More

    ಕೋರ್ಟ್ ವಿಚಾರಣೆಯಲ್ಲಿ ಲೇಡಿ ಜಡ್ಜ್​​ಗೆ ಲವ್ ಪ್ರಪೋಸ್ ಮಾಡಿದ ಕಳ್ಳ

    ಅಮೆರಿಕ: ಕಳ್ಳತನ ಮಾಡಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಳ್ಳ ನ್ಯಾಯಾಲಯದಲ್ಲಿ ನ್ಯಾಯಾಧೀಶರು ತೀರ್ಪು ನೀಡುತ್ತಿರುವಾಗಲೇ ನ್ಯಾಯಾಧೀಶರ ಬಳಿ ಪ್ರೇಮ ನೀವೆದನೆ ಮಾಡಿದ್ದಾನೆ. ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಈ ಘಟನೆಯ ವಿಡಿಯೋ ವರ್ಷಗಳ ನಂತರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನ್ಯಾಯಾಧೀಶರು ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಮಹಿಳಾ ನ್ಯಾಯಾಧೀಶರಿಗೆ ಕಳ್ಳತನದ ಆರೋಪಿ ಕಳ್ಳನೊಬ್ಬ ಐ ಲವ್ ಯೂ ಎಂದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹ ವಿಚಿತ್ರ ಮತ್ತು ಅನಿರೀಕ್ಷಿತ ಘಟನೆಗೆ ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಕೋರ್ಟ್ ಸಾಕ್ಷಿಯಾಗಿದೆ.

    ವೀಡಿಯೊದಲ್ಲಿ ಕಳ್ಳತನದ ಆರೋಪಿ ಡೆಮೆಟ್ರಿಯಸ್ ಲೂಯಿಸ್ ಒಂದು ಕಡೆ ಮತ್ತು ಮಹಿಳಾ ನ್ಯಾಯಾಧೀಶೆ ತಬಿತಾ ಬ್ಲ್ಯಾಕ್‌ಮ್ಯಾನ್ ವಿಚಾರಣೆ ನಡೆಸುತ್ತಿದ್ದರು. ಜೂಮ್​​ ಮೂಲಕವಾಗಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ನ್ಯಾಯಾಧೀಶರು ವರ್ಚುವಲ್ ನ್ಯಾಯಾಲಯದ ಮೂಲಕ ತೀರ್ಪನ್ನು ಓದಲು ಪ್ರಾರಂಭಿಸಿದಾಗ, ಆತ ನೀವು ತುಂಬಾ ಸುಂದರವಾಗಿದ್ದೀರಿ, ಐ ಲವ್ ಯೂ ಎಂದು ಪ್ರೀತಿಯ ಪ್ರಸ್ತಾಪವನ್ನು ಮಾಡಿದನು. ಆರೋಪಿ ಹೀಗೆ ಹೇಳಿದಾಗ ಸ್ವಲ್ಪ ವಿಚಲಿತರಾದ ಮಹಿಳಾ ನ್ಯಾಯಾಧೀಶರು ನಕ್ಕರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

    ಅಪರಾಧಕ್ಕೆ ಶಿಕ್ಷೆ ಪ್ರಕಟಿಸುತ್ತಿರುವ ನ್ಯಾಯಾಲಯದ ನ್ಯಾಯಾಧೀಶರ ಜತೆ ಆರೋಪಿ ಅನುಚಿತ ವರ್ತನೆ ತೋರಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
    ಲೂಯಿಸ್ ಕಳ್ಳತನಕ್ಕೆ ಕಾರಣಗಳನ್ನು ಮತ್ತು ನ್ಯಾಯಾಲಯದಲ್ಲಿ ಅವನ ವರ್ತನೆಯನ್ನು ತಿಳಿದ ನಂತರ, ನ್ಯಾಯಾಧೀಶರಾದ ತಬಿತಾ ಅವರು 5 ಸಾವಿರ ಡಾಲರ್ ದಂಡವನ್ನು ಪಾವತಿಸಲು ಆದೇಶಿಸಿದರು. ಲೂಯಿಸ್ ಈಗಾಗಲೇ 4 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ. ನ್ಯಾಯಾಧೀಶೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಶಿಕ್ಷೆಯಾಗದಿದ್ದರೂ, ಈ ತಮಾಷೆಯ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಡ್ರಗ್ ಓವರ್ ಡೋಸ್ ಅವಾಂತರ; ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಪೋರ್ನ್ ಸ್ಟಾರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts