೆದಿದ್ದಾರೆ. 45 ವರ್ಷದ ಬೆಕ್‌ಹ್ಯಾಂ ಈಗಾಗಲೆ ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ಮ್ಯಾಂಚೆಸ್ಟರ್ ಯುನೈಟೆಡ್‌ನ ಶೇ. 23ರಷ್ಟು ಫುಟ್‌ಬಾಲ್ ಪ್ರೇಮಿಗಳಿಗೆ ಅವರು ಈಗಲೂ ಕಾಡುತ್ತಿರುತ್ತಾರಂತೆ. ಲಿವರ್‌ಪೂಲ್‌ನ ಶೇ. 32ರಷ್ಟು ಅಭಿಮಾನಿಗಳಿಗೂ ಬೆಕ್‌ಹ್ಯಾಂ ನೆನಪಾಗುತ್ತಿರುತ್ತಾರಂತೆ.

ಫುಟ್‌ಬಾಲ್ ಪ್ರೇಮಿಗಳು ಸೆಕ್ಸ್ ಸಮಯದಲ್ಲೂ ನೆನಪು ಮಾಡಿಕೊಳ್ಳುವ ಅಗ್ರ 10 ಆಟಗಾರರ ಪೈಕಿ ಪೋರ್ಚುಗಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ (ಶೇ. 20) ಎರಡನೇ ಸ್ಥಾನದಲ್ಲಿದ್ದಾರೆ. ಟೋಟ್ಟೆನ್ಹಯಾಂ ಆಟಗಾರ ಹ್ಯಾರಿ ಕೇನ್ (ಶೇ. 16) ಮೂರನೇ ಸ್ಥಾನದಲ್ಲಿದ್ದಾರೆ. ಮತ್ತೋರ್ವ ಬ್ರಿಟಿಷ್ ಆಟಗಾರ ಗರೇಥ್ ಬೇಲ್ (ಶೇ. 13) ನಾಲ್ಕನೇ ಸ್ಥಾನದಲ್ಲಿದ್ದಾರೆ. ಅರ್ಜೆಂಟೀನಾ ತಾರೆ ಲಿಯೋನೆಲ್ ಮೆಸ್ಸಿ (ಶೇ. 11) 5ನೇ ಸ್ಥಾನ ಗಳಿಸಿದ್ದಾರೆ. ಟೋಟ್ಟೆನ್‌ಹ್ಯಾಂ ಆಟಗಾರ ಡೇಲೆ ಅಲಿ (ಶೇ. 10), ಸ್ಪೇನ್ ಆಟಗಾರ ಡೇವಿಡ್ ಡಿ ಗೆಯಾ (ಶೇ.9), ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರ ಮಾರ್ಕಸ್ ರಶ್‌ೆರ್ಡ್ (ಶೇ. 8), ಅರ್ಜೆಂಟೀನಾದ ಸೆರ್ಗಿಯೋ ಆಗ್ಯುರೊ (ಶೇ. 8), ಮ್ಯಾಂಚೆಸ್ಟರ್ ಯುನೈಟೆಡ್‌ನ ರಹೀಮ್ ಸ್ಟರ್ಲಿಂಗ್ (ಶೇ. 7) ಅನಂತರದ ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net