

Independence Day : ಆಗಸ್ಟ್ 15ರಂದು ಭಾರತವು ತನ್ನ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸುತ್ತಿದ್ದು, " ನಯ ಭಾರತ್ " ಥೀಮ್ನೊಂದಿಗೆ ಸಜ್ಜಾಗುತ್ತಿದೆ. ಇದು ಸಮ್ಋದ್ದೀ, ಸುರಕ್ಷತೆ ಮತ್ತು ಸ್ವಾವಲಂಬಿ ಭವಿಷ್ಯದ ಮೇಲೆ ಕೇಂದ್ರಿಕರಿಸುತ್ತದೆ. ಹಾಗೇ ಯಶಸ್ವಿ ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸುತ್ತಿದೆ. ಇನ್ನು ನರೇಂದ್ರ ಮೋದಿಯವರು ದೆಹಲಿಯ ಐತಿಹಾಸಿಕ ಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸ ಮಾತನಾಡಲಿದ್ದಾರೆ.
2047 ರ ವೇಳೆಗೆ ಭಾರತ ಸರ್ಕಾರದ ವೀಕ್ಷಿತ್ ಭಾರತ್ ದೃಷ್ಟಿಕೋನವನ್ನು ಸಾಧಿಸುವ ದೃಢಸಂಕಲ್ಪವನ್ನು ಸಂಕೇತಿಸುವ ಸಲುವಾಗಿ ರಾಷ್ಟ್ರವು ಹೆಜ್ಜೆ ಇಡುತ್ತಿರುವುದರಿಂದ " ನಯ ಭಾರತ್ " ಎಂದು ಹೆಸರಿಸಲಾಗಿದೆ ಎಂದು ಬುಧವಾರ ರಕ್ಷಣಾ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ. ಇನ್ನು ಈ ವಿಷಯವು ಭಾರತದ ಬೆಳೆಯುತ್ತಿರುವ ಆರ್ಥಿಕ ಶಕ್ತಿ, ಭದ್ರತಾ ಸಿದ್ದತೆ ಹಾಗೂ ಅಭಿವೃದ್ದಿ ವೇಗದಲ್ಲಾಗುತ್ತಿರುವ ಬದಲಾವಣೆಗಳನ್ನು ಪ್ರೊತ್ಸಾಯಿಸುತ್ತದೆ.
ಈ ವರ್ಷದ ಸ್ವಾತಂತ್ರಯ ದಿನಾಚರಣೆಯಲ್ಲಿ ಆಪರೇಷನ್ ಸಿಂಧೂರವನ್ನು ಗೌರವಿಸಲಿದ್ದು, ಅದರ ಲೋಗೋವನ್ನು ಜ್ಞಾನಪಥ್‌ನಲ್ಲಿರುವ ಗೋಡೆಗಳಿಗೆ ಹಾಗೂ ಅಧಿಕೃತ ಆಮಂತ್ರಣ ಪತ್ರಗಳಲ್ಲಿ ನಮೂದಿಸಲಾಗಿದೆ. ನಯಾ ಭಾರತದ ಉದಯವನ್ನು ಸಂಕೇತಿಸುವ ಐಕಾನಿಕ್ ಚೆನಾಬ್ ಸೇತುವೆಯ ವಾಟರ್ಮಾರ್ಕ್ನ್ನು ಸಹ ಈ ಆಮಂತ್ರಣ ಕಾರ್ಡ್ಗಳು ಒಳಗೊಂಡಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಧ್ವಜಾರೋಹಣ ಮಾಡಿ, ಈ ವೇಳೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಈ ಸಂದರ್ಭದಲ್ಲಿ ದೇಶಾದ್ಯಂತ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.(ಏಜೆನ್ಸೀಸ್)